ತೆಕ್ಕಲಕೋಟೆ: ಸಿರುಗುಪ್ಪ ವಲಯದ ಮೋಕಾ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಧುವಾಳ ಗ್ರಾಮದಲ್ಲಿ ಹಂದಿಗಳನ್ನು ಕಳವು ಮಾಡಿದ ಆರೋಪದ ಮೇಲೆ ಸಾರ್ವಜನಿಕರು ವ್ಯಕ್ತಿಯೊಬ್ಬನನ್ನು ಹಿಡಿದು ಥಳಿಸಿ ಠಾಣೆಗೆ ಒಪ್ಪಿಸಿದ ಘಟನೆ ಸೋಮವಾರ ನಡೆದಿದೆ.

ಸಿಂಧುವಾಳ ಗ್ರಾಮದ ಯರಗುಡಿ ರಾಮಾಂಜಿನಿ ಅವರ ಹಂದಿಗಳ ಹಟ್ಟಿಯಿಂದ ಹಂದಿಗಳನ್ನು ಆರೋಪಿ ಶಂಕರ ಕೋಲಿ ಹಾಗೂ ಇತರ ಇಬ್ಬರು ಬೊಲೆರೊ ವಾಹನದಲ್ಲಿ ಕಳವು ಮಾಡಿಕೊಂಡು ಹೋಗುವ ಸಂದರ್ಭದಲ್ಲಿ ಅವರನ್ನು ಸಾರ್ವಜನಿಕರು ಬೆನ್ನತ್ತಿ ಹಿಡಿದಿದ್ದಾರೆ.

ಯರಗುಡಿ ರಾಮಾಂಜಿನಿ ಅವರಿಗೆ ಸೇರಿದ 3 ಹಂದಿ, ಗೂಳ್ಯಂನ ಶಂಕರ ಅವರಿಗೆ ಸೇರಿದ 5 ಹಂದಿ ಒಟ್ಟು 8 ಹಂದಿ ಸಮೇತ ಸಿಕ್ಕಿಬಿದ್ದಿದ್ದು ಇವುಗಳ ಮೌಲ್ಯ ₹ 80 ಸಾವಿರ ಎಂದು ಅಂದಾಜಿಸಲಾಗಿದೆ.

ಸಾರ್ವಜನಿಕರು ಆರೋಪಿಯನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿದ್ದಾರೆ, ಈ ಸಂದರ್ಭದಲ್ಲಿ ಮತ್ತಿಬ್ಬರು ಪರಾರಿಯಾಗಿದ್ದಾರೆ. ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.