ಬಳ್ಳಾರಿ: ಕಡಿಮೆ ಗುಣಮಟ್ಟದ ಹಾಲು ಶೇಖರಣೆ ಮತ್ತು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇರೆಗೆ ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಲು ಉತ್ಪಾದರ ಸಹಕಾರ ಸಂಘಗಳ ಒಕ್ಕೂಟದ ಇಬ್ಬರು ಅಧಿಕಾರಿಗಳಿಗೆ ಸಹಕಾರ ಸಂಘಗಳ ಉಪನಿಬಂಧಕರು ಇತ್ತೀಚೆಗೆ ನೋಟಿಸ್ ಜಾರಿಗೊಳಿಸಿದ್ದಾರೆ.

ಒಕ್ಕೂಟದ ಇ. ಪ್ರಕಾಶ್ (ಶೇಖರಣೆ) ಮತ್ತು ಸಹಾಯಕ ವ್ಯವಸ್ಥಾಪಕ ಪರಮೇಶ್ವರಪ್ಪ ಅವರಿಗೆ ನೋಟಿಸ್ ಜಾರಿಯಾಗಿದ್ದು, ಇದೇ 8ರಂದು ಒಕ್ಕೂಟದ ಕಚೇರಿಯಲ್ಲಿ ನಡೆಯಲಿರುವ ವಿಚಾರಣೆಗೆ ತಪ್ಪದೇ ಹಾಜರಾಗುವಂತೆ ತಾಕೀತು ಮಾಡಲಾಗಿದೆ. ‘ವಿಚಾರಣೆಗೆ ಗೈರಾದರೆ ಕ್ರಮಕ್ಕೆ ವರದಿ ಸಲ್ಲಿಸಲಾಗುತ್ತದೆ’ ಎಂದು ಉಪನಿಬಂಧಕರು ತಿಳಿಸಿದ್ದಾರೆ.

ಕಳಪೆ ಗುಣಮಟ್ಟದ, ಅಂದರೆ, 7.5ರಿಂದ 8.30ರಷ್ಟು ಎಸ್ಎನ್ಎಫ್ ಇರುವ ಹಾಲು ಪೂರೈಕೆಯಾದರೂ 8.5 ಎಸ್ಎನ್ಎಫ್ ಎಂದು ನಮೂದಿಸಿ ಹಾಲನ್ನು ಸಂಗ್ರಹಣೆ ಮಾಡಿ, ಒಕ್ಕೂಟಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಿದ ಆರೋಪ ಶೇಖರಣೆ ವಿಭಾಗದ ವ್ಯವಸ್ಥಾಪಕ ಇ. ಪ್ರಕಾಶ ಅವರ ವಿರುದ್ಧ ಕೇಳಿ ಬಂದಿದೆ.

ರಾಬಕೊವಿ ಚುನಾವಣೆಯ ನೀತಿ ಸಂಹಿತೆ ಉಲ್ಲಂಘಿಸಿರುವ ಮತ್ತು ಚುನಾವಣೆ ಸಂದರ್ಭದಲ್ಲಿ ಅಕ್ರಮ ಕಾರ್ಯಚಟುವಟಿಕೆ ನಡೆಸಿದ ಆರೋಪ ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಹರಪನಹಳ್ಳಿಯ ಪರಮೇಶ್ವರಪ್ಪ ವಿರುದ್ಧ ಕೇಳಿ ಬಂದಿದೆ.

ಈ ಬಗ್ಗೆ ಒಕ್ಕೂಟದ ಮಾಜಿ ನಿರ್ದೇಶಕ ಜಿ ಸತ್ಯನಾರಾಯಣ ಮತ್ತು ಇತರರು ಕಲಬುರಗಿಯ ಸಹಕಾರ ಸಂಘಗಳ ಜಂಟಿ ನಿಬಂಧಕರಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ವಿಚಾರಣೆ ನಡೆಸುವಂತೆ ಬಳ್ಳಾರಿಯ ಉಪ ನಿಬಂಧಕರಿಗೆ ತಿಳಿಸಲಾಗಿದ್ದು, ನೊಟೀಸ್ ಜಾರಿಯಾಗಿದೆ.

ಇದರೊಂದಿಗೆ, ರಾಬಕೊವಿಯ ಈ ಹಿಂದಿನ ಆಡಳಿತ ಮಂಡಳಿಯ ಅಕ್ರಮಗಳನ್ನು ಹೊರಗೆಡವುವ ಪ್ರಕ್ರಿಯೆಗೆ ಆರಂಭ ಸಿಕ್ಕಂತಾಗಿದೆ. ರಾಬಕೊವಿಯಲ್ಲಿ ಹಲವು ಅಕ್ರಮಗಳು ನಡೆದಿರುವುದಾಗಿ ಆರೋಪಗಳು ಕೇಳಿ ಬಂದಿದ್ದವು.

ನೀತಿ ಸಂಹಿತೆ ಉಲ್ಲಂಘನೆ ಆರೋಪ ಆ.6ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ಒಕ್ಕೂಟದ ಅಕ್ರಮ ಹೊರಗೆಡವುವ ಪ್ರಕ್ರಿಯೆ ಆರಂಭ?

ವಿಚಾರಣೆ ನಡೆಸುವಂತೆ ಕಲಬುರಗಿ ಕಚೇರಿಯಿಂದ ಸೂಚನೆ ಬಂದಿದೆ. ಅದರಂತೆ ವಿಚಾರಣೆ ನಡೆಸಿ ವರದಿ ಸಲ್ಲಿಸಲಾಗುವುದು. ನಂತರ ಕ್ರಮ ಕೈಗೊಳ್ಳಲಾಗುತ್ತದೆ
ವೀರಭದ್ರಯ್ಯ ಸಹಕಾರ ಸಂಘಗಳ ಉಪನಿಬಂಧಕ ಬಳ್ಳಾರಿ

ಹಲವು ದಿನಗಳ ಆರೋಪ ವಿಜಯನಗರ ಭಾಗದಲ್ಲಿ ಹಾಲಿಗೆ ನೀರು ಮಿಶ್ರಣ ಮಾಡಲಾಗುತ್ತಿದೆ. ಅದೇ ಹಾಲನ್ನು ಒಕ್ಕೂಟದಲ್ಲಿ ಶೇಖರಣೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಹಲವು ಬಾರಿ ಕೇಳಿಬಂದಿದ್ದವು. ಇದೇ ವಿಚಾರವು ಒಕ್ಕೂಟದ ಕೇಂದ್ರ ಕಚೇರಿಯಲ್ಲಿ ಇತ್ತೀಚೆಗೆ ಮಾರಾಮಾರಿಗೂ ಕಾರಣವಾಗಿತ್ತು. ನಿವೃತ್ತರ ಬೀಳ್ಕೊಡುಗೆ ಸಮಾರಂಭದಲ್ಲಿ ಈ ವಿಷಯ ಪ್ರಸ್ತಾಪವಾಗಿ ನಾಮ ನಿರ್ದೇಶಿತ ಸದಸ್ಯರೊಬ್ಬರ ಮೇಲೆ ಹಲ್ಲೆಯೂ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.