ಪಶು ವೈದ್ಯರ ಕೊರತೆ ಇರುವುದು ಸತ್ಯ. ಇದು ರಾಜ್ಯದ ಪ್ರತಿ ಜಿಲ್ಲೆಗಳ ಸಮಸ್ಯೆ. ಆದರೆ, ‘ಮೈತ್ರಿ’ ತಂಡ ಮತ್ತು ‘ಪಶು ಸಖಿ’ಯರ ನೆರವಿನೊಂದಿಗೆ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದೇವೆ. ಪಶು ವೈದ್ಯರು ಇದ್ದರೆ ಹೆಚ್ಚಿನ ಅನುಕೂಲವಾಗಲಿದೆ.
– ವಿನೋದ್ ಕುಮಾರ್, ಉಪ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ, ಬಳ್ಳಾರಿ
ಬಳ್ಳಾರಿ ಮೂಲಕ ಆಂಧ್ರ, ತೆಲಂಗಾಣಕ್ಕೆ ನಿರಂತರವಾಗಿ ಆಕಳುಗಳನ್ನು ಸಾಗಿಸುತ್ತಿರುವುದನ್ನು ನಾವೇ ಪತ್ತೆ ಮಾಡಿದ್ದೇವೆ. ಹಲವು ಪ್ರಕರಣಗಳನ್ನು ನಾವೇ ಪೊಲೀಸ್ ಇಲಾಖೆಗೆ ತಿಳಿಸಿದ್ದೇವೆ. ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಬಿಗಿಯಾಗಬೇಕು.
– ಶ್ರೀರಾಮ್, ಹಿಂದೂ ಜಾಗರಣ ವೇದಿಕೆ, ಉತ್ತರ ಪ್ರಾಂತ ಕಾರ್ಯಕಾರಣಿ ಸದಸ್ಯರು
ಗೋವುಗಳು ಅಕ್ರಮ ಸಾಗಣೆಯಂಥ ಪ್ರಕರಣಗಳ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ವರ್ತಿಸುತ್ತದೆ. ಅಕ್ರಮ ಸಾಗಣೆ ಕುರಿತ ಮಾಹಿತಿಗಳನ್ನು ನಿರ್ಲಕ್ಷಿಸಿದ ಉದಾಹರಣೆಯೇ ಇಲ್ಲ. ಸೂಕ್ತ ದಾಖಲೆಳಿಲ್ಲದಿದ್ದರೆ ಪ್ರಕರಣ ಖಚಿತ.
ಡಾ. ಶೋಭಾರಾಣಿ ವಿ.ಜೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬಳ್ಳಾರಿ