ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದ್ದೂ ಇಲ್ಲದಂತಾಗಿರುವ ಉದ್ಯಾನ

Last Updated 11 ಮಾರ್ಚ್ 2013, 6:19 IST
ಅಕ್ಷರ ಗಾತ್ರ

ಬಳ್ಳಾರಿ: ಸ್ಥಳೀಯ ಗಾಂಧಿ ನಗರದಲ್ಲಿ ಇರುವ ಹಳೆಯ ಜಿಲ್ಲಾ ಆಸ್ಪತ್ರೆಯ ಪಕ್ಕದ ಐವತ್ತು ವರ್ಷಗಳಷ್ಟು ಹಳೆಯ ದಾದ ಈ ಉದ್ಯಾನವು ಹಾಳಾಗಿದ್ದು, ಬಡಾವಣೆಯ ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿದೆ.

1978 ರಲ್ಲಿ ಭಿವೃದ್ಧಿಪಡಿಸಲಾಗಿದ್ದ ಈ ಉದ್ಯಾನಕ್ಕೆ ಸ್ವಾತಂತ್ರ್ಯ ಹೋರಾಟ ಗಾರ ಗೋಪಾಲಸ್ವಾಮಿ ಮೊದಲಿ ಯಾರ ಅವರ ಹೆಸರಿಡಲಾಗಿತ್ತು. ಈ ಹಿಂದೆ ಹಾಳಾಗಿದ್ದ ಈ ಉದ್ಯಾನವನ್ನು ಅಭಿವೃದ್ಧಿ ಪಡಿಸಲಾಗಿತ್ತಾದರೂ, ಗಾಂಧಿನಗರದ ಸುತ್ತಮುತ್ತಲೂ ಇರುವ ಸಾರ್ವಜನಿಕರ ವಾಯು ವಿಹಾರಕ್ಕಾಗಿ ಹಾಗೂ ವಿಶ್ರಾಂತಿಗಾಗಿ ಉದ್ಯಾನದಲ್ಲಿ ಹಚ್ಚ ಹಸಿರ ಗಿಡಮರ, ಹುಲ್ಲು ಹಾಸು, ಮತ್ತಿತರ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ಆದರೆ ಈ ಕುರಿತು ಕಾಳಜಿ ವಹಿಸದೆ ಇದ್ದುದರಿಂದ ಇದೀಗ ಉದ್ಯಾನವು  ಕಲ್ಲು, ಮಣ್ಣು, ಪ್ಲಾಸ್ಟಿಕ್, ಕಸ, ಕಡ್ಡಿ ಇತ್ಯಾದಿ ತ್ಯಾಜ್ಯ ವಸ್ತುಗಳಿಂದ ಸಂಪೂರ್ಣ ತಿಪ್ಪೆಯಂತೆ ಗೋಚರಿಸು ತ್ತಿದೆ. ಆದರೆ, ಸುಮಾರು 20 ವರ್ಷ  ಗಳಿಂದ ಈಚೆಗೆ ಸ್ಥಳೀಯ ಸಂಸ್ಥೆಯ ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ಈ ಉದ್ಯಾನವು ಇದ್ದೂ ಇಲ್ಲದಂತಾಗಿದೆ.

ಈ ಭಾಗದ  ನಾಗರಿಕರ ಅನುಕೂಲ ಕ್ಕಾಗಿ ಉದ್ಯಾನದ ಮಧ್ಯಭಾಗದಲ್ಲಿ ಅನೇಕ ವರ್ಷಗಳಿಂದ ನೀರಿನ ಟ್ಯಾಂಕ್‌ನ್ನು ನಿರ್ಮಿಸಲಾಗಿತ್ತು. ಇದೀಗ ಈ ನೀರಿನ ಟ್ಯಾಂಕ್ ಶಿಥಿಲ ಗೊಂಡಿದ್ದು, ಅದರ ಪಕ್ಕದಲ್ಲೇ ಮತ್ತೊಂದು ನೂತನ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ.

ಶಿಥಿಲಗೊಂಡಿರುವ ಹಳೆಯ ನೀರಿನ ಟ್ಯಾಂಕ್‌ನ್ನು ನೆಲಸಮಗೊಳಿಸದೇ ಈ ಜಾಗವನ್ನು ಆಕ್ರಮಿಸಿದಂತಾಗಿದೆ.ಹಳೆಯ ಟ್ಯಾಂಕ್‌ನ್ನು ಶೀಘ್ರದಲ್ಲೇ ತೆರವುಗೊಳಿಸಿ, ಉಳಿದ ಭಾಗದಲ್ಲಿ ಉದ್ಯಾನವನ್ನು ಅಭಿವೃದ್ಧಿಪಡಿಸಿದಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗುತ್ತದೆ ಎಂದು ಗಾಂಧಿನಗರದ ನಿವಾಸಿ ಮೇಘ ರಾಜ್ `ಪ್ರಜಾವಾಣಿಗೆ' ತಿಳಿಸಿದರು.

ಐವತ್ತು ವರ್ಷ ಹಳೆಯದಾದ ಹಾಗೂ ಗಾಂಧಿನಗರದ ಹಲವಾರು ಬಡಾವಣೆಗಳ ಸಾರ್ವಜನಿಕರ ವಾಯುವಿಹಾರಕ್ಕೆ ಕೇವಲ ಇದೊಂದೇ ಉದ್ಯಾನ ಇದೆ. ಇದೀಗ ನಗರದ ಹೊಸ ಕಾಲೊನಿ ಹಾಗೂ ಬಡಾವಣೆಗಳಲ್ಲಿ  ಪಾಲಿಕೆಯ ನೆರವಿನೊಂದಿಗೆ ಹೊಸ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ಉದ್ಯಾನಗಳಿಗೆ ಮೊದಲೇ ಪ್ರತ್ಯೇಕ ನಿವೇಶನ ಕಾಯ್ದಿರಿಸಲಾಗುತ್ತದೆ.

ಆದರೆ, ಈಗಾಗಲೇ ಈ ಸ್ಥಳದಲ್ಲಿ  ಅಗತ್ಯವಿರುವ ನೀವೇಶನವೂ ಇದ್ದು, ಅನುಕೂಲಕರ ವ್ಯವಸ್ಥೆಯೂ ಇದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಕಡೆ ಗಮನ ಹರಿಸದಿರುವುದು ಬಡಾವಣೆಯ ಜನತೆಯಲ್ಲಿ ಬೇಸರ ಮೂಡಿಸಿದೆ.

ಪ್ರತಿದಿನ ಬೆಳಗಿನ ಜಾವ ಹಾಗೂ ಸಂಜೆಯ ವೇಳೆಗೆ ಉದ್ಯಾನದಲ್ಲಿ ವಾಯುವಿಹಾರಕ್ಕಾಗಿ ಹಾಗೂ ವಿಶ್ರಾಂತಿ ಪಡೆಯಲು ಆಗಮಿಸುತ್ತಿದ್ದ ಬಡಾವಣೆಯ ವೃದ್ಧರು, ಯುವಕರು, ಮಕ್ಕಳು ಹಾಗೂ ಮಹಿಳೆಯರಿಗೆ ಗತಿಸಿ ಹೋಗಿರುವ ಈ ಉದ್ಯಾನದ ನೆನಪು ಮಾತ್ರ ಮಾಸದಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು  ಈ ಕಡೆ ಗಮನಹರಿಸಿ ಸಾರ್ವಜನಿಕರ ಅನು ಕೂಲಕ್ಕಾಗಿ ಉದ್ಯಾನದ ಅಭಿವೃದ್ಧಿ ಕೈಗೊಳ್ಳಬೇಕಾಗಿದೆ ಎಂಬುದು ಸ್ಥಳೀಯರ ಕೋರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT