ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಕನ್ನಡೇತರ ನಾಮಫಲಕಗಳಿಗೆ ಮಸಿ

Last Updated 3 ನವೆಂಬರ್ 2020, 13:39 IST
ಅಕ್ಷರ ಗಾತ್ರ

ಹೊಸಪೇಟೆ: ನಗರದ ಮಳಿಗೆಗಳ ಮೇಲಿನ ಕನ್ನಡೇತರ ನಾಮಫಲಕಗಳಿಗೆ ಕಪ್ಪು ಮಸಿ ಬಳಿಯುವ ಕಾರ್ಯಾಚರಣೆಯನ್ನು ನಗರಸಭೆ ಮಂಗಳವಾರ ಆರಂಭಿಸಿದೆ.

ಮಂಗಳವಾರ ಮೊದಲ ದಿನ 40 ಮಳಿಗೆಗಳ ನಾಮಫಲಕಗಳಿಗೆ ನಗರಸಭೆ ಸಿಬ್ಬಂದಿ ಮಸಿ ಬಳಿದರು. ನ. 2ರ ಒಳಗೆ ಕನ್ನಡದಲ್ಲಿ ನಾಮಫಲಕ ಬರೆಸುವಂತೆ ನಗರಸಭೆಯ ಪೌರಾಯುಕ್ತೆ ಪಿ. ಜಯಲಕ್ಷ್ಮಿ ಅವರು ಇತ್ತೀಚೆಗೆ ಕನ್ನಡೇತರ ನಾಮಫಲಕ ಹೊಂದಿದ ಮಳಿಗೆ ಮಾಲೀಕರಿಗೆ ನೋಟಿಸ್‌ ಕೊಟ್ಟಿದ್ದರು.

ನೋಟಿಸ್‌ ಕೊಟ್ಟರೂ ಕನ್ನಡ ನಾಮಫಲಕ ಅಳವಡಿಸದ ಕಾರಣ ಮಸಿ ಬಳಿಯಲಾಗುತ್ತಿದೆ. ಆರೋಗ್ಯ ಇನ್‌ಸ್ಪೆಕ್ಟರ್‌ ವೆಂಕಟೇಶ ಹವಲ್ದಾರ, ಸಿಬ್ಬಂದಿ ಸತ್ಯನಾರಾಯಣ ಶರ್ಮಾ, ಮಾರುತಿ, ರಾಮಾಂಜನೇಯ, ನಾಗರಾಜ, ವೆಂಕಟೇಶ, ತಿಮ್ಮಯ್ಯ, ಬಾಬು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT