ಬಳ್ಳಾರಿ: ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಕಳೆದ ವರ್ಷ ಬಯಲಾಗಿದ್ದ ನಕಲಿ ರಶೀದಿ (ಚಲನ್) ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಮಾತ್ರ ಎಫ್ಐಆರ್ ದಾಖಲಾಗಿತ್ತು. ಆದರೆ, 2023–24ನೇ ಸಾಲಿನ ಪಾಲಿಕೆ ಲೆಕ್ಕಪತ್ರ ಪರಿಶೋಧನಾ ಕರಡು ವರದಿಯಲ್ಲಿ ಹತ್ತಾರು ಹೆಸರುಗಳು ಉಲ್ಲೇಖವಾಗಿವೆ.

‘ಪಾಲಿಕೆಗೆ 2023-24ನೇ ಸಾಲಿನ ನೀರಿನ ಶುಲ್ಕ, ಯುಜಿಡಿ ಮತ್ತು ಎಸ್ಎಎಸ್ ತೆರಿಗೆಗಳನ್ನು ತೆರಿಗೆದಾರರಿಂದ ಸ್ವೀಕರಿಸಲಾಗಿದೆ. ಈ ವಿವರಗಳ ಪುಸ್ತಕ ಮತ್ತು ಬ್ಯಾಂಕ್ಗೆ ಜಮಾ ಮಾಡಿದ ಚಲನ್, ಬ್ಯಾಂಕ್ ಪಾಸ್ ಪುಸ್ತಕದ ವಿವರಗಳನ್ನು ಪರಿಶೀಲಿಸಿದಾಗ ಕರವಸೂಲಿಗಾರರು ವಸೂಲಿ ಮಾಡಿದ ಮೊತ್ತವನ್ನು ಪೂರ್ಣ ಪ್ರಮಾಣದಲ್ಲಿ ಬ್ಯಾಂಕ್ಗೆ ಜಮಾ ಮಾಡಿದ ಚಲನ್ಗಳನ್ನು ಲೆಕ್ಕಪರಿಶೋಧನೆಗೆ ಕೊಟ್ಟಿಲ್ಲ. ಇನ್ನೂ ಕೆಲವರು ಪೂರ್ಣ ಪ್ರಮಾಣದಲ್ಲಿ ಬ್ಯಾಂಕ್ಗೆ ಜಮಾ ಮಾಡಿಯೇ ಇಲ್ಲ. ಮತ್ತೊಂದಷ್ಟು ಮಂದಿ ತೆರಿಗೆ ವಸೂಲಿ ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನೇ ಹಾಜರುಪಡಿಸಿಲ್ಲ. ಇದು ಹಣ ದುರುಪಯೋಗ. ಈ ಕುರಿತು ಪತ್ರಕ್ಕೆ ಪಾಲಿಕೆ ವಿವರಣೆ ಕೊಟ್ಟಿಲ್ಲ’ ಎಂದು ಕರಡು ವರದಿಯಲ್ಲಿ ಹೇಳಲಾಗಿದೆ.

‘ಪಾಲಿಕೆಯ ವಲಯ2 ಮತ್ತು 3ರ ಮೂವರು ಕರವಸೂಲಿಗಾರರು ಒಟ್ಟು ₹16.10 ಲಕ್ಷಕ್ಕೆ ಸಂಬಂಧಿಸಿದ ಚಲನ್ಗಳನ್ನು ಲೆಕ್ಕಪರಿಶೋಧನೆಗೆ ಕೊಟ್ಟಿಲ್ಲ. ವಲಯ 1, 2, 3ರ ಒಟ್ಟು 7 ಮಂದಿ ಕರವಸೂಲಿಗಾರರು ಸಂಗ್ರಹಿಸಿದ ಒಟ್ಟು ತೆರಿಗೆಯಲ್ಲಿ ₹10.46 ಲಕ್ಷವನ್ನು ಬ್ಯಾಂಕ್ಗೆ ಕಟ್ಟಿಲ್ಲ. ವಲಯ 1 ಮತ್ತು 2ರ ಇಬ್ಬರು ಕರ ವಸೂಲಿಗಾರರು ಕ್ರಮವಾಗಿ ಸಂಗ್ರಹಿಸಿದ ₹15.31 ಲಕ್ಷ ಹಾಗೂ ₹20.05 ಲಕ್ಷ ಸೇರಿ ಒಟ್ಟು ₹35.36 ಲಕ್ಷಕ್ಕೆ ದಾಖಲೆಗಳನ್ನು ಹಾಜರುಪಡಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ತಿಳಿಸಲಾಗಿದೆ.

‘ಕೆಲವು ಕರವಸೂಲಿಗಾರರ ಬ್ಯಾಂಕ್ ಚಲನ್ಗಳನ್ನು ಪರಿಶೀಲಿಸಿದಾಗ ಬ್ಯಾಂಕ್ ಚಲನ್ ಮೊತ್ತಕ್ಕೂ ಮತ್ತು ಬ್ಯಾಂಕ್ ಖಾತೆಯಲ್ಲಿ ಸ್ವೀಕರಿಸಿದ ಮೊತ್ತಕ್ಕೂ ವ್ಯತ್ಯಾಸ ಕಂಡು ಬಂದಿದೆ. ಹೀಗಾಗಿ ಸಂಬಂಧಪಟ್ಟ ಸಿಬ್ಬಂದಿ ಮೇಲೆ ಆಯುಕ್ತರು ಕ್ರಮ ಕೈಗೊಳ್ಳಬೇಕು’ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ಷರಾ ಬರೆದಿದ್ದಾರೆ.

ಇದರ ಜತೆಗೇ, ಪಿಒಎಸ್ ಮಷೀನ್ ಮೂಲಕ ಸ್ವೀಕರಿಸಿದ ನೀರಿನ ಶುಲ್ಕ, ಯುಜಿಡಿ ಶುಲ್ಕ ಮತ್ತು ಎಸ್ಎಎಸ್ ತೆರಿಗೆಯ ವಿವರಗಳನ್ನು ಲೆಕ್ಕ ಪರಿಶೋಧನೆಗೆ ಪಾಲಿಕೆಯು ಹಾಜರುಪಡಿಸದೇ ಇರುವುದು ಗೊತ್ತಾಗಿದೆ.

ನಕಲಿ ರಶೀದಿ ಹಗರಣದಲ್ಲಿ ಪಾಲಿಕೆಯ ಸಹಾಯಕ ಕಂದಾಯ ಅಧಿಕಾರಿ ಮನೋಹರ್, ‘ಬಳ್ಳಾರಿ ಒನ್’ನ ಕುಮಾರ್, ಪಾಲಿಕೆಯ ಕರ ವಸೂಲಿಗಾರ ದೊಡ್ಡ ಬಸಪ್ಪ, ಸುರೇಶ್ ಎಂಬುವವರ ವಿರುದ್ಧ ಮಾತ್ರ ಪಾಲಿಕೆಯು ಈವರೆಗೆ ಕೇಸು ದಾಖಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.