ಕಟ್ಟಡ ಹೊಸದಿದೆ. ಅದಾಗಲೇ ಲಿಫ್ಟ್ ಕೆಟ್ಟು ಹೋಗಿವೆ. ಕಟ್ಟಡವನ್ನು ವ್ಯವಸ್ಥಿವಾಗಿ ನಿರ್ವಹಿಸಿಕೊಂಡು ಹೋಗಬೇಕು. ಸಾರ್ವಜನಿಕರಿಗೆ ಸಿಬ್ಬಂದಿಗೆ ವ್ಯವಸ್ಥೆ ಕಲ್ಪಿಸಬೇಕು
ಸುರೇಶ್ ಹೋರಾಟಗಾರ
ಸುರೇಶ್
ಭವನದಲ್ಲಿಲ್ಲ ಸಿಸಿ ಟಿ.ವಿ ಕ್ಯಾಮೆರಾ
ಮೂರು ಬ್ಲಾಕ್‌ಗಳನ್ನು ಹೊಂದಿರುವ ವಿಶಾಲವಾದ ಕಟ್ಟಡದಲ್ಲಿ ಎಲ್ಲಿ ಹುಡುಕಿದರೂ ಒಂದೇ ಒಂದು ಸಿ.ಸಿ ಟಿ.ವಿ ಕ್ಯಾಮೆರಾ ಇಲ್ಲ. ಇದೂ ಕೂಡ ಭದ್ರತೆಗೆ ದೊಡ್ಡ ಬೆದರಿಕೆ ಎಂಬಂತಾಗಿದೆ. ಮೊದಲು ಕಟ್ಟಡದ ಪ್ರಮುಖ ಸ್ಥಳಗಳಲ್ಲಿ ಸಿಸಿ ಟಿ.ವಿ ಕ್ಯಾಮೆರಾಗಳನ್ನು ಹಾಕಿಸಬೇಕು. ಆಗ ಗೋಡೆ ಹಾರಿ ಬರುತ್ತಿರುವ ನೆರೆಹೊರೆಯ ಕಿಡಿಗೇಡಿಗಳನ್ನು ತಪ್ಪಿಸಿದಂತೆ ಆಗುತ್ತದೆ. ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಬೀಳುತ್ತದೆ. ಪ್ರತಿಯೊಂದು ಚಲನವಲನದ ಮೇಲೆ ಕಣ್ಣಿಟ್ಟಂತೆ ಆಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಬಳ್ಳಾರಿಯ ಡಾ. ರಾಜ್‌ಕುಮಾರ್ ರಸ್ತೆಯಲ್ಲಿರುವ ಹೊಸ ಜಿಲ್ಲಾಡಳಿತ ಭವನದ ಹೊರಾಂಗಣ
ಲಿಫ್ಟ್ ದುಸ್ಥಿತಿ: ಅಂಗವಿಕಲರ ಫಜೀತಿ
ಭವನ ಮೂರು ಕಡೆಗಳಲ್ಲಿ ಲಿಫ್ಟ್‌ಗಳಿವೆ. ಜಿಲ್ಲಾಧಿಕಾರಿ ಕಚೇರಿ ಇರುವಲ್ಲಿ ಅಳವಡಿಸಿರುವ ಲಿಫ್ಟ್ ಬಿಟ್ಟರೆ ಇನ್ನುಳಿದ ಎರಡು ಲಿಫ್ಟ್‌ಗಳ ಸಲಕರಣೆಗಳನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದು ಐದು ತಿಂಗಳಿಂದ ಕೆಟ್ಟು ನಿಂತಿವೆ. ಹೀಗಾಗಿ ಅಂಗವಿಕಲರು ಒದ್ದಾಡುತ್ತಾ ಕಚೇರಿಗಳಿಗೆ ಮೆಟ್ಟಿಲು ಹತ್ತಿ ಹೋಗುವ ದೃಶ್ಯಗಳು ಬೇಸರ ಮೂಡಿಸುತ್ತಿವೆ. ಇದು ನಿತ್ಯದ ಗೋಳು ಎಂಬಂತಾಗಿದೆ.