ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಾಶಯಕ್ಕೆ ಹರಿದು ಬಂದ ಜನಸಾಗರ

ತುಂಗಭದ್ರಾ ಹಿನ್ನೀರಿನಲ್ಲಿ ದಿನವಿಡೀ ಮೋಜು ಮಸ್ತಿ ಮಾಡಿದ ಜನ
Last Updated 22 ಜುಲೈ 2018, 14:11 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸುತ್ತಿರುವ ಕಾರಣ ರಜಾ ದಿನವಾದ ಭಾನುವಾರ ಅಣೆಕಟ್ಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ಜನಸಾಗರವೇ ಕಂಡು ಬಂತು.

ತುಂಗಭದ್ರಾ ಅಣೆಕಟ್ಟೆ ಮುಂಭಾಗದ ಉದ್ಯಾನ, ಹಿನ್ನೀರಿನಲ್ಲಿರುವ ಗುಂಡಾ ಸಸ್ಯೋದ್ಯಾನ, ಲೇಕ್‌ ವ್ಯೂವ್‌ ಹಾಗೂ ರಾಷ್ಟ್ರೀಯ ಹೆದ್ದಾರಿ 50ರ ಮೇಲಿನ ಸೇತುವೆಯಲ್ಲಿ ದಿನವಿಡೀ ಜನಜಾತ್ರೆ ಇತ್ತು.

ಭಾನುವಾರ ಸಂಜೆ ಜಲಾಶಯದ ಎಲ್ಲ 33 ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ ನೀರು ಹರಿಸಲಾಯಿತು. ಈ ವಿಷಯ ಗೊತ್ತಾಗುತ್ತಿದ್ದಂತೆ ಸಂಜೆ ಏಕಾಏಕಿ ಜನದಟ್ಟಣೆ ಹೆಚ್ಚಾಯಿತು. ವಿವಿಧ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.

ಗುಂಡಾ ಸಸ್ಯೋದ್ಯಾನ ಹಾಗೂ ಲೇಕ್‌ ವ್ಯೂವ್‌ನಲ್ಲಿ ವಾಹನಗಳ ನಿಲುಗಡೆ ಜಾಗ ಭರ್ತಿಯಾಗಿತ್ತು. ಜನ ಎರಡ್ಮೂರು ಕಿ.ಮೀ. ದೂರದಲ್ಲಿ ವಾಹನಗಳನ್ನು ನಿಲ್ಲಿಸಿ, ನಡೆದುಕೊಂಡು ಹೋಗಿ ನೀರಿನ ಭೋರ್ಗರೆತ ನೋಡಿದರು.

ಕುಟುಂಬ ಸದಸ್ಯರೊಂದಿಗೆ ಹಿನ್ನೀರಿನಲ್ಲಿ ಮಿಂದೆದ್ದರು. ಮಧ್ಯ ವಯಸ್ಕರು ಮೋಜಿನಾಟವಾಡಿದರು. ಛಾಯಾಚಿತ್ರ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಪಾನಿಪುರಿ, ಕಡಲೆಕಾಯಿ, ಮೆಕ್ಕೆಜೋಳ ವ್ಯಾಪಾರಿಗಳು ಕೈತುಂಬ ಹಣ ಗಳಿಸಿದರು. ವಿಶ್ವವಿಖ್ಯಾತ ಹಂಪಿಯಲ್ಲೂ ಜನಜಾತ್ರೆ ಕಂಡು ಬಂತು. ಜನ ತಟದಲ್ಲಿ ನಿಂತುಕೊಂಡು ತುಂಗೆ ಮೈದುಂಬಿಕೊಂಡು ಹರಿಯುತ್ತಿರುವುದನ್ನು ನೋಡಿ ಪುಳಕಿತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT