ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಡತಿನಿ: ವಾರಕ್ಕೊಮ್ಮೆ ಮಾತ್ರ ನೀರು ಪೂರೈಕೆ

ಪಟ್ಟಣಕ್ಕೆ ಆಸರೆಯಾದ 10 ಕೊಳವೆಬಾವಿ ನೀರು: ಸ್ಥಗಿತಗೊಂಡ ಜಲ ಶುದ್ಧೀಕರಣ ಘಟಕ
ಯರ್ರಿಸ್ವಾಮಿ ಬಿ.
Published 21 ಮಾರ್ಚ್ 2024, 5:45 IST
Last Updated 21 ಮಾರ್ಚ್ 2024, 5:45 IST
ಅಕ್ಷರ ಗಾತ್ರ

ಕುಡತಿನಿ (ತೋರಣಗಲ್ಲು): ಪಟ್ಟಣದಲ್ಲಿ ಕಳೆದ ಮೂರು ತಿಂಗಳಿಂದ ನೀರಿನ ಬವಣೆ ತೀವ್ರವಾಗಿದ್ದರಿಂದ ಪ್ರಸ್ತುತ ಪಟ್ಟಣದ ಎಲ್ಲ 19 ವಾರ್ಡ್‍ಗಳ ಜನರು ಕುಡಿಯುವ, ಬಳಕೆಯ ನೀರಿಗಾಗಿ ಕೊಳವೆ ಬಾವಿಗಳ ಪ್ಲೋರೈಡ್‍ಯುಕ್ತ ನೀರನ್ನೆ ಅವಲಂಬಿಸಿದ್ದಾರೆ.

ಪಟ್ಟಣದ ಕೆರೆಗೆ ತಿಮ್ಮಾಲಾಪುರ ಗ್ರಾಮದ ಹೊರವಲಯದಲ್ಲಿನ ತುಂಗಭದ್ರ ಮೇಲ್ಮಟ್ಟದ ಕಾಲುವೆಯ(ಎಚ್‍ಎಲ್‍ಸಿ)ನೀರನ್ನು ಪಟ್ಟಣ ಪಂಚಾಯಿತಿಯ ಪಂಪ್‍ಹೌಸ್ ನ ಮೂಲಕ ನಿರಂತರವಾಗಿ ಪೂರೈಕೆ ಮಾಡಲಾಗುತ್ತಿತ್ತು ಮಳೆಯ ಕೊರೆತೆಯಿಂದ ಕಾಲುವೆಯ ನೀರು ಸ್ಥಗಿತಗೊಂಡ ಪರಿಣಾಮ ಪಟ್ಟಣದ ಜನರು ನಿತ್ಯ ನೀರಿಗಾಗಿ ಪರದಾಡುವಂತಾಗಿದೆ.

ಪಟ್ಟಣದ 19 ವಾರ್ಡ್‍ಗಳಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಜನ ವಾಸ ಮಾಡುತ್ತಿದ್ದು, ಎಲ್ಲ ವಾರ್ಡ್‍ಗಳ ಜನರು ಬಳಕೆಯ, ಕುಡಿಯುವ ನೀರಿಗಾಗಿ ತಮ್ಮ ವಾರ್ಡ್‍ಗಳಲ್ಲಿನ ಕೊಳವೆ ಬಾವಿಗಳ ನೀರನ್ನೆ ನೆಚ್ಚಿಕೊಂಡಿದ್ದಾರೆ.

ಜನರ ನೀರಿನ ಬವಣೆ ನೀಗಿಸಲು ಪಂಚಾಯಿತಿ ವತಿಯಿಂದ ಒಟ್ಟು 45 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಅವುಗಳಲ್ಲಿ 10 ಕೊಳವೆಬಾವಿಗಳು ಮಳೆಯ ಅಭಾವದಿಂದ ನೀರಿಲ್ಲದೆ ಸಂಪೂರ್ಣವಾಗಿ ಬತ್ತಿವೆ. ಇನ್ನೂಳಿದ 15 ಕೊಳವೆ ಬಾವಿಗಳಲ್ಲಿ ಅಂತರ್ಜಲದ ಪ್ರಮಾಣ ಕುಸಿದ ಪರಿಣಾಮ ಜನರು ಹಗಲು ರಾತ್ರಿ ನೀರಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪಂಚಾಯಿತಿಯವರು ನೀರಿನ ಸಮಸ್ಯೆಯ ನಿವಾರಣೆಗಾಗಿ ತಿಮ್ಮಲಾಪುರ ಗ್ರಾಮದ ಬಳಿ 5 ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ. ಆ ನೀರನ್ನು ಪೈಪ್‍ಲೈನ್ ಮೂಲಕ ಕೆರೆಯ ಆವರಣದಲ್ಲಿನ ನೆಲಮಟ್ಟದ ಟ್ಯಾಂಕರ್‌ಗೆ ಪೂರೈಕೆ ಮಾಡಿ, ಸರತಿಯಂತೆ ಒಂದು ವಾರ್ಡ್‍ಗೆ ವಾರಕ್ಕೊಮ್ಮೆ ಮಾತ್ರ ನೀರು ಬಿಡುತ್ತಿದ್ದಾರೆ.

5 ಮತ್ತು 6ನೇ ವಾರ್ಡ್‍ಗಳು ಪಟ್ಟಣದ ಎತ್ತರದ ಪ್ರದೇಶದಲ್ಲಿ ಜನ ವಸತಿ ಇರುವುದರಿಂದ ಈ ಎರಡು ವಾರ್ಡ್‍ಗಳಿಗೆ ಕೆರೆಯ ನೀರು ಸಕಾಲಕ್ಕೆ ಸರಬರಾಜು ಆಗುವುದಿಲ್ಲ. ಇಲ್ಲಿನ ಜನರು ನೀರಿಗಾಗಿ ಹಲವಾರು ವರ್ಷಗಳಿಂದ ಪರಿತಪಿಸುವುದು ಸಾಮಾನ್ಯವಾಗಿದೆ. ಎರಡು ವಾರ್ಡ್‍ಗಳಲ್ಲಿ ವ್ಯವಸ್ಥಿತ ಪೈಪ್‍ಲೈನ್ ಕಾಮಗಾರಿ ಹಮ್ಮಿಕೊಂಡು ಜನರಿಗೆ ನಿರಂತರವಾಗಿ ನೀರಿನ ವ್ಯವಸ್ಥೆ ಕಲ್ಪಿಸಬೇಕು’ ಎನ್ನುವುದು ಇಲ್ಲಿನ ನಿವಾಸಿಗಳ ಒತ್ತಾಯವಾಗಿದೆ.

ಸ್ಥಗಿತಗೊಂಡ ಜಲ ಶುದ್ದೀಕರಣ ಘಟಕ: ಕೆರೆಯ ಆವರಣದಲ್ಲಿ ನಗರೋತ್ಥಾನ ಅನುದಾನದಲ್ಲಿ 2.38 ಎಂ.ಎಲ್.ಡಿ ಸಾಮರ್ಥ್ಯದ ಆನ್‍ಲೈನ್ ಮೈಕ್ರೋಸ್ಕ್ರೀನ್ ಜಲ ಶುದ್ಧೀಕರಣ ಘಟಕವನ್ನು ₹ 1.88 ಕೋಟಿ ವೆಚ್ಚದಲ್ಲಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಮಳೆಯ ಅಭಾವ, ಎಚ್‍ಎಲ್‍ಸಿ ಕಾಲುವೆಯ ನೀರು ಸ್ಥಗಿತಗೊಂಡ ಪರಿಣಾಮ ಕೆರೆಯಲ್ಲಿ ನೀರಿನ ಸಂಗ್ರಹದ ಪ್ರಮಾಣ ಕಡಿಮೆಯಾಗಿದ್ದರಿಂದ ಪಂಚಾಯಿತಿಯವರು ಜಲ ಶುದ್ಧೀಕರಣ ಕಾರ್ಯವನ್ನು ಕಳೆದ ಮೂರು ತಿಂಗಳಿಂದ ಸಂಪೂರ್ಣವಾಗಿ ನಿಲ್ಲಿಸಿದ್ದಾರೆ.‌

ತಿಮ್ಮಲಾಪುರ ಗ್ರಾಮದ ಹೊರವಲಯದ ಕೊಳವೆ ಬಾವಿಗಳಿಂದ ನೀರನ್ನು ಪೈಪ್‍ಗಳ ಮೂಲಕ ಪೂರೈಕೆ ಮಾಡಲಾಗುತ್ತಿದೆ
ತಿಮ್ಮಲಾಪುರ ಗ್ರಾಮದ ಹೊರವಲಯದ ಕೊಳವೆ ಬಾವಿಗಳಿಂದ ನೀರನ್ನು ಪೈಪ್‍ಗಳ ಮೂಲಕ ಪೂರೈಕೆ ಮಾಡಲಾಗುತ್ತಿದೆ
ಜಿ.ಸೂರ್ಯಕಾಂತ್ ಖಾರ್ವಿ 
ಜಿ.ಸೂರ್ಯಕಾಂತ್ ಖಾರ್ವಿ 
ಜಂಗ್ಲಿಸಾಬ್
ಜಂಗ್ಲಿಸಾಬ್
ಕೆ.ಎಂ.ಹಾಲಪ್ಪ
ಕೆ.ಎಂ.ಹಾಲಪ್ಪ
ಪಟ್ಟಣದಲ್ಲಿ ನೀರಿನ ಸಮಸ್ಯೆಯಾಗದಂತೆ ತಿಮ್ಮಲಾಪುರ ಗ್ರಾಮದ ಬಳಿ ಎರಡು ಕೊಳವೆಬಾವಿ ಕೊರೆಸಲಾಗಿದೆ. ನೀರಿನ ಸಮಸ್ಯೆಯಾಗದಂತೆ ನಿಗಾ ವಹಿಸಲಾಗುವುದು
ಜಿ.ಸೂರ್ಯಕಾಂತ್ ಖಾರ್ವಿ ಮುಖ್ಯಾಧಿಕಾರಿ ಕುಡತಿನಿ
ಬೇಸಿಗೆಕಾಲ ಆರಂಭವಾಗಿದ್ದರಿಂದ ಪಟ್ಟಣದಲ್ಲಿ ನೀರಿನ ಸಮಸ್ಯೆ ಬಹಳ ತೀವ್ರವಾಗಿದ್ದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ನೀರಿನ ಬವಣೆಯಾಗದಂತೆ ಸೂಕ್ತ ಕ್ರಮವಹಿಸಬೇಕು
ಜಂಗ್ಲಿಸಾಬ್ ಕರವೇ ಮುಖಂಡ
ಪಟ್ಟಣದ 5 ಮತ್ತು 6ನೇ ವಾರ್ಡ್‍ಗಳು ಎತ್ತರದ ಪ್ರದೇಶದಲ್ಲಿರುವುದರಿಂದ ಕೆರೆಯ ನೀರು ಈ ಸ್ಥಳಕ್ಕೆ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಇಲ್ಲಿನ ನಿವಾಸಿಗಳು ಹಲವಾರು ವರ್ಷಗಳಿಂದ ನೀರಿಗಾಗಿ ಪರದಾಡುತ್ತಿದ್ದಾರೆ
ಕೆ.ಎಂ.ಹಾಲಪ್ಪ ಪಟ್ಟಣ ಪಂಚಾಯಿತಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT