ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗರಿಬೊಮ್ಮನಹಳ್ಳಿ: ಖಾಸಗಿ ಕೊಳವೆಬಾವಿಗಳ ಮೊರೆ

ಹಗರಿಬೊಮ್ಮನಹಳ್ಳಿ ತಾಲ್ಲೂಕು 51 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ
Published 14 ಮಾರ್ಚ್ 2024, 5:00 IST
Last Updated 14 ಮಾರ್ಚ್ 2024, 5:00 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ 51ಗ್ರಾಮಗಳಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

ಸೊನ್ನ, ಮಾದೂರು, ಸೀಗೇನಹಳ್ಳಿ, ತೆಲುಗೋಳಿ, ಹಂಪಸಾಗರ, ರಾಮೇಶ್ವರ ಬಂಡಿ, ಬಾಚಿಗೊಂಡನಹಳ್ಳಿ, ಬಲ್ಲಾಹುಣ್ಸಿ, ಮರಬ್ಬಿಹಾಳು, ಕೆಂಚಟನಹಳ್ಳಿ, ವರದಾಪುರ, ರಾಯರಾಳ ತಾಂಡಾ, ಮಾದೂರು ಗ್ರಾಮಗಳು ಸೇರಿದಂತೆ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಕೊಳವೆಬಾವಿಗಳಲ್ಲಿನ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಹಲವು ಗ್ರಾಮಗಳಲ್ಲಿ ಕೆರೆಕಟ್ಟೆಗಳು ಬತ್ತಿವೆ. ಹೊಸದಾಗಿ ಕೊಳವೆಬಾವಿಗಳನ್ನು ಕೊರೆಯಿಸಿದರೂ ನೀರು ಲಭ್ಯತೆ ಸಿಗದಾಗಿದೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಸಂಪರ್ಕ ವೈಯಕ್ತಿಕ ನಳಗಳನ್ನು ಪಡೆದಿದ್ದರೂ ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿರುವ ಜಾಕ್‍ವೆಲ್‍ಗಳು ನೀರಿಲ್ಲದೆ ಸಂಪೂರ್ಣ ಬತ್ತಿಹೋಗಿವೆ. ಒಟ್ಟಾರೆಯಾಗಿ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಜಲಕ್ಷಾಮ ಎನ್ನುವಂತೆ ಗೋಚರಿಸುತ್ತಿದೆ.

ಮೊದಲ ಹಂತದಲ್ಲಿ ತಾಲ್ಲೂಕಿನ ಬಾಚಿಗೊಂಡನಹಳ್ಳಿ, ಶೀಗೇನಹಳ್ಳಿ, ದಶಮಾಪುರ, ಕೆಚ್ಚಿನಬಂಡಿ, ಕೆಂಚಟನಹಳ್ಳಿ, ಹಂಪಸಾಗರ, ಬಲ್ಲಾಹುಣ್ಸಿ, ಕೆ.ಕೆ.ತಾಂಡಾ ಗ್ರಾಮಗಳಲ್ಲಿ ಕೊಳವೆಬಾವಿಗಳನ್ನು ಬಾಡಿಗೆ ಪಡೆಯಲಾಗಿದೆ.

ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. 60 ಕೊಳವೆಬಾವಿಗಳಿದ್ದರೂ ನಿರ್ವಹಣೆ ಕೊರತೆಯಿಂದ ಬಳಕೆ ಮಾಡುವ ನೀರು ಪೂರೈಕೆಯಲ್ಲಿ ವ್ಯತ್ಯಾಸವಾಗುತ್ತಿದೆ ಎನ್ನುತ್ತಾರೆ ನಿವಾಸಿಗಳು. ದೂರವಾಣಿ ಕರೆ ಮಾಡಿದರೆ 23 ವಾರ್ಡ್‍ಗಳಲ್ಲಿ ಅಗತ್ಯ ಇರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುವುದಕ್ಕಾಗಿ ಪುರಸಭೆಯಿಂದ ವ್ಯವಸ್ಥೆ ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ಪ್ರಭಾಕರ ಪಾಟೀಲ್ ಹೇಳುತ್ತಾರೆ. ಹಳೇ ಊರಿನ ನೆಹರು ನಗರದಲ್ಲಿ ಶುದ್ಧ ನೀರಿನ ಘಟಕ ಇಲ್ಲ, ಅಲ್ಲಿನ ನಿವಾಸಿಗಳು ಕಿಲೋ ಮೀಟರ್‍ಗಟ್ಟಲೆ ತೆರಳಿ ನೀರು ತರಬೇಕಾದ ಅನಿವಾರ್ಯತೆ ಇದೆ.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಸೊನ್ನ ಗ್ರಾಮದಲ್ಲಿ ನಳಯೊಂದರ ಬಳಿ ನೀರಿಗಾಗಿ ತಳ್ಳುವ ಗಾಡಿಗಳೊಂದಿಗೆ ಕಾಯುತ್ತಿರುವ ನಿವಾಸಿಗಳು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಸೊನ್ನ ಗ್ರಾಮದಲ್ಲಿ ನಳಯೊಂದರ ಬಳಿ ನೀರಿಗಾಗಿ ತಳ್ಳುವ ಗಾಡಿಗಳೊಂದಿಗೆ ಕಾಯುತ್ತಿರುವ ನಿವಾಸಿಗಳು
ಹಗರಿಬೊಮ್ಮನಹಳ್ಳಿ ಪಟ್ಟಣದ 21ನೇವಾರ್ಡ್‍ನಲ್ಲಿ ಟ್ಯಾಂಕರ್‌ನಿಂದ ನೀರು ಪಡೆಯುತ್ತಿರುವ ನಿವಾಸಿಗಳು
ಹಗರಿಬೊಮ್ಮನಹಳ್ಳಿ ಪಟ್ಟಣದ 21ನೇವಾರ್ಡ್‍ನಲ್ಲಿ ಟ್ಯಾಂಕರ್‌ನಿಂದ ನೀರು ಪಡೆಯುತ್ತಿರುವ ನಿವಾಸಿಗಳು

ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಕೆಗೆ ₹67ಲಕ್ಷ ಮೀಸಲಿಡಲಾಗಿದೆ. ಈಗಾಗಲೇ 8 ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿ ಬಾಡಿಗೆ ಪಡೆದಿದ್ದು ಇನ್ನು 18 ಬಾಡಿಗೆ ಪಡೆಯಲು ನಿರ್ಧರಿಸಲಾಗಿದೆ

-ಚಂದ್ರಶೇಖರ ಶಂಭಣ್ಣ ಗಾಳಿ ತಹಶೀಲ್ದಾರ್

ಸಮಸ್ಮಾತ್ಮಕ ಗ್ರಾಮಗಳಿಗೆ ಭೇಟಿ ನೀಡಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಕೇಂದ್ರಸ್ಥಾನಗಳಲ್ಲಿ ಇರುವಂತೆ ಸೂಚಿಸಲಾಗಿದೆ. ನೀರು ಸರಬರಾಜು ಮಾಡುವ ಟ್ಯಾಂಕರ್‌ಗಳ ಪಟ್ಟಿ ಮಾಡಿದ್ದು ಟೆಂಡರ್ ಕರೆಯಲಾಗಿದೆ

-ಡಾ.ಜಿ.ಪರಮೇಶ್ವರ್ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯ್ತಿ

ಪ್ರತಿ ಮನೆಯ ಒಬ್ಬರು ನೀರು ತರುವುದಕ್ಕೆ ನಿಯೋಜಿಸುವ ಅನಿವಾರ್ಯತೆ ಇದೆ. ಎಲ್ಲರ ಮನೆಯಲ್ಲೂ ದೂರದಿಂದ ನೀರು ತರಲು ತಳ್ಳುವ ಬಂಡಿಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

-ಮಲ್ಲಪ್ಪ ಸೊನ್ನ ನಿವಾಸಿ

ಸಮಸ್ಯೆ ಇರುವ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು.

-ಎಸ್.ದೀಪಾ ಎಇಇ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT