ಹರಪನಹಳ್ಳಿ ತಾಲ್ಲೂಕು ಗರ್ಭಗುಡಿ ಗ್ರಾಮದ ರೈತರ ಜಮೀನನ್ನು ಬಾಡಿಗೆ ಪಡೆದು ಸಾಮಗ್ರಿ ಇರಿಸಲಾಗಿದೆ
ಕಾಮಗಾರಿ ಈಗಿನ ಸ್ಥಿತಿ
ತುಂಗಭದ್ರಾ ನದಿ ದಡದಲ್ಲಿ ತಡೆಗೋಡೆ, ಸೇತುವೆ ನಿರ್ಮಾಣಕ್ಕಾಗಿ 3 ಪಿಲ್ಲರ್ ಕಾಮಗಾರಿ ಮಾತ್ರ ಪೂರ್ಣಗೊಂಡಿವೆ. ಸೇತುವೆ ನಿರ್ಮಾಣಕ್ಕೆ ಬಳಸುವ ಸ್ಲ್ಯಾಬ್‌ಗಳನ್ನು ತಯಾರಿಸಿ, ರೈತರ ಜಮೀನುಗಳಲ್ಲಿ ಇರಿಸಲಾಗಿದೆ. ಇನ್ನೂ 20 ಕಮಾನು, 8.4 ಮೀಟರ್ ಅಗಲದ ಸೇತುವೆ, 7.50 ಮೀಟರ್ ರಸ್ತೆ ನಿರ್ಮಿಸುವ ಕೆಲಸ ಬಾಕಿಯಿದೆ. ಈ ಯೋಜನೆ ಪೂರ್ಣಗೊಂಡರೆ ರಾಣೆಬೆನ್ನೂರು-ಹರಪನಹಳ್ಳಿಗೆ ನೇರ ಸಂಪರ್ಕ ಲಭ್ಯವಾಗುತ್ತದೆ. ಗರ್ಭಗುಡಿ, ನಂದ್ಯಾಲ, ನಿಟ್ಟೂರು, ತಾವರಗುಂದಿ, ಹಲವಾಗಲು, ಕಡತಿ ಹಾಗೂ ರಾಣೆಬೆನ್ನೂರು ತಾಲ್ಲೂಕಿನ ಹಳ್ಳಿಗಳ ನೀರಾವರಿಗೆ ಅನುಕೂಲವಾಗುತ್ತದೆ.