ಬಳ್ಳಾರಿ: ‘ಬಿಹಾರ ಚುನಾವಣೆ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಿಂದುಳಿದ ವರ್ಗದ ನಾಯಕನನ್ನಾಗಿ ಕಾಂಗ್ರೆಸ್ ಬಿಂಬಿಸುತ್ತಿದೆ. ಚುನಾವಣೆ ಬಳಿಕ ಸಿದ್ದರಾಮಯ್ಯ ಸ್ಥಾನವೇ ಇರುವುದಿಲ್ಲ. ಅವರು ಹರಕೆ ಕುರಿಯಾಗಲಿದ್ದಾರೆ’ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಭವಿಷ್ಯ ನುಡಿದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ಮೊದಲಿನಂತಿಲ್ಲ. ಅವರು ಹೈಕಮಾಂಡ್ ಕೈಗೊಂಬೆಯಾಗಿದ್ದಾರೆ. ಒಬಿಸಿ ಸಲಹಾ ಮಂಡಳಿ ಮತ್ತು ಅದರ ಸಭೆ ಕೇವಲ ಬೂಟಾಟಿಕೆ. ಬಿಹಾರ ಚುನಾವಣೆ ಕಾರಣಕ್ಕೆ ಇದೆಲ್ಲ ನಡೆಯುತ್ತಿದೆ. ಚುನಾವಣೆ ಬಳಿಕ ಒಬಿಸಿ ನಾಯಕರು ಇರುವುದಿಲ್ಲ. ಸರ್ಕಾರವೂ ಇರುವುದಿಲ್ಲ’ ಎಂದರು.

‘ಈ ಮಧ್ಯೆ ಇದೇ 30ಕ್ಕೆ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆದಿದೆ. ಅದಕ್ಕೂ ಮುನ್ನ ಮೈಸೂರಿನಲ್ಲಿ ಶಕ್ತಿ ಪ್ರದರ್ಶನ ಮಾಡಲಾಗುತ್ತಿದೆ. ಖಾಸಗಿ ಕಾರ್ಯಕ್ರಮವಾದ ಇದನ್ನು ಸರ್ಕಾರದ ಖರ್ಚಿನಲ್ಲಿ ಮಾಡಲಾಗುತ್ತಿದೆ’ ಎಂದು ಟೀಕಿಸಿದರು.

‘ಕಲ್ಯಾಣ ಕರ್ನಾಟಕದ ಪರಿಸ್ಥಿಯನ್ನು ಯಾರೂ ಕೇಳುತ್ತಿಲ್ಲ. ಸರ್ಕಾರದಲ್ಲಿ 80 ಪರ್ಸೆಂಟ್ ಭ್ರಷ್ಟಾಚಾರ ನಡೆಯುತ್ತಿದೆ. ಬಳ್ಳಾರಿ ನಗರದಲ್ಲಿ ಗಾಂಜ, ಡ್ರಗ್ಸ್ ಹಾವಳಿ ಹೆಚ್ಚಾಗಿದೆ. ಕಲ್ಯಾಣದ ಜಿಲ್ಲೆಗಳಲ್ಲಿ ಅಭಿವೃದ್ದಿಗಿಂತಲೂ ಮಾದಕ ದ್ರವ್ಯದ ಹಾವಳಿ ಹೆಚ್ಚಾಗಿದೆ. ಪ್ರಿಯಾಂಕ್ ಖರ್ಗೆ ಅವರ ಆಪ್ತನೇ ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿಯಾಗಿದ್ದಾನೆ. ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಕುಸಿದಿದೆ’ ಎಂದು ಅವರು ಹೇಳಿದರು.

ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ (ಬಿಎಂಸಿಆರ್ಸಿ –ವಿಮ್ಸ್)ದ ಸೂಪರ್ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬಹುತೇಕ ವಿಭಾಗಗಳು ಬಂದ್ ಆಗಿವೆ. ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ. ಯಂತ್ರಗಳು ಬಳಕೆಯಾಗುತ್ತಿಲ್ಲ. ಇದನ್ನೆಲ್ಲ ನೋಡಬೇಕಾದ ಆರೋಗ್ಯ ಮಂತ್ರಿ ವಿಫಲರಾಗಿದ್ದಾರೆ. ಬೆಂಗಳೂರಿಗೆ ಸೀಮಿತರಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಮಂತ್ರಿ ಫೋಟೊಗೆ ಪೋಜು ಕೊಡುವುದಕ್ಕೆ ಸೀಮಿತರಾಗಿದ್ದಾರೆ. ಅವರೊಬ್ಬ ಅತ್ಯಂತ ಕೆಟ್ಟ ಮಂತ್ರಿ’ ಎಂದರು.

ತುಂಗಭದ್ರಾ ಜಲಾಶಯದ ಗೇಟ್ ಅಳವಡಿಕೆಯಲ್ಲೂ ಸರ್ಕಾರ ನಿರ್ಲಕ್ಷ್ಯ ಮಾಡಿದ್ದು, ರೈತರ ಎರಡನೇ ಬೆಳೆಗೆ ನೀರು ಇಲ್ಲವಾಗಿದೆ. ರೈತರ ಬಳಕೆಗೆ ಬರಬೇಕಿದ್ದ ನೀರು ವ್ಯರ್ಥವಾಗಿ ನದಿ ಪಾಲಾಗಿದೆ. ಇದನ್ನೆಲ್ಲ ನೋಡುತ್ತಿದ್ದರೆ ಸರ್ಕಾರ ಮುಂದಿನ ವರ್ಷವೂ ಗೇಟ್ ಅಳವಡಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನಾರ್ದನ ರೆಡ್ಡಿ ಪುತ್ರನ ಸಿನಿಮಾದ ಕುರಿತ ಪ್ರಶ್ನೆಗೆ, ‘ನಾನು ಸಿನಿಮಾ ನೋಡುತ್ತೇನೆ. ಆದರೆ ಸದ್ಯಕ್ಕೆ ಸಾಧ್ಯವಿಲ್ಲ. ಅವರೆಲ್ಲರೂ ನಾನು ಎತ್ತಿ ಆಡಿಸಿದ ಮಕ್ಕಳು. ಸಿನಿಮಾ ಗೆಲ್ಲಲಿ ಎಂದು ಪ್ರೇಕ್ಷಕನಾಗಿ ಹಾರೈಸುತ್ತೇನೆ’ ಎಂದರು.

ಪೂರ್ಣ ಗೋಪುರ ಕಟ್ಟುತ್ತೇನೆ’ ನಾನು ಅಧಿಕಾರಕ್ಕೆ ಬಂದರೆ ಎಲ್ಲೇ ಇದ್ದರೂ ಬಳ್ಳಾರಿ ನಗರ ಗಡಿಗಿ ಚೆನ್ನಪ್ಪ ವೃತ್ತದ ಗೋಪುರವನ್ನು ಪೂರ್ಣ ಪ್ರಮಾಣದಲ್ಲಿ ನಿರ್ಮಿಸುತ್ತೇನೆ ಎಂದು ಶ್ರೀರಾಮುಲು ಹೇಳಿದರು. ನಾವು ಐತಿಹಾಸಿಕ ಗಡಿಗಿ ಚೆನ್ನಪ್ಪ ವೃತ್ತ ನಿರ್ಮಿಸಲು ಹೊರಟಿದ್ದೆವು. ಆದರೆ ನಗರ ಶಾಸಕರು ಸುವರ್ಣಮ್ಮ ಸರ್ಕಲ್ ಮಾಡಲು ಹೊರಟಿದ್ದಾರೆ. ಅದರ ಉದ್ಘಾಟನೆಗೆ ಮುಖ್ಯಮಂತ್ರಿಗೆ ಕಾಯುತ್ತಿದ್ದಾರೆ ಎಂದರು. ಇದು ಅರ್ಧ ಗೋಪುರ ಮಾತ್ರ. ಪೂರ್ಣ ಗೋಪುರವನ್ನು ನಾನು ನಿರ್ಮಿಸುತ್ತೇನೆ ಎಂದು ಇದೇ ವೇಳೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.