ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಗಟಾಲೂರು ಯೋಜನೆ: ₹ 5.88 ಕೋಟಿ ಭೂ ಪರಿಹಾರ ಬಿಡುಗಡೆ

Published 18 ಜೂನ್ 2024, 15:47 IST
Last Updated 18 ಜೂನ್ 2024, 15:47 IST
ಅಕ್ಷರ ಗಾತ್ರ

ಹೂವಿನಹಡಗಲಿ: ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆ ನಿರ್ಮಾಣಕ್ಕೆ ಭೂ ಸ್ವಾಧೀನ ಪಡಿಸಿಕೊಂಡಿದ್ದ ರೈತರ ಜಮೀನುಗಳಿಗೆ ₹ 5.88 ಕೋಟಿ ಪರಿಹಾರ ಬಿಡುಗಡೆಯಾಗಿದೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ರೈತರಿಗೆ ಪರಿಹಾರದ ಚೆಕ್ ವಿತರಿಸಿ‌‌ ಮಾತನಾಡಿದರು.

‘ಸದ್ಯ ನಂದಿಹಳ್ಳಿ, ಮುದೇನೂರು, ಹೊಳಗುಂದಿ, ದಾಸರಹಳ್ಳಿ, 60-ಹಾಳ್ ತಿಮ್ಮಲಾಪುರ, 60-ತಿಮ್ಮಲಾಪುರ, ನವಲಿ ಗ್ರಾಮಗಳ 136 ರೈತರ 92.08 ಎಕರೆ ಜಮೀನಿಗೆ ಭೂ ಪರಿಹಾರ ಬಿಡುಗಡೆಯಾಗಿದೆ. ಇಂದು ಮುದೇನೂರು, ನಂದಿಹಳ್ಳಿ, ಹೊಳಗುಂದಿ, ದಾಸರಹಳ್ಳಿಯ 26 ರೈತರಿಗೆ 1.31 ಕೋಟಿ ರೂ. ಚೆಕ್ ವಿತರಿಸಿದ್ದೇವೆ. ಉಳಿದ ರೈತರಿಗೆ ನಂತರ ವಿತರಿಸುತ್ತೇವೆ’ ಎಂದು ಹೇಳಿದರು.

‘ಜಮೀನು ಸ್ವಾಧೀನಪಡಿಸಿಕೊಂಡು 16 ವರ್ಷಗಳಾಗಿವೆ. ಬಾಕಿ ಉಳಿದಿರುವ ಎಲ್ಲ ಪ್ರಕರಣಗಳಿಗೂ ಪರಿಹಾರ ಕೊಡಿಸುತ್ತೇವೆ. ರೈತರು ನೇರ ಖರೀದಿಗೆ ಒಪ್ಪಿದರೆ ಶೀಘ್ರ ಪರಿಹಾರ ಪಡೆಯಬಹುದು. ಒಪ್ಪಿತವಾಗದಿದ್ದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಮೂಲಕ ಪರಿಹಾರ ಕೊಡಿಸಲು ಪ್ರಯತ್ನಿಸುತ್ತೇನೆ’ ಎಂದು ತಿಳಿಸಿದರು.

ತಹಶೀಲ್ದಾರ್ ಅಂಬರೀಷ, ವಿಶೇಷ ಭೂ ಸ್ವಾಧೀನ ಕಚೇರಿ ಸಿಬ್ಬಂದಿ ಶೆಕ್ಷಾವಲಿ, ಬಾಷಾ, ಮಲ್ಲಿಕಾರ್ಜುನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT