ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕ್ಕೆ ಭಾರತೀಯ ಮೌಲ್ಯ ಸಾರಿದ ಸಂತ: ದಿವಾಕರ ನಾರಾಯಣ

Published 12 ಜನವರಿ 2024, 15:30 IST
Last Updated 12 ಜನವರಿ 2024, 15:30 IST
ಅಕ್ಷರ ಗಾತ್ರ

ಸಿರುಗುಪ್ಪ: 'ವಿವೇಕಾನಂದರು ತಮ್ಮ ತತ್ವಾದರ್ಶಗಳು, ಬದುಕಿದ ಹಾದಿ, ಯುವ ಜನತೆಗೆ ನೀಡಿದ ಸ್ಫೂರ್ತಿಯ ಕರೆಗಳಿಂದ ಅವರು ಎಂದೆಂದಿಗೂ ಪ್ರಪಂಚದ ಅಧ್ಯಾತ್ಮಿಕ ಗುರುವಾಗಿದ್ದಾರೆ' ಎಂದು ವಿಶೇಷ ಉಪನ್ಯಾಸ ನೀಡಿದ ದಿವಾಕರ ನಾರಾಯಣ ಹೇಳಿದರು.

ನಗರದ ತೆಕ್ಕಲಕೋಟೆ ಶ್ರೀಮತಿ ಹೊನ್ನೂರಮ್ಮ ಎಂ.ಸಿದ್ದಪ್ಪ ಸರ್ಕಾರಿ‌ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ ಘಟಕದಿಂದ ಶುಕ್ರವಾರ ನಡೆದ ರಾಷ್ಟ್ರೀಯ ಯುವದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

'ಮಾನವೀಯ ಮೌಲ್ಯಗಳ ಜೊತೆಗೆ ಸಮಗ್ರ ಏಕತೆಯ ಚಿಂತನಾ ಸಿದ್ಧಾಂತವನ್ನು ವಿಶ್ವಕ್ಕೆ ಬೋಧಿಸಿ ಯುವಜನತೆಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಸ್ವಾಮಿ ವಿವೇಕಾನಂದರ ಚಿಂತನೆ, ಆದರ್ಶ ಬದುಕು ಇಡೀ ವಿಶ್ವಕ್ಕೆ ದಾರಿದೀಪವಾಗಿದೆ' ಎಂದು ತಿಳಿಸಿದರು.

ವಿವೇಕಾನಂದರ ವಿಚಾರಗಳು ಪ್ರಸ್ತುತ ಯುವಜನಾಂಗಕ್ಕೆ ಅವಶ್ಯಕವಾಗಿವೆ ಎಂದು ಉಪನ್ಯಾಸಕ ಕೆ.ಎಂ. ಚಂದ್ರಕಾಂತ್ ಹೇಳಿದರು.

ರಾಷ್ಟ್ರೀಯ ಯುವದಿನ ಕಾರ್ಯಕ್ರಮದ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಪ್ರಾಂಶುಪಾಲ ಡಾ.ಟಿ.ವೀರಭದ್ರಪ್ಪ, ಉಪನ್ಯಾಸಕರಾದ ಯಮನೂರಪ್ಪ, ಕೊಟ್ರಪ್ಪ, ಅಂಬುತಾಯಿ, ಮಹೇಶ್ವರಿ, ಅಥಿತಿ ಉಪನ್ಯಾಸಕರಾದ ರಮಣ ಪುಜಾರಿ, ಡಾ. ರಾಮಕೃಷ್ಣ, ರುದ್ರಪ್ಪ, ಲಿಂಗಪ್ಪ, ವೈ.ಡಿ ಮಲ್ಲಿಕಾರ್ಜುನ, ಜಯಲಕ್ಷ್ಮಿ, ಉಷಾ, ಸುಕನ್ಯಾ, ರೋಜ ಮಹಾದೇವ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT