ಹಗರಿಬೊಮ್ಮನಹಳ್ಳಿ: ಟ್ರ್ಯಾಕ್ಟರ್ ಬಂಪರ್ ಮುರಿದ ಪರಿಣಾಮ ಟ್ರೈಲರ್ನಲ್ಲಿ ಇದ್ದವರು ಕೆಳಗೆ ಬಿದ್ದು ತಾಲ್ಲೂಕಿನ ಆನೇಕಲ್ಲು ತಾಂಡಾದ ನಾಲ್ವರು ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕಮತಗಿ ಹೊರ ವಲಯದ ರಾಯಚೂರು- ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ.

ರುಕ್ಮಿಣಿಬಾಯಿ(28), ಶಿವಾನಿನಾಯ್ಕ(6), ರೋಷನ್ ನಾಯ್ಕ(4) ಸ್ಥಳದಲ್ಲಿಯೇ ಮೃತಪಟ್ಟರೆ, ಪಾಂಡುನಾಯ್ಕ(30) ಬಾಗಲಕೋಟೆಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ತಾಂಡಾದಿಂದ ಕಬ್ಬು ಕಟಾವು ಮಾಡಲು ಮೂರು ಕುಟುಂಬಗಳು ತೆರಳಿದ್ದವು. ಗ್ರಾಮದಲ್ಲಿ ದುರ್ಗಾಂಬಿಕಾ ಹಬ್ಬ ಇರುವ ಕಾರಣ ಹಿಂತಿರುಗಿ ಬರುವಾಗ ಅಪಘಾತ ಸಂಭವಿಸಿದೆ. ಕಮತಗಿಯಿಂದ ಬಾಗಲಕೋಟೆ ಕಡೆಗೆ ತೆರಳುತ್ತಿದ್ದರು. ರುಕ್ಮಣಿಬಾಯಿ ಗರ್ಭಿಣಿ ಇದ್ದರು, ಹೊಟ್ಟೆಯಲ್ಲಿದ್ದ 9 ತಿಂಗಳ ಶಿಶು ಕೂಡ ಮೃತಪಟ್ಟಿದೆ. ಈ ಕುರಿತಂತೆ ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.