ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಕ್ಕಲಕೋಟೆ | ಮಲ್ಲೇಶ್ವರ ದೇವಸ್ಥಾನ ಹುಂಡಿ ಎಣಿಕೆ: ₹2.49 ಲಕ್ಷ ಸಂಗ್ರಹ

Published 29 ಮೇ 2024, 15:30 IST
Last Updated 29 ಮೇ 2024, 15:30 IST
ಅಕ್ಷರ ಗಾತ್ರ

ತೆಕ್ಕಲಕೋಟೆ: ಸಮೀಪದ ಶ್ರೀವರವಿನ ಮಲ್ಲೇಶ್ವರ ದೇವಸ್ಥಾನ ಹುಂಡಿ ಎಣಿಕೆ ಕಾರ್ಯ ಬುಧವಾರ ದೇವಸ್ಥಾನದ ಆವರಣದಲ್ಲಿ ನಡೆಯಿತು.

ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಹಣಾಧಿಕಾರಿ ಹನುಮಂತಪ್ಪ, ಪರಿವೀಕ್ಷಕಿ ಭುವನೇಶ್ವರಿ, ದೇವಸ್ಥಾನ ಸಮಿತಿ ಅಧ್ಯಕ್ಷ ಜೆ.ಶಿವರುದ್ರ ಗೌಡ, ಬ್ಯಾಂಕ್ ವ್ಯವಸ್ಥಾಪಕ ಸತೀಶ್ ರೆಡ್ಡಿ, ಸದಸ್ಯರಾದ ಬೆಳಗಲ್ ಮಲ್ಲಿಕಾರ್ಜುನ, ಎ.ಮಲ್ಲಿಕಾರ್ಜುನ, ಶೇಕಪ್ಪ, ವೀರೇಶ, ಮಲ್ಲಯ್ಯ ಸಮ್ಮುಖದಲ್ಲಿ ಎಣಿಕೆ ಕಾರ್ಯ ನಡೆಯಿತು.

ಜನವರಿಯಿಂದ ಮೇ ತಿಂಗಳ ವರೆಗಿನ ಸಂಗ್ರಹವಾಗಿದ್ದ ₹2,49,985 ಮೊತ್ತವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ದೇವಸ್ಥಾನದ ಖಾತೆಗೆ ಜಮಾ ಮಾಡಲಾಗುವುದು ಎಂದು ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT