ಕೊಟ್ಟೂರು: ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಮೂಲಕ ವಿಮಾ ಕ್ಷೇತ್ರದಲ್ಲಿಯೇ ಭಾರತೀಯ ಜೀವ ವಿಮಾ ನಿಗಮ ಮುಂಚೂಣಿಯಲ್ಲಿದೆ ಎಂದು ನಿಗಮದ ರಾಯಚೂರು ವಿಭಾಗದ ಎಸ್.ಡಿ.ಎಂ. ಪ್ರಸಾದ ಬಸವರಾಜ ಹೇಳಿದರು.

ಪಟ್ಟಣದ ಮರುಳಸಿದ್ದೇಶ್ವರ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಎಲ್ಐಸಿ ರಾಯಚೂರು ವಿಭಾಗ ಅಭಿವೃದ್ಧಿ ಅಧಿಕಾರಿಗಳ 13 ನೇ ದ್ವೈ ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತನಾಡಿ ನಿಗಮದ ಎಲ್ಲ ಸೇವೆಗಳು ಗ್ರಾಹಕರಿಗೆ ತಲುಪುವಲ್ಲಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪ್ರತಿನಿಧಿಗಳ ಪರಿಶ್ರಮವೇ ಕಾರಣ ಎಂದರು.

ರಾಯಚೂರು ವಿಭಾಗೀಯ ಅಭಿವೃದ್ಧಿ ಅಧಿಕಾರಿಗಳ ಸಂಘದ ಅಧ್ಯಕ್ಷ, ಹರಪನಹಳ್ಳಿ ಶಾಖೆ ಅಭಿವೃದ್ಧಿ ಅಧಿಕಾರಿ ಎಂ.ಎಸ್.ಶಿವನಗುತ್ತಿ ಮಾತನಾಡಿ, ಸಂಘದ ಅದ್ಯಕ್ಷನಾಗಿ ಯಶಸ್ವಿ ಕಾರ್ಯಗಳನ್ನು ನಡೆಸಲು ಎಲ್ಲರ ಸಹಕಾರವೇ ಕಾರಣ. ನಿಗಮದ ಕಾರ್ಯಭಾರದೊಂದಿಗೆ ಸಂಘಟನೆಯನ್ನು ಬಲಪಡಿಸುವುದು ನನ್ನ ಕರ್ತವ್ಯವೆಂದು ಭಾವಿಸಿದ್ದೆ. ಅದರಂತೆ ಸಂಘವನ್ನು ಮುನ್ನಡೆಸಿರುವ ತೃಪ್ತಿ ನನಗಿದೆ ಎಂದರು.

ನಿಗಮದ ಮಾರುಕಟ್ಟೆ ವ್ಯವಸ್ಥಾಪಕ ಎ.ಚಿರಂಜೀವಿ, ಅಭಿವೃದ್ಧಿ ಅಧಿಕಾರಿಗಳ ರಾಷ್ಟ್ರೀಯ ಸಂಘದ ಅಧ್ಯಕ್ಷ ಎಂ.ವಿನಯಬಾಬು ಮಾತನಾಡಿದರು. ದಕ್ಷಿಣ ಕೇಂದ್ರ ವಲಯಾಧ್ಯಕ್ಷ ಶಿವಪ್ರಸಾದ, ಅಭಿವೃದ್ಧಿ ಅಧಿಕಾರಿಗಳ ಸಂಘದ ಕಾರ್ಯದರ್ಶಿ ಶಶಿಧರ್, ಕೆ.ಮನೋಹರ್, ಪಿ.ಎಂ.ಸಿದ್ರಾಮೇಶ್ ಹಾಗೂ ವಿಭಾಗದ ಅಭಿವೃದ್ಧಿ ಅಧಿಕಾರಿಗಳು ಪಾಲ್ಗೊಂಡಿದ್ದರು. ಪವಿತ್ರ ಶ್ರೇಯಸ್ ಮತ್ತು ಹಂಸಪ್ರಿಯ ನೃತ್ಯ ಕಲಾಚೇತನ ಸಂಸ್ಥೆಯ ಬಿ.ಎಂ. ಇಂಪನ, ಆದಿತಿಪ್ರಿಯ, ಸಹನ, ಗೌತಮಿ ನೃತ್ಯ ಪ್ರದರ್ಶನ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.