ಕೂಡ್ಲಿಗಿ: ತಾಲ್ಲೂಕಿನಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ಒಟ್ಟು 9 ಡೆಂಗೆ ಪ್ರಕರಣಗಳು ದೃಢಪಟ್ಟಿವೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗುರು ಬಸಪ್ಪ ತಿಳಿಸಿದ್ದಾರೆ. ತಿಮ್ಮಲಾಪುರದಲ್ಲಿ 3, ಕೊಟ್ಟೂರಿನ್ಲ್ಲಲಿ 5, ಉಜ್ಜಯಿನಿಯಲ್ಲಿ 1 ಪ್ರಕರಣ ದೃಢಪಟ್ಟಿದ್ದು, ಎಲ್ಲರೂ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಅಮರದೇವರಗುಡ್ಡ ಹಾಗೂ ತಾಂಡಾದಲ್ಲಿ ಇತ್ತೀಚೆಗೆ ಜ್ವರದಿಂದ ಮರಣ ಹೊಂದಿದ ರಾಧಿಕಾ(7) ಎಂಬ ಬಾಲಕಿಯು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದರಿಂದ ಮರಣಕ್ಕೆ ಕಾರಣ ವಾದ ನಿಖರವಾದ ದಾಖಲೆಗಳು ಲಭ್ಯ ವಾಗಿಲ್ಲ ಎಂದು ಅವರು ಹೇಳ್ದ್ದಿದಾರೆ. ಪ್ರಸ್ತುತ ಅಮರದೇವರಗುಡ್ಡ ಹಾಗೂ ತಾಂಡಾದ್ಲ್ಲಲಿ ಮುಂಜಾಗ್ರತಾ ಕ್ರಮವಾಗಿ ವೈದ್ಯರು, ಸಿಬ್ಬಂದಿ ಹಾಗೂ ತಾತ್ಕಾಲಿಕ ಚಿಕಿತ್ಸಾ ಕೇಂದ್ರ, ತುರ್ತು ಚಿಕಿತ್ಸಾ ವಾಹನವನ್ನು ಒದಗಿಸಲಾಗಿದೆ ಎಂದು ಹೇಳಿದ್ದಾರೆ.

ಪರಿಸ್ಥಿತಿ ಸಂಪೂರ್ಣ ಹತೋಟಿ ಯಲ್ಲಿದ್ದು, ಗ್ರಾಮದಲ್ಲಿ ಫಾಗಿಂಗ್ ಮಾಡುವಂತೆ ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ನಿಯಮಿತವಾಗಿ ಕುಡಿಯುವ ನೀರಿನ ಸರಬರಾಜು ಇಲ್ಲದಿರುವುದರಿಂದಾಗಿ ಜನರು ನೀರನ್ನು ಸಂಗ್ರಹಿಸುತ್ತಾರೆ. ಇವುಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ರೋಗ ಹರಡುತ್ತಿರಬಹುದು ಎಂದು ತಿಳಿಸಿದರು.

ಮುಂಜಾಗ್ರತಾ ಕ್ರಮ: ಅಮರ ದೇವರಗುಡ್ಡ ಹಾಗೂ ತಾಂಡಾದಲ್ಲಿ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಶನಿವಾರ ಗ್ರಾಮದಲ್ಲಿ ಕ್ರಿಮಿ ನಾಶಕ ಸಿಂಪಡಿಸಲಾಗಿದೆ. ಭಾನುವಾರ ಸೊಳ್ಳೆಗಳನ್ನು ನಿಯಂತ್ರಿಸಲು ಫಾಗಿಂಗ್ ಮಾಡಲಾಗಿದೆ. ಗ್ರಾಮಸ್ಥರಿಗೆ ತಿಳಿವಳಿಕೆಯನ್ನೂ ನೀಡಲಾಗಿದೆ.

ಆರೋಗ್ಯ ನಿರೀಕ್ಷಕರಾದ ಟಿ.ಎನ್. ಲತಾ, ಪ್ರಭಾಕರ್, ಪರಶುರಾಮಪ್ಪ ಇತರ ಪೌರ ಕಾರ್ಮಿಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.