ಬಳ್ಳಾರಿ: ‘ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ಮದುವೆಯಾಗಿ, ಮಕ್ಕಳಿದ್ದಾರೆ. ಈ ಕಾರಣಕ್ಕೆ ಪದೇ ಪದೇ ವಿದೇಶಕ್ಕೆ ಹೋಗುತ್ತಾರೆ’ ಎಂದು ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಶನಿವಾರ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಲೇವಡಿ ಮಾಡಿದರು.

‘ಪಟ್ನಾದಲ್ಲಿ ನಡೆದ ವಿರೋಧ ಪಕ್ಷಗಳ ನಾಯಕರ ಸಭೆಯಲ್ಲಿ ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್, ಮದುವೆಯಾಗುವಂತೆ ರಾಹುಲ್‌ಗೆ ಸಲಹೆ ಮಾಡಿದರು. ಅದಕ್ಕವರು ನಕ್ಕರು. ಕಾಂಗ್ರೆಸ್ ನಾಯಕನಿಗೆ ವಿದೇಶದಲ್ಲಿ ಮದುವೆಯಾಗಿ, ಮಕ್ಕಳಿದ್ದಾರೆ. ನಮ್ಮ ದೇಶದವರಿಗೆ ಗೊತ್ತಿಲ್ಲ. ಇಲ್ಲಿ ಸನ್ಯಾಸಿಯಂತೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಓಡಾಡಿದ್ದಾರೆ. ನಾವು ತೋಡೊ, ಅವರು ಜೋಡೋ ಅಂತೆ’ ಎಂದು ವ್ಯಂಗ್ಯವಾಡಿದರು.

‘ದೇಶದ ಒಳಿತು ಮತ್ತು ಅಭಿವೃದ್ಧಿಗೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಬೇಕು. ನರೇಂದ್ರ ಮೋದಿ ಅವರೇ ಪುನಃ ಪ್ರಧಾನ ಮಂತ್ರಿ ಆಗಬೇಕು. ಇಲ್ಲದಿದ್ದರೆ ಈ ದೇಶ ಕೂಡಾ ಪಾಕಿಸ್ತಾನ, ಶ್ರೀಲಂಕಾದಂತೆ ದಿವಾಳಿಯಾಗುತ್ತದೆ. ಪಾಕಿಸ್ತಾನದಲ್ಲಿ ಕರೆಂಟ್ ಇಲ್ಲ. ಕತ್ತೆ ಕಟ್ಟಿ ಫ್ಯಾನ್ ತಿರುಗಿಸಿ ಕರೆಂಟ್ ಉತ್ಪಾದಿಸುತ್ತಾರೆ. ಆ ಸ್ಥಿತಿ ನಮ್ಮ ದೇಶಕ್ಕೆ ಬರುವುದು ಬೇಡ’ ಎಂದು ಅಭಿಪ್ರಾಯಪಟ್ಟರು.

‘ನರೇಂದ್ರ ಮೋದಿ ಅವರಿಗೆ ಇಡೀ ಜಗತ್ತು ಗೌರವ ಕೊಡುತ್ತಿದೆ. ಸದ್ಯ ಅಮೇರಿಕ ಪ್ರವಾಸದಲ್ಲಿ ಇರುವ ಪ್ರಧಾನಿ ಹೋದ ಕಡೆ ಎದೆ ಎತ್ತಿ ನಿಲ್ಲುತ್ತಾರೆ. ಅದೇ ಮನಮೋಹನ್ ಸಿಂಗ್ ಇದ್ದಾಗ ವಿದೇಶಗಳಲ್ಲಿ ನಡುಬಗ್ಗಿಸಿ, ತಲೆ ಬಗ್ಗಿಸಿ ನಿಲ್ಲುತ್ತಿದ್ದರು. ಇದೇ ವ್ಯತ್ಯಾಸ’ ಎಂದು ವೇದಿಕೆ ಮೇಲೆ ಅಭಿನಯಿಸಿ ಸೋಮಶೇಖರ ರೆಡ್ಡಿ ತೋರಿಸಿದರು.

‘ಕರ್ನಾಟಕದ ಜನ ಬಿಜೆಪಿಯನ್ನು ಸೋಲಿಸಿದ್ದಾರೆ. ಇದು ಬಿಜೆಪಿ ಸೋಲಲ್ಲ. ಗ್ಯಾರಂಟಿಗಳ ಗೆಲುವು. ಈ ತಪ್ಪನ್ನು ಲೋಕಸಭೆ ಚುನಾವಣೆಯಲ್ಲೂ ಮಾಡಿದರೆ ವಿಶ್ವ ಮೆಚ್ಚಿದ, ನಮ್ಮ ನೆಚ್ಚಿನ ಪ್ರಧಾನಿ ಅವರನ್ನು ಕಳೆದುಕೊಳ್ಳುತ್ತೇವೆ. ಹಾಗಾದರೆ ನಮ್ಮಷ್ಟು ದುರ್ದೈವಿಗಳು ಯಾರೂ ಇರೋದಿಲ್ಲ’ ಎಂದು ಮಾಜಿ ಶಾಸಕರು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.