ಕೂಡ್ಲಿಗಿ: ಸಾವಿರಾರು ಸಹಜ ಹೆರಿಗೆ ಮಾಡಿಸಿದ ತಾಲ್ಲೂಕಿನ ಓಬಳಶೆಟ್ಟಿಹಳ್ಳಿ ಗ್ರಾಮದ ಈರಮ್ಮ ಅವರಿಗೆ ಈ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿದೆ.

ಅನಕ್ಷರಸ್ಥೆಯಾದ 104 ವರ್ಷದ ಈರಮ್ಮ ತಮ್ಮ 30ನೇ ವಯಸ್ಸಿನಿಂದಲೇ ಹೆರಿಗೆ ಮಾಡಿಸಲು ಆರಂಭಿಸಿದ್ದರು. ತಮ್ಮ 90ನೇ ವಯಸ್ಸಿನವರೆಗೂ ಹೆರಿಗೆ ಮಾಡಿಸುವ ಕಾಯಕದ ಜೊತೆಗೆ ಕಣ್ಣಿನಲ್ಲಿ ಬಿದ್ದ ಕಸ, ದೂಳು, ಹರಳನ್ನು ತೆಗೆಯುವದು ಹಾಗೂ ಬುಟ್ಟಿ ನೇಯುವುದನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಯಾವುದೇ ತರಬೇತಿ ಪಡೆಯದೇ ಇದ್ದರೂ ಸಹಜ ಹೆರಿಗೆ ಮಾಡಿಸುವಲ್ಲಿ ಅವರದು ಎತ್ತಿದ ಕೈ.  ಅವರು ಹೆರಿಗೆ ಮಾಡಿಸಿದ ಒಂದೇ ಒಂದು ತಾಯಿ, ಮಗುವಿನ ಪ್ರಾಣಕ್ಕೆ ಹಾನಿಯಾಗಿಲ್ಲ ಎಂಬುದು ಮತ್ತೊಂದು ವಿಶೇಷವಾಗಿದೆ. ಇದರಿಂದ ಅವರು ಬಡವರ ಪಾಲಿನ ತಾಯಿಯಾಗಿದ್ದಾರೆ.

ವಯಸ್ಸಾದ ಕಾರಣ ಅವರು ಹೆರಿಗೆ ಮಾಡಿಸುವುದನ್ನು ನಿಲ್ಲಿಸಿದ್ದಾರೆ. ಅನೇಕ ಸಂದರ್ಭಗಳಲ್ಲಿ ವೈದ್ಯರೂ  ಈರಮ್ಮ ಅವರ ಸಲಹೆ ಪಡೆದು ಹೆರಿಗೆ ಮಾಡಿಸಿದ ಉದಾಹರಣೆಗಳು ಇವೆ. ಜೀವಮಾನದಲ್ಲಿ 14 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿರುವ ಶತಾಯುಷಿ ಈರಮ್ಮ ಅವರಿಗೆ ಕಳೆದ ಸಾಲಿನಲ್ಲಿ ತಾಲ್ಲೂಕು ಆಡಳಿತದಿಂದ ನೀಡಿದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ.

ಸದ್ಯ ಪುತ್ರನೊಂದಿಗೆ ಓಬಳಶೆಟ್ಟಿ ಗ್ರಾಮದಲ್ಲಿ ವಾಸವಾಗಿದ್ದಾರೆ. ‘ಹೆರಿಗೆ ಮಾಡಿಸುವ ಕೆಲಸ ನನಗೆ ತೃಪ್ತಿ ತಂದಿದೆ. ಹೆರಿಗೆ ಮಾಡಿಸಿದ ಕೆಲಸಕ್ಕ ಒಂದು ಮೊರ ರಾಗಿ ನೀಡುತ್ತಿದ್ದರು. ಎಂದಿಗೂ ಹಣವನ್ನು ಪಡೆದಿಲ್ಲ’ ಎಂದು ಈರಮ್ಮ ಹೇಳುತ್ತಾರೆ.

ರಾತ್ರೋ ರಾತ್ರಿ ಹಳ್ಳಿಗಳಿಗೆ ನಡೆದುಕೊಂಡು ಹೋಗಿ ಹೆರಿಗೆ ಮಾಡಿಸಿದ ಕೀರ್ತಿ  ಅವರಿಗೆ ಸಲ್ಲುತ್ತದೆ. ಇವರ ಸೇವೆಯನ್ನು ಗುರುತಿಸಿ ಸರ್ಕಾರ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಹೆಮ್ಮೆಯ ವಿಷಯ. ಇವರಿಗೆ ಕೇಂದ್ರ ಸರ್ಕಾರ ನೀಡುವ ಉನ್ನತ ಮಟ್ಟದ ಪ್ರಶಸ್ತಿ ನೀಡಲಿ ಎಂದು ಈರಮ್ಮ ಸಂಬಂಧಿ ಜನಪರ ಚಿಂತಕ ಕೆ. ತಿಪ್ಪೇಸ್ವಾಮಿ ಹೊಸಮನಿ ಮನವಿ ಮಾಡಿದ್ದಾರೆ.

ಒಬ್ಬ ಗ್ರಾಮೀಣ ಭಾಗದಲ್ಲಿನ ಮಹಿಳೆಯನ್ನು ಗುರುತಿಸಿ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು  ತಾಲ್ಲೂಕಿನ ಘನತೆಯನ್ನು ಹೆಚ್ಚಿಸಿದೆ. ಕ್ಷೇತ್ರದಲ್ಲಿ ಇನ್ನೂ ಅನೇಕ ಜನ ಎಲೆಮರೆ ಕಾಯಿಗಳಂತೆ ಜನರ ಸೇವೆ ಮಾಡುತ್ತಿದ್ದು ಅವರನ್ನು ಗುರುತಿಸಿ ಪ್ರಶಸ್ತಿ ಕೊಡಿಸುವ ಕೆಲಸ ಮಾಡಲಾಗುವುದು.
ಡಾ. ಶ್ರೀನಿವಾಸ್ ಎನ್.ಟಿ. ಶಾಸಕರು ಕೂಡ್ಲಿಗಿ ಕ್ಷೇತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.