ಕಂಪ್ಲಿ: ‘ಕಾರ್ಮಿಕರಿಗೆ ಸಾಮಾಜಿಕ ಆರ್ಥಿಕ ಭದ್ರತೆ ಅಗತ್ಯ’ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟದ ಜಿಲ್ಲಾ ಕೋಶಾಧ್ಯಕ್ಷ ವಿ. ದೇವಣ್ಣ ಹೇಳಿದರು.

ತಾಲ್ಲೂಕಿನ ದೇವಲಾಪುರ ಗ್ರಾಮದಲ್ಲಿ ಶುಕ್ರವಾರ ನಡೆದ ಕಾರ್ಮಿಕರ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು, ‘ಸಮಾನ ಕೆಲಸಕ್ಕೆ ಸಮಾನ ವೇತನ ಎನ್ನುವುದು ಕಾರ್ಮಿಕರಿಗೆ ಇಂದಿಗೂ ಮರೀಚಿಕೆಯಾಗಿದೆ. ಕಾರ್ಮಿಕ ಕಲ್ಯಾಣ ಮಂಡಳಿಯಿಂದ ದೊರೆಯುವ ಸೌಲಭ್ಯಗಳನ್ನು ಪಡೆಯಲು ಕಾರ್ಮಿಕರು ಇಂದಿಗೂ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಒಕ್ಕೂಟದ ಕಾರ್ಯದರ್ಶಿ ಆರ್.ನಾಗರಾಜ, ‘1996ರ ಕಾರ್ಮಿಕ ಕಾಯ್ದೆ’ ಕುರಿತು ಮಾತನಾಡಿದರು.

ಕಂಪ್ಲಿ ಒಕ್ಕೂಟದ ಅಧ್ಯಕ್ಷ ಐ. ಹೊನ್ನೂರಸಾಬ್, ದೇವಲಾಪುರ ಗ್ರಾಮ ಘಟಕದ ಅಧ್ಯಕ್ಷ ಕಾನೀರ್ ಮಲೆಪ್ಪ, ಪದಾಧಿಕಾರಿಗಳಾದ ಕಲ್ಡಳ್ಳಿ ಬಸವ, ಕರೆಗೌಡ್ರು ಹನುಮೇಶ, ಪರಶುರಾಮ, ಕುಂಬಾರ ಚಿದಾನಂದ, ಸದಸ್ಯರಾದ ಶಿವರಾಜ್ ಕುಮಾರ್, ಚಿಕ್ಕಣ್ಣ, ಸೋಮಣ್ಣ, ದೇವರಾಜ್, ನಾಗರಾಜ್, ರಾರಾವಿ ವೀರೇಶ್, ಎನ್. ಗೋವಿಂದ, ಶೇಕ್ಷಾವಲಿ, ಕಲ್ಡಳ್ಳಿ ಕಲ್ಲಪ್ಪ, ಗೊರವರ ಹಳ್ಳಪ್ಪ, ತಿಪ್ಪೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.