ಹೂವಿನಹಡಗಲಿ: ತಾಲ್ಲೂಕಿನ ಮದಲಗಟ್ಟಿ ಸುಕ್ಷೇತ್ರದಲ್ಲಿ ಸಮುದಾಯ ಭವನ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ಇ.ತುಕಾರಾಂ ಶನಿವಾರ ಭೂಮಿಪೂಜೆ ನೆರವೇರಿಸಿದರು.

‘ಮದಲಗಟ್ಟಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಜಿಂದಾಲ್ ಕಂಪೆನಿಯ ಸಿಎಸ್ಆರ್ ನಿಧಿಯಡಿ ₹50 ಲಕ್ಷ ಬಿಡುಗಡೆಯಾಗಿದೆ. ಹೆಚ್ಚುವರಿ ₹50 ಲಕ್ಷ ಅನುದಾನ ಒದಗಿಸಿ, ಸುಸಜ್ಜಿತ ಸಮುದಾಯ ಭವನ, ಸ್ನಾನಗೃಹ, ಶೌಚಾಲಯ ನಿರ್ಮಿಸುತ್ತೇವೆ. ಭಕ್ತರು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಂಸದರು ಹೇಳಿದರು.

ಮಾಜಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಮಾತನಾಡಿ, ಮದಲಗಟ್ಟಿ ಸುಕ್ಷೇತ್ರಕ್ಕೆ ನೆರೆಯ ಜಿಲ್ಲೆಗಳಿಂದ ಅಪಾರ ಭಕ್ತರು ಬರುತ್ತಾರೆ. ಮೂಲಸೌಕರ್ಯ ಕಲ್ಪಿಸುವ ಅಗತ್ಯವಿದ್ದು, ಸ್ಥಳೀಯರ ನಿರೀಕ್ಷೆ ಮೀರಿ ಅನುದಾನ ನೀಡಿರುವ ಸಂಸದ ತುಕಾರಾಂ ಅವರನ್ನು ಅಭಿನಂದಿಸುವೆ ಎಂದರು.

ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಂ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಿ.ಶಿವಯೋಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಟವಾಳಗಿ ಕೊಟ್ರೇಶ, ಬಿ.ಹನುಮಂತಪ್ಪ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ವಿಜಯಕುಮಾರ್, ಮುಖಂಡರಾದ ಅಕ್ಕಿ ತೋಟೇಶ, ಸೋಗಿ ಹಾಲೇಶ, ಎಸ್.ದೂದನಾಯ್ಕ, ಕುರಿ ಶಿವಮೂರ್ತಿ, ಪಿ.ಟಿ.ಭರತ್, ಕೆ.ಎಸ್.ಶಾಂತನಗೌಡ ಪಾಲ್ಗೊಂಡಿದ್ದರು.

ಅಂಚೆ ಕಚೇರಿಗೆ ₹1.60 ಕೋಟಿ ಮಂಜೂರು ಹೂವಿನಹಡಗಲಿ: ಪಟ್ಟಣದಲ್ಲಿ ಅಂಚೆ ಕಚೇರಿ ನಿರ್ಮಾಣಕ್ಕೆ ₹1.60 ಕೋಟಿ ಮಂಜೂರಾಗಿದೆ ಎಂದು ಸಂಸದ ಇ.ತುಕಾರಾಂ ತಿಳಿಸಿದರು. ಮುಂದಿನ ತಿಂಗಳು ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಅಂಚೆ ಇಲಾಖೆಗೆ ಕಾಯ್ದಿಟ್ಟ ನಿವೇಶನದಲ್ಲಿ ಸುಸಜ್ಜಿತ ಕಚೇರಿ ನಿರ್ಮಿಸಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.