ಬಳ್ಳಾರಿ: ‘ಸರ್ಕಾರ ನಾಲ್ಕೈದು ವರ್ಷಗಳಿಂದ ಪುಸ್ತಕ ಖರೀದಿಸಿಲ್ಲ. ಬಂಡವಾಳ ವಾಪಸ್ ಆಗದೇ ಪ್ರಕಾಶಕರು ಕಂಗಾಲು ಆಗಿದ್ದಾರೆ. ಸರ್ಕಾರ ಈ ಬಜೆಟ್ನಲ್ಲಾದರೂ ಪುಸ್ತಕ ಖರೀದಿಗೆ ₹20 ಕೋಟಿ ಮೀಸಲಿಡಬೇಕು’ ಎಂದು ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ ಡಾ. ವಸುಂಧರಾ ಭೂಪತಿ ಇಲ್ಲಿ ಆಗ್ರಹಿಸಿದರು.

ಕರ್ನಾಟಕ ಪ್ರಕಾಶಕರ ಸಂಘ ಮತ್ತು ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ ಸಹಯೋಗದಲ್ಲಿ ಬುಧವಾರ ಆರಂಭಗೊಂಡ ಎರಡು ದಿನಗಳ ‘ಪ್ರಕಾಶಕರ ಕಮ್ಮಟ’ದಲ್ಲಿ ಅವರು ಮಾತನಾಡಿದರು.

‘ಸಮಸ್ಯೆ ಬಗೆಹರಿಸುವುದಾಗಿ ಸರ್ಕಾರ ಇದೇ ಡಿ. 20ರವರೆಗೆ ಸಮಯ ಕೇಳಿದೆ. ಸ್ಪಂದಿಸದಿದ್ದರೆ ಹೋರಾಟ ನಡೆಸಲಾಗುವುದು’ ಎಂದು ಒತ್ತಾಯಿಸಿದರು.

‘ಸ್ಥಳೀಯ ಸಂಸ್ಥೆಗಳ ಮೂಲಕ ಸಂಗ್ರಹಿಸಿರುವ ಗ್ರಂಥಾಲಯ ಕರ (ಸೆಸ್) ₹703 ಕೋಟಿ ಬಾಕಿ ಇದೆ. ಇದರ ಸದ್ವಿನಿಯೋಗ ಆಗಬೇಕು. ನಮ್ಮ ಹಣವನ್ನು ನಮಗೇ ಕೊಡಲು ಏನು ತೊಂದರೆ. ಕೇರಳದಲ್ಲಿ ಇರುವುಂತೆ ಸರ್ಕಾರವು ಲೇಖಕರ ಕೃತಿಗಳ 2000 ಪ್ರತಿಗಳನ್ನು ಖರೀದಿಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.