ಕಂಪ್ಲಿ: ಕರ್ನಾಟಕ ಜೈನ್ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಇಲ್ಲಿಯ ಜೈನ್ ಸೇವಾ ಟ್ರಸ್ಟ್ ಅಧ್ಯಕ್ಷ ಶಾಂತಿಲಾಲ್ ಸಿಂಘ್ವಿ ಒತ್ತಾಯಿಸಿದರು.

ಮಹಾವೀರ ಜಯಂತ್ಯುತ್ಸವ ನಿಮಿತ್ತ ಇಲ್ಲಿಯ ಶ್ರೀಮುನಿ ಸುರತ್ ಜೈನ್ ಶ್ವೇತಾಂಬರ ಮಂದಿರದಿಂದ ಭಗವಾನ್ ಮಹಾವೀರರ ಭಾವಚಿತ್ರ, ರಜತ ಪ್ರತಿಮೆ ಮೆರವಣಿಗೆ ಕಾರ್ಯಕ್ರಮಕ್ಕೆ ಮುನ್ನ ಅವರು ಮಾತನಾಡಿದರು.

‘ಕಳೆದ ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ನಿಗಮ ಅಥವಾ ಮಂಡಳಿ ಘೋಷಿಸದೇ ಸಮುದಾಯದ ನಿರೀಕ್ಷೆ ಹುಸಿಗೊಳಿಸಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆದ ಬಳಿಕ ಮಂದಿರದಲ್ಲಿ ಭಜನೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಶಾಸಕ ಜೆ.ಎನ್. ಗಣೇಶ್, ಪ್ರಮುಖರಾದ ಪಾರಸ್ಮಲ್ ಹುಂಡಿಯಾ, ಫತೇಕುಮಾರ್ ಬಾಫ್ಣಾ, ಅಮೃತ್ ಲಾಲ್ ಜೈನ್, ರಾಜು ಜೈನ್, ಹೀರಾಚಂದ್, ಜೈನ್ ಶ್ವೇತಾಂಬರ್ ಸಂಘ, ಜೈನ್ ಸೇವಾ ಟ್ರಸ್ಟ್, ಪದ್ಮಾವತಿ ಮಹಿಳಾ ಮಂಡಲ, ಬಾಲಾಶ್ರೀ ಮಹಿಳಾ ಮಂಡಲ, ಕಲಾಪೂರ್ಣ ಯುವಕ ಮಂಡಲದವರು ಹಾಜರಿದ್ದರು.

ತಾಲ್ಲೂಕು ಆಡಳಿತ: ಇಲ್ಲಿಯ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಮಹಾವೀರ ಜಯಂತ್ಯುತ್ಸವ ಆಚರಿಸಲಾಯಿತು.

ತಹಶೀಲ್ದಾರ್ ಎಸ್. ಶಿವರಾಜ, ಗ್ರೇಡ್-2 ತಹಶೀಲ್ದಾರ್ ಎಂ.ಆರ್. ಷಣ್ಮುಖ, ಸಿಬ್ಬಂದಿ, ಜೈನ ಸಮುದಾಯದ ಪ್ರಮುಖರಾದ ಶಾಂತಿಲಾಲ್ ಬಾಲಾರ್, ಶಾಂತಿಲಾಲ್ ಸಿಂಘ್ವಿ, ಗೌತಮ್ಚಂದ್ ಬಾಗ್ರೇಚಾ, ನವೀನ್ ಬಾಗ್ರೇಚಾ, ರಾಕೇಶ್ ಬಾಗ್ರೇಚಾ, ಚೇತನ್ ಹುಂಡಿಯಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.