ಬಳ್ಳಾರಿ: ನಗರವೂ ಒಳಗೊಂಡಂತೆ ತಾಲ್ಲೂಕಿನ ವಿವಿಧೆಡೆ ಸೋಮವಾರ ಸಂಜೆ ಸುರಿದ ಮಳೆಯಿಂದಾಗಿ, ಬರ ಗಾಲದ ಭೀತಿಯಲ್ಲಿದ್ದ ರೈತ ಸಮೂಹಕ್ಕೆ ಅಲ್ಪ ಪ್ರಮಾಣದ ನೆಮ್ಮದಿ ದೊರೆಯಿತು.ಬೆಳಿಗ್ಗೆಯಿಂದ ಭಾರಿ ಬಿಸಿಲು ಆವರಿಸಿ, ಸೆಕೆ ವಾತಾವರಣ ನಿರ್ಮಾಣ ಆಗಿದ್ದರಿಂದ ಮಳೆ ಸುರಿಯುವ ಮುನ್ಸೂಚನೆ ದೊರೆತಿತ್ತು.

ಮಧ್ಯಾಹ್ನ 2.30ರ ವೇಳೆಗೆ ಕಪ್ಪಿಟ್ಟ ಮೋಡಗಳು, ಇಳಿಸಂಜೆಯನ್ನು ನೆನಪಿಸುವಂತೆ ಮಾಡಿದವಲ್ಲದೆ, ಒಂದು ಗಂಟೆಗೂ ಅಧಿಕ ಕಾಲ ಮಳೆ ಸುರಿಸಿ ಇಳೆಗೆ ತಂಪನ್ನೆರೆದವು.

ಸಂಚಾರ ಅಸ್ತವ್ಯಸ್ತ: ಭಾರಿ ಮಳೆ ಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಬಡಜನತೆ ವಾಸಿಸುವ ಸ್ಥಳದಲ್ಲಿ ಸಮಸ್ಯೆ ಕಂಡುಬಂದರೆ, ಹಳೆಯ ಬಸ್ ನಿಲ್ದಾಣ, ತಹಸೀಲ್ದಾರ್ ಕಚೇರಿ, ರೈಲ್ವೆ ಕೆಳ ಸೇತುವೆ, ಗಾಂಧಿ ನಗರದಲ್ಲಿರುವ ಅಲ್ಲಂ ಸುಮಂಗಲಮ್ಮ ಮಹಿಳಾ ಕಾಲೇಜು ರಸ್ತೆಗಳಲ್ಲಿ ಎರಡು ಅಡಿ ಯವರೆಗೆ ನೀರು ನಿಂತು ವಾಹನಗಳು ಪರದಾಡಿದವು.

ಹಳೆ ಬಸ್ ನಿಲ್ದಾಣದ ಆವರಣ ದಿಂದ ಪ್ರಯಾಣಿಕರು ಒಳಗೂ, ಹೊರಗೂ ಹೋಗದಂತಹ ಸ್ಥಿತಿ ನಿರ್ಮಾಣವಾಗಿತ್ತು. ದುರ್ಗಮ್ಮ ದೇವಸ್ಥಾನ ರಸ್ತೆ ಹಾಗೂ ಎಸ್.ಎನ್. ಪೇಟೆ ಬಳಿಯ ರೈಲ್ವೆ ಕೆಳ ಸೇತುವೆಯಲ್ಲಿ ನೀರು ನುಗ್ಗಿ ದ್ವಿಚಕ್ರ ವಾಹನ ಸವಾ ರರು ಪರದಾಡುವಂತಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.