ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಶೀರ’ ಕಾದಂಬರಿ ಬಿಡುಗಡೆ 22ಕ್ಕೆ; ಲೇಖಕಿಯೊಂದಿಗೆ ಆನ್‌ಲೈನ್‌ ಸಂವಾದ

Last Updated 20 ಸೆಪ್ಟೆಂಬರ್ 2018, 12:28 IST
ಅಕ್ಷರ ಗಾತ್ರ

ಬಳ್ಳಾರಿ: ‘ಕಾಶ್ಮೀರದ ಅಸ್ಮಿತೆ ಮತ್ತು ಅಲ್ಲಿನ ಜನರ ನೋವು–ನಲಿವುಗಳ ಕುರಿತು ಲೇಖಕಿ ಸಹನಾ ವಿಜಯಕುಮಾರ್‌ ಅವರ ‘ಕಶೀರ’ ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮ ಸೆ.22ರಂದು ನಗರದ ಬಿಪಿಎಸ್‌ಸಿ ಶಾಲೆಯಲ್ಲಿ ನಡೆಯಲಿದೆ. ಲೇಖಕಿ ಆನ್‌ಲೈನ್‌ ಮೂಲಕ ಸಭಿಕರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಯಾನ ಚಿಂತನ ವೇದಿಕೆಯ ಶ್ರೀನಾಥ ಜೋಶಿ ತಿಳಿಸಿದರು.

‘ಕಾಶ್ಮೀರಕ್ಕೆ ಭೇಟಿ ನೀಡಿದ ಬಳಿಕ ಲೇಖಕಿ ಕಾದಂಬರಿ ರಚಿಸಿದ್ದು, ಕಾಶ್ಮೀರಿ ಪಂಡಿತರ ಅತಂತ್ರಪರಿಸ್ಥಿತಿ, ಪ್ರತ್ಯೇಕತೆಯ ಸೋಗಿನ ರಾಜಕೀಯ ಸುಳಿಯಲ್ಲಿ ದಿನ ದೂಡುತ್ತಿರುವ ಜನರ ಕಷ್ಟ–ನಷ್ಟಗಳ ಕುರಿತ ಅಪೂರ್ವ ಕಥನವನ್ನು ಅನಾವರಣ ಮಾಡಿದ್ದಾರೆ. ಕಾದಂಬರಿಯನ್ನು ಲೇಖಕ ಎಸ್‌.ಎಲ್‌.ಭೈರಪ್ಪ ಮೆಚ್ಚಿಕೊಂಡಿದ್ದಾರೆ’ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಬಸವರಾಜೇಶ್ವರಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಸ್‌.ಜೆ.ವಿ.ಮಹಿಪಾಲ್‌ ಲೋಕಾರ್ಪಣೆ ಮಾಡಲಿದ್ದಾರೆ. ಉಪನ್ಯಾಸಕಿ ಕೆ.ವಿ.ಜಯಲಕ್ಷ್ಮಿ ಕೃತಿಯ ಕುರಿತು ಮಾತನಾಡಲಿದ್ದಾರೆ’ ಎಂದರು.

ಉಪನ್ಯಾಸ: ‘ಇದೇ ಸಂದರ್ಭದಲ್ಲಿ, ಕಾಶ್ಮೀರ–ಸಮಸ್ಯೆ–ವಾಸ್ತವ– ಪರಿಹಾರ ಕುರಿತು ಬೆಂಗಳೂರಿನ ಜಮ್ಮು ಮತ್ತು ಕಾಶ್ಮೀರ ಅಧ್ಯಯನ ಕೇಂದ್ರದ ರಾಧಾಕೃಷ್ಣ ಹೊಳ್ಳ ಉಪನ್ಯಾಸ ನೀಡಲಿದ್ದಾರೆ. ಯಾನ ಉಪನ್ಯಾಸ ಮಾಲಿಕೆಯ 6ನೇ ಉಪನ್ಯಾಸ ಈ ರೀತಿ ವಿಶೇಷವಾಗಿದೆ’ ಎಂದರು. ವೇದಿಕೆಯ ಪ್ರದೀಪ್‌ ಮತ್ತು ವಿಜಯಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT