ಸಿರುಗುಪ್ಪ: ‘ಭಾರತದ ಹಿಂದೂ ಧರ್ಮದಲ್ಲಿ ವೇದ ಉಪನಿಷತ್ತು, ಪುರಾಣಗಳಲ್ಲಿ ವೈಚಾರಿಕ ಕ್ರಾಂತಿ ಅಡಗಿದೆ’ ಎಂದು ಹಾಲ್ವಿ ಮಠಾಧಿಪತಿ ಅಭಿನವ ಮಹಾಂತ ಸ್ವಾಮಿ ಹೇಳಿದರು.

ತಾಲ್ಲೂಕಿನ ಕರ್ಚಿಗನೂರು ಗ್ರಾಮದ ಹಾಲ್ವಿ ಮಹಾಂತೇಶ್ವರ ಮಠದಲ್ಲಿ ಹಿಂದೂ ಸಮಿತಿ, ಕರ್ಚಿಗನೂರು, ಬಗ್ಗೂರು ಮಂಡಲ ವತಿಯಿಂದ ಭಾನುವಾರ ಸಂಜೆ ನಡೆದ ಹಿಂದೂ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ‘ಹಿಂದೂಗಳು ಜಾತಿ ಜಾತಿಗಳ ಹೆಸರಿನಲ್ಲಿ ಬೇರ್ಪಡಬಾರದು, ಎಲ್ಲರೂ ಒಂದಾಗಬೇಕು’ ಎಂದರು.

ಹಿಂದು ಸಮಿತಿ ಜಿಲ್ಲಾ ಸಂಚಾಲಕ ಪ್ರಸನ್ನ ಮಾತನಾಡಿ, ‘ದೇಶದ ಸಂಪತ್ತು, ಪ್ರಕೃತಿ ಪರಿಸರ, ನದಿಗಳು, ಐತಿಹಾಸಿಕ ಕೋಟೆಗಳು ದೇವಾಲಯಗಳು ಎಲ್ಲವನ್ನು ಉಳಿಸಿ ಬೆಳೆಸುವ ಮೂಲಕ ದೇಶಪ್ರೇಮ ನಮ್ಮ ಸಂಸ್ಕೃತಿಯನ್ನು ಕಾಪಾಡುವ ಹೊಣೆ ನಮ್ಮದಾಗಬೇಕು’ ಎಂದು ಕರೆ ನೀಡಿದರು.

ಗ್ರಾಮದಲ್ಲಿ ಕೇಸರಿ ಶಾಲು ಹಾಕಿಕೊಂಡು ದೇಶ ಧರ್ಮ ಘೋಷಣೆಗಳನ್ನು ಕೂಗುತ್ತ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದರು.

ಹಿಂದೂ ಸಮಿತಿಯ ಉಪಾಧ್ಯಕ್ಷ ಚಾಗಿ ಸುಬ್ಬಯ್ಯ, ಸಂಚಾಲಕರಾದ ಆರ್.ಸದಾಶಿವ, ತ್ರಿವೇಣಿ, ಜೆ. ನರಸಿಂಹಮೂರ್ತಿ, ಎರ್ರೆಪ್ಪಗೌಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.