ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಲಿ | ರೌಡಿಶೀಟರ್‌ಗಳ ‍ಪರೇಡ್‌; ಎಚ್ಚರಿಕೆ

Published 12 ಮಾರ್ಚ್ 2024, 16:28 IST
Last Updated 12 ಮಾರ್ಚ್ 2024, 16:28 IST
ಅಕ್ಷರ ಗಾತ್ರ

ಕಂಪ್ಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಥಳಿಯ ಪೊಲೀಸ್ ಠಾಣೆಯ ಆವರಣದಲ್ಲಿ ಮಂಗಳವಾರ ರೌಡಿಶೀಟರ್‌ಗಳ ಪರೇಡ್ ನಡೆಸಲಾಯಿತು.

ಪೊಲೀಸ್ ಇನ್‌ಸ್ಪೆಕ್ಟರ್ ಪ್ರಕಾಶ್ ಮಾಳಿ ಮಾತನಾಡಿ, ‘ಚುನಾವಣೆ ಸಂದರ್ಭದಲ್ಲಿ ಅಕ್ರಮ ಚಟುವಟಿಗೆಳಲ್ಲಿ ತೊಡಗಿಕೊಳ್ಳುವುದು, ಮತದಾರರಿಗೆ ಬೆದರಿಕೆ ಹಾಕುವುದು, ಆಮಿಷ ಒಡ್ಡುವುದು, ತೊಂದರೆ ಕೊಡುವುದು, ಪ್ರಭಾವ ಬೀರುವುದು ಕಾನೂನು ರೀತಿ ಅಪರಾಧವಾಗಿದೆ. ಪಾರದರ್ಶಕ, ಶಾಂತ ಮತ್ತು ಸುವ್ಯವಸ್ಥಿತ ಚುನಾವಣೆಗೆ ಭಂಗವನ್ನುಂಟು ಮಾಡಿದರೆ ಗಡಿಪಾರು ಮಾಡಲಾಗುವುದು’ ಎಂದು ರೌಡಿಶೀಟರ್‌ಗಳಿಗೆ ಎಚ್ಚರಿಗೆ ನೀಡಿದರು.

ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್‍ಐ ಶೇಷಾಚಲಂ ನಾಯ್ಡು, ಅಪರಾಧ ವಿಭಾಗದ ಪಿಎಸ್‍ಐ ಧರ್ಮಣ್ಣ, ಅಪರಾಧ ವಿಭಾಗದ ಸಿಬ್ಬಂದಿ ವಿಜಯಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT