ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ |ಮತದಾನ ಜಾಗೃತಿಗೆ ಬೈಕ್ ರ‍್ಯಾಲಿ

Published 7 ಏಪ್ರಿಲ್ 2024, 14:07 IST
Last Updated 7 ಏಪ್ರಿಲ್ 2024, 14:07 IST
ಅಕ್ಷರ ಗಾತ್ರ

ಕಂಪ್ಲಿ: ಲೋಕಸಭಾ ಚುನಾವಣೆ ಹಿನ್ನೆಲೆ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ಪಟ್ಟಣದಲ್ಲಿ ಭಾನುವಾರ ತ್ರಿಚಕ್ರ ವಾಹನ ಮತ್ತು ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು.

‘ಪ್ರಜಾಪ್ರಭುತ್ವ ನಮ್ಮಿಂದ, ಮತದಾನ ಹೆಮ್ಮೆಯಿಂದ’ ಎನ್ನುವ ಘೋಷಣೆಯೊಂದಿಗೆ ತಹಶೀಲ್ದಾರ್ ಶಿವರಾಜ್ ಅಭಿಯಾನಕ್ಕೆ ಚಾಲನೆ ನೀಡಿದರು.

ಚುನಾವಣಾ ನೋಡಲ್ ಅಧಿಕಾರಿ ಆರ್.ಕೆ. ಶ್ರೀಕುಮಾರ್, ನರೇಗಾ ಎ.ಡಿ ಕೆ.ಎಸ್. ಮಲ್ಲನಗೌಡ, ಪುರಸಭೆ ಮುಖ್ಯಾಧಿಕಾರಿ ಗೊರೇಬಾಳ್ ರೆಡ್ಡಿ ರಾಯನಗೌಡ, ಪಿಐ ಪ್ರಕಾಶ್ ಮಾಳಿ, ಕಂಪಿಲರಾಯ ಅಂಗವಿಕಲರ ಸಂಘದ ಅಧ್ಯಕ್ಷ ಇಸ್ಮಾಯಿಲ್, ಖಾದರ್‌ ಭಾಷ, ಎಸ್.ಎನ್. ವೀರೇಶ್, ಜಿ. ರಮೇಶ್, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.

ಜಾಗೃತಿ ಅಭಿಯಾನದಲ್ಲಿ 68 ತ್ರಿಚಕ್ರ ವಾಹನ, 195 ದ್ವಿಚಕ್ರ ವಾಹನ ಭಾಗವಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT