ವಿವಾದಗಳು ಕೋರ್ಟ್ ಮೆಟ್ಟಿಲು ಏರುವುದಕ್ಕೂ ಮುನ್ನ ಪ್ರಕರಣಗಳನ್ನು ಸುಖಾಂತ್ಯಗೊಳಿಸಲು ಇದು ಸದವಕಾಶ. ಮಧ್ಯಸ್ಥಗಾರರ ಮೂಲಕ ಪ್ರಕರಣಗಳ ರಾಜೀಸಂಧಾನ ನಡೆಸಲಾಗುತ್ತದೆ. ಜನ ಈ ಅಭಿಯಾನದ ಸದುಪಯೋಗ ಪಡೆಯಬೇಕು.
– ರಾಜೇಶ ಹೊಸಮನೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ
ಉಚಿತ ಪ್ರಕ್ರಿಯೆ
ಮಧ್ಯಸ್ಥಿಕೆಯು ಸಂಪೂರ್ಣ ಉಚಿತ. ವಿವಾದ ಬಗೆಹರಿದರೆ ಕೋರ್ಟ್ ಶುಲ್ಕ ಮರಳಿಸಲಾಗುತ್ತದೆ. ಚರ್ಚೆಗಳು ಖಾಸಗಿಯಾಗಿರುತ್ತವೆ. ಹೀಗಾಗಿ ಗೋಪ್ಯತೆ ಹಾನಿ ಇಲ್ಲ. ಆನ್‌ಲೈನ್ ಅಥವಾ ಹೈಬ್ರಿಡ್ ರಾಜೀಸಂಧಾನಕ್ಕೂ ಅವಕಾಶ ನೀಡಲಾಗುತ್ತದೆ.