ಬಳ್ಳಾರಿ: ಮೇ5 ರಿಂದ ಜಾತಿ ಜನಗಣತಿ ಸಮೀಕ್ಷೆೆ ಆರಂಭವಾಗಲಿದ್ದು, ಸಮೀಕ್ಷೆೆ ವೇಳೆ ಉಪಜಾತಿಗಳ ಹೆಸರುನ್ನು ಕಡ್ಡಾಯವಾಗಿ ಬರೆಸಬೇಕು ಎಂದು ರಾಜ್ಯ ಎಸ್ಸಿ ಎಸ್ಟಿ ಅಲೆಮಾರಿ ಬುಡಕಟ್ಟು ಮಹಾಸಭಾದ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆೆಯ ಅಲೆಮಾರಿ ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿರುವ ಸಿಂದೋಳ್ಳು, ಬೇಡ/ಬುಡ್ಗ ಜಂಗಮ, ದಕ್ಕಲಿಗ, ಹಂದಿಜೋಗಿ, ಶಿಳ್ಳೇಕ್ಯಾತ, ದೊಂಬರು, ಚನ್ನದಾಸರು, ಸುಡುಗಾಡುಸಿದ್ದರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಔದ್ಯೋಗಿಕ ಪ್ರಾತಿನಿಧ್ಯ ಮತ್ತು ಸಮುದಾಯಗಳ ಸ್ಥಿತಿಗತಿಗೆ ಸಮೀಕ್ಷೆೆ ಮಾಡುವುದು ಆಯೋಗದ ಉದ್ದೇಶವಾಗಿದೆ’ ಎಂದು ತಿಳಿಸಿದರು.

‘ಅಲೆಮಾರಿ ಪರಿಶಿಷ್ಟ ಜಾತಿಗೆ ಸೇರಿರುವ ಈ ಸಮುದಾಯಗಳ ಅಂಕಿ ಸಂಖ್ಯೆೆಗಳ ಮಾಹಿತಿ ಸಮೀಕ್ಷೆಯಿಂದ ಸರ್ಕಾರಕ್ಕೆ ತಿಳಿಯಲಿದೆ. ಸಮೀಕ್ಷೆೆ ವೇಳೆ ಸಮುದಾಯದವರು ಜವಾಬ್ದಾರಿಯುತವಾಗಿ ವರ್ತಿಸಬೇಕು. ಜಾತಿಗಣತಿ ಕಾರ್ಯ ಪೂರ್ಣಗೊಳ್ಳವವರೆಗೂ ಜಾತ್ರೆೆ, ಉತ್ಸವ, ಹಬ್ಬ, ಜಯಂತಿಗಳ ಆಚರಣೆಯಲ್ಲಿ ತೊಡಗಬಾರದು. ಪರಿಶಿಷ್ಟ ಜಾತಿಯವರು ತಮ್ಮ ಉಪಜಾತಿಯನ್ನು ಕಡ್ಡಾಯವಾಗಿ ಬರೆಸುವ ಕುರಿತು ಜಿಲ್ಲೆೆ, ತಾಲೂಕು, ಗ್ರಾಮ, ಹೋಬಳಿ, ವಾರ್ಡ್ಗಳಲ್ಲಿ ಜಿಲ್ಲಾ ಮಟ್ಟದ ಅಲೆಮಾರಿ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದರು.

ಸಂಘಟನೆ ಮುಖಂಡರಾದ ಡಿ.ರಂಗಯ್ಯ, ರಾಮಾಂಜಿನಿ, ಹುಚ್ಚಪ್ಪ, ಹನುಮಂತಪ್ಪ, ಗಾದಿಲಿಂಗ, ಹುಲುಗಣ್ಣ ಸೇರಿ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.