ಹೊಸಪೇಟೆ (ವಿಜಯನಗರ): ಆತ್ಮ ನಿರ್ಭರ ಅಭಿಯಾನದಡಿಯಲ್ಲಿ ಕೇಂದ್ರ ಸರ್ಕಾರವು ಕೃಷಿ ಮೂಲ ಸೌಕರ್ಯ ನಿಧಿ ಅಡಿಯಲ್ಲಿ ಹಣಕಾಸು ಸೌಲಭ್ಯ ಒದಗಿಸುತ್ತಿದ್ದು, ಮಾರ್ಚ್ಗೆ ಯೋಜನೆ ಕೊನೆಗೊಳ್ಳಲಿದೆ. ಇರುವ ಎರಡೂವರೆಗೆ ತಿಂಗಳ ಅವಧಿಯಲ್ಲಿ ಸಾಕಷ್ಟು ಮಂದಿ ಕನಸು ನನಸು ಮಾಡಿಕೊಳ್ಳುವುದು ಸಾಧ್ಯವಿದೆ.

ಇದು 2020–21ರಲ್ಲಿ ಆರಂಭವಾದ ಯೋಜನೆಯಾಗಿದ್ದು, 2026ರ ಮಾರ್ಚ್ 31ರಂದು ಕೊನೆಗೊಳ್ಳಲಿದೆ. ಮುಂದೆಯೂ ಮತ್ತೆ ಐದು ವರ್ಷದ ಅವಧಿಗೆ ಮುಂದುವರಿಯುವ ಸಾಧ್ಯತೆ ಇದೆ. ಹಾಗಿದ್ದರೂ ಶೀತಲ ಗೃಹ, ಗೋದಾಮು, ಜೇನು ಸಂಸ್ಕರಣಾ ಘಟಕ ಸಹಿತ ಕೃಷಿ, ತೋಟಗಾರಿಕೆ ಸಂಬಂಧಿಸಿ ದಂತೆ ಮೂಲಸೌಲಭ್ಯ ಸಿದ್ಧಪಡಿಸುವ ಮನಸ್ಸಿರುವ ಆಸಕ್ತರಿಗೆ ಈ ಕೃಷಿ ಮೂಲಸೌಕರ್ಯ ನಿಧಿ ವರದಾನವಾಗಿ ಪರಿಣಮಿಸಿದೆ.

‘ಜಿಲ್ಲೆಯಲ್ಲಿ ಈಗಾಗಲೇ 50ಕ್ಕೂ ಅಧಿಕ ಮಂದಿಗೆ ಇದರ ಪ್ರಯೋಜನ ಪಡೆದಿದ್ದಾರೆ. ಇಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲ. ಅರ್ಜಿ ಸಲ್ಲಿಸುವಿಕೆ ವ್ಯವಸ್ಥೆ ಸಹ ಬಹಳ ಸರಳವಾಗಿದೆ. ಆಸಕ್ತರು ಇದರ ಸದ್ಬಳಕೆ ಮಾಡಿಕೊಳ್ಳಬಹುದು’ ಎಂದು ನಬಾರ್ಡ್ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ವಿಜಯಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ರೈತರು, ರೈತ ಉತ್ಪಾದಕ ಸಂಸ್ಥೆಗಳು, ಕೃಷಿ ಉದ್ಯಮಿಗಳು, ಪ್ರಾಂತೀಯ ಸಹಕಾರ ಒಕ್ಕೂಟಗಳು, ನವೋ ದ್ಯಮಿಗಳು, ಪ್ರಾಥಮಿಕ ಕೃಷಿ ಕ್ರೆಡಿಟ್ ಸಹಕಾರ ಸಂಘಗಳು, ವಿವಿಧೋದ್ದೇಶ ಸಹಕಾರ ಸಂಘಗಳ ಸಹಿತ ಹಲವರು ಅರ್ಹ ಫಲಾನುಭವಿಗಳಾಗಿದ್ದಾರೆ.

ರಾಷ್ಟ್ರೀಕೃತ ಬ್ಯಾಂಕ್ಗಳು, ಸೆಡ್ಯೂಲ್ಡ್ ಬ್ಯಾಂಕ್ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು, ಸಣ್ಣ ಹಣಕಾಸು ಬ್ಯಾಂಕ್ಗಳು, ಬ್ಯಾಂಕೇತರ ಹಣಕಾಸು ಸಂಸ್ಥೆ, ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮಗಳಿಂದ ಸಾಲ ಪಡೆಯಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕೃಷಿ/ ತೋಟಗಾರಿಕೆ ಕ್ಷೇತ್ರದಲ್ಲಿ ಮೂಲಸೌಲಭ್ಯ ಒದಗಿಸುವ ಆಸಕ್ತಿ ಇರುವವರಿಗೆ ಇದೊಂದು ಉತ್ತಮ ಯೋಜನೆ, ಸ್ವಂತ ನಿವೇಶನವೇ ಬೇಕೆಂದಿಲ್ಲ, ಭೋಗ್ಯಕ್ಕೆ ಪಡೆದ ಸ್ಥಳದಲ್ಲಿ ಸ್ಥಾಪಿಸುವ ಘಟಕಕ್ಕೂ ಸಾಲ ಸಿಗುತ್ತದೆ.
ವಿಜಯ ಕುಮಾರ್, ನಬಾರ್ಡ್ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ

www.agriinfra.dac.gov.in ಮೂಲಕ ಅರ್ಜಿ ಸಲ್ಲಿಕೆ

ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಮೂಲಕ ಬಡ್ಡಿ ಸಬ್ಸಿಡಿ ವಿತರಣೆ

ಮಾಹಿತಿಗೆ ಸಮೀಪದ ಕೃಷಿ/ ತೋಟಗಾರಿಕೆ ಕಚೇರಿ ಸಂಪರ್ಕಿಸಿ

ಶೇ 3ರಷ್ಟು ಬಡ್ಡಿ ರಿಯಾಯಿತಿ

ಕೃಷಿ ಮೂಲಸೌಲಭ್ಯ ನಿಧಿ ಯೋಜನೆಯಡಿ ₹2 ಕೋಟಿಯವರೆಗೆ ಸಾಲ ಪಡೆಯಬಹುದು, ಬ್ಯಾಂಕ್ಗಳು ಗರಿಷ್ಠ ಶೇ 9ರಷ್ಟು ಬಡ್ಡಿ ಮಾತ್ರ ವಿಧಿಸಬೇಕು. ಈ ಪೈಕಿ ಶೇ 3ರಷ್ಟು ಬಡ್ಡಿಯನ್ನು ಕೇಂದ್ರ ಸರ್ಕಾರವೇ ಭರಿಸುತ್ತದೆ. ಗರಿಷ್ಠ ಏಳು ವರ್ಷಗಳ ಅವಧಿಗೆ ಸಾಲ ಪಡೆಯುವುದು ಸಾಧ್ಯವಿದೆ.

ಇಲ್ಲಿ ಪಡೆಯುವ ಸಾಲಕ್ಕೆ ಕೇಂದ್ರದ ಸಣ್ಣ, ಅತಿಸಣ್ಣ, ಮಧ್ಯಮ ಕೈಗಾರಿಕೆ (ಎಂಎಸ್ಎಂಇ) ಸಚಿವಾಲಯಕ್ಕೆ ಒಳಪಟ್ಟ ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ ಫಾರ್ ಮೈಕ್ರೊ ಆ್ಯಂಡ್ ಸ್ಮಾಲ್ ಎಂಟರ್ಪ್ರೈಸಸ್ (ಸಿಜಿಟಿಎಂಎಸ್ಇ) ಖಾತರಿ ಲಭ್ಯವಿರುವುದು ಇನ್ನೊಂದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.