ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲ್ಲಲು ದೃಢ ಸಂಕಲ್ಪ ಬೇಕು: UPSCಯಲ್ಲಿ 949ನೇ ರ್‍ಯಾಂಕ್‌ ಪಡೆದ ಕಾರ್ತಿಕ್‌

Published 19 ಏಪ್ರಿಲ್ 2024, 4:41 IST
Last Updated 19 ಏಪ್ರಿಲ್ 2024, 4:41 IST
ಅಕ್ಷರ ಗಾತ್ರ

ಬಳ್ಳಾರಿ: ‘ಏನಾದರೂ ಒಂದನ್ನು ಗೆಲ್ಲಬೇಕಿದ್ದರೆ, ಗೆಲ್ಲಲೇಬೇಕೆಂಬ ದೃಢ ಸಂಕಲ್ಪ ಇರಬೇಕು. ಆಗ ಮಾತ್ರ ನಾವು ಅದರಲ್ಲಿ ಗೆಲ್ಲಲು ಸಾಧ್ಯ. ಅದಕ್ಕಾಗಿ ಕಠಿಣ ಪರಿಶ್ರಮ ಇರಲೇಬೇಕು...’ 

ಇದು ಯುಪಿಎಸ್‌ಸಿಯಲ್ಲಿ 949ನೇ ರ್‍ಯಾಂಕ್‌ ಪಡೆದಿರುವ ಬಳ್ಳಾರಿ ಯುವ ವೈದ್ಯ ಕಾರ್ತಿಕ್‌ ಡಿ. ಅವರ ಮಾತುಗಳು. 

ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ, ಪ್ರೇರಣೆ, ಸಾಧನೆ ಬಗ್ಗೆ  ‘ಪ್ರಜಾವಾಣಿ’ ಜತೆಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಈ ಸಂವಾದದ ಪೂರ್ಣ ಪಾಠ ಇಲ್ಲಿದೆ. 

ಪ್ರ

ನಿಮ್ಮ ಮತ್ತು ನಿಮ್ಮ ಕುಟುಂಬದ ಬಗ್ಗೆ ಹೇಳಿ

ನನ್ನ ತಂದೆ ಡಾ. ಜಗನ್ನಾಥ್‌. ಸರ್ಕಾರಿ ವೈದ್ಯರಾಗಿದ್ದ ಅವರು ಸದ್ಯ ನಿವೃತ್ತರು. ತಾಯಿ ಜಾನಕಿ. ನಮ್ಮದು ಸುಶಿಕ್ಷಿತ ಕುಟುಂಬ. ನನ್ನ ತಾತ ಬಳ್ಳಾರಿಯಲ್ಲಿ ಪೊಲೀಸ್‌ ಅಧಿಕಾರಿಯಾಗಿದ್ದರು. ನನ್ನ ಕೌಟುಂಬಿಕ ಪರಿಸರದ ಕಾರಣ ನಾನೂ ಸರ್ಕಾರಿ ಕೆಲಸ ಸೇರಬೇಕೆಂಬ ಮನೋಭಾವ ಚಿಕ್ಕಂದಿನಿಂದಲೇ ಬೆಳೆದಿತ್ತು.  

ಪ್ರ

ಪೂರ್ವಭಾವಿ ಪರೀಕ್ಷೆಗೆ ಸಿದ್ಧತೆ ಹೇಗಿತ್ತು

ಪೂರ್ವಭಾವಿ ಪರೀಕ್ಷೆಗೆ ನಾನೇ ಅಭ್ಯಾಸ ಆರಂಭಿಸಿದ್ದೆ. ಆಗ ಯಾವುದೇ ತರಬೇತಿಗೆ ಸೇರಿರಲಿಲ್ಲ. ನಿತ್ಯ 6–8 ಗಂಟೆಗಳ ಕಾಲ ಓದುತ್ತಿದ್ದೆ. ಯುಪಿಎಸ್‌ಸಿ ಪರೀಕ್ಷೆ ಎದುರಿಸಿದ್ದವರೊಂದಿಗೆ ನಿರಂತರವಾಗಿ ಸಂವಹನ ನಡೆಸುತ್ತಿದ್ದೆ. 

ಪ್ರ

ಮುಖ್ಯಪರೀಕ್ಷೆ ಸಿದ್ಧತೆ ಹೇಗಿತ್ತು ?

ಆರಂಭದಲ್ಲಿ ಆನ್‌ಲೈನ್‌ ತರಬೇತಿಗೆ ಸೇರಿದೆ. ನಂತರ  ಹೈದರಾಬಾದ್‌ ಮೂಲದ ತರಬೇತಿ ಸಂಸ್ಥೆಯಿಂದ ತರಬೇತಿ ಪಡೆದೆ.  ಮೊದಲ ಮೂರು ಪರೀಕ್ಷೆಗಳನ್ನು ನಾನು ವೈದ್ಯಕೀಯ ವಿಜ್ಞಾನ ವಿಷಯದಲ್ಲಿ ಬರೆದಿದ್ದೆ. ನಂತರ ನಾನು ಮಾನವಶಾಸ್ತ್ರ ವಿಷಯವನ್ನು ಆಯ್ಕೆ ಮಾಡಿಕೊಂಡೆ. ಅದರಲ್ಲಿ ಸಫಲನಾದೆ. 

ಪ್ರ

ಸಂದರ್ಶನದ ಅನುಭವ ಹೇಗಿತ್ತು ?

ನಾನು ಕೆ.ಸಿ ಜನರಲ್‌ ಆಸ್ಪತ್ರೆ, ಬಿಬಿಎಂಪಿಯ ‘ನಮ್ಮ ಕ್ಲಿನಿಕ್‌’ನಲ್ಲಿ ವೈದ್ಯನಾಗಿದ್ದವನು. ಇದೇ ವಿಷಯವನ್ನು ಸಂದರ್ಶನದಲ್ಲಿ ನನಗೆ ಕೇಳಲಾಯಿತು.  ಬಿಬಿಎಂಪಿಯ ಆರೋಗ್ಯ ಇಲಾಖೆ ಮತ್ತು ಮೆಡಿಕಲ್‌ ಕಾಲೇಜುಗಳನ್ನು ಹೇಗೆ ಅಭಿವೃದ್ಧಿ ಮಾಡಬಹುದು ಎಂದು ಸಂದರ್ಶನದಲ್ಲಿ ಪ್ರಶ್ನೆ ಕೇಳಿದ್ದರು.    

ಪ್ರ

ಓದುವ ಪ್ಲ್ಯಾನ್‌’ ಹೇಗಿತ್ತು ?

ಮುಖ್ಯಪರೀಕ್ಷೆಯಲ್ಲಿ ನಾನು 60:40 ಈ ಸೂತ್ರದಲ್ಲಿ ತಯಾರಿ ನಡೆಸುತ್ತಿದ್ದೆ. ಸಾಮಾನ್ಯ ಅಧ್ಯಯನಕ್ಕೆ ಶೇ 40ರಷ್ಟು ಸಯಮ, ಶ್ರಮ ಮತ್ತು ಐಚ್ಛಿಕ ವಿಷಯಕ್ಕೆ 60ರಷ್ಟು ಸಮಯ, ಶ್ರಮ ಹಾಕಿ ಓದುತ್ತಿದ್ದೆ. ಈ ಸೂತ್ರ ಫಲ ನೀಡಿತು.  

ಪ್ರ

ದಿನಪತ್ರಿಕೆಗಳ ಓದು ಎಷ್ಟು ಅವಶ್ಯಕ ?

ದೇಶ ವಿದೇಶಗಳ ಮಾಹಿತಿಗೆ ಇಂಗ್ಲಿಷ್‌ ಪತ್ರಿಕೆಗಳನ್ನು ಓದುತ್ತಿದ್ದೆ. ಸ್ಥಳೀಯ ಸಂಗತಿಗಳನ್ನು ತಿಳಿಯಲು ಕನ್ನಡ ದಿನಪತ್ರಿಕೆಗಳನ್ನು ಓದುತ್ತಿದ್ದೆ. ಯಪಿಎಸ್‌ಸಿ ತಯಾರಿಗೆ ಪತ್ರಿಕೆ ಓದುವುದು ಅಗತ್ಯ.  

ಪ್ರ

ಎಷ್ಟನೇ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿದೆ ?

ನನ್ನ ಐದನೇ ಪ್ರಯತ್ನದಲ್ಲಿ ರ್‍ಯಾಂಕ್‌ ಸಿಕ್ಕಿದೆ. ಮೂರು ಬಾರಿ ಮುಖ್ಯ ಪರೀಕ್ಷೆ ಬರೆದಿದ್ದೆ. ಇದೇ ಮೊದಲ ಬಾರಿಗೆ ಸಂದರ್ಶನಕ್ಕೆ ಕರೆಯಲಾಗಿತ್ತು. ಅದರಲ್ಲಿ ನಾನು ಸಫಲನಾದೆ. ರ್‍ಯಾಂಕ್‌ ಉತ್ತಮಪಡಿಸಿಕೊಳ್ಳಲು ನಾನು ಮತ್ತೊಂದು ಪರೀಕ್ಷೆಗೂ ಸಿದ್ಧತೆ ನಡೆಸುತ್ತಿದ್ದೇನೆ. 

ಪ್ರ

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ನಿಮ್ಮ ಕಿವಿ ಮಾತೇನು ?

ನಿರಂತರ ಪರಿಶ್ರಮ ಬೇಕು.  ಮ್ಯಾರಥಾನ್‌ ರೀತಿಯಲ್ಲಿ ನಿಧಾನವಾಗಿ ಆರಂಭಿಸಿದರು, ಅಂತಿಮವಾಗಿ ಗುರಿಮುಟ್ಟಲೇಬೇಕಾದ ದೃಢ ನಿಲುವು ಇರಬೇಕು. ನಿರಂತರವಾಗಿ ಓದಬೇಕು. ಗೆಲ್ಲಬಲ್ಲೆ ಎಂಬ ದೃಢ ನಿರ್ಧಾರ ಬೇಕು. ನಾವೇ ಮೇಲು ಎಂಬ ಭಾವನೆ ಬಿಡಬೇಕು. ಎಲ್ಲರಿಂದ ದೂರ ಉಳಿದು ಓದುವುದಕ್ಕಿಂತಲೂ ಎಲ್ಲರೊಂದಿಗೆ ಕಲೆತು ಸಂವಹನ ನಡೆಸುತ್ತಾ ಅಭ್ಯಾಸ ನಡೆಸುವುದು ಸೂಕ್ತ. 

ಪ್ರ

ಕುಟುಂಬದ ಸಹಕಾರ ಹೇಗಿತ್ತು ?

 ಕುಟುಂಬದವರು, ಸ್ನೇಹಿತರು, ಶಿಕ್ಷಕರು ಈ ಮೂವರು ಯಪಿಎಸ್‌ಸಿ ಪರೀಕ್ಷೆಗೆ ಮೂರು ಆಧಾರ ಸ್ತಂಭಗಳು. ಇವರ ಸಹಕಾರದಿಂದಲೇ ನಾನು ಯಪಿಎಸ್‌ಸಿ ಪಾಸಾಗಲು ಸಾಧ್ಯವಾಯಿತು. ನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT