ಬಳ್ಳಾರಿ: ರೋಗನಿರೋಧಕ ಲಸಿಕೆ ಹಾಕಿಸಿಕೊಂಡ ಕೆಲವೇ ಗಂಟೆಗಳ ಅವಧಿ ಯಲ್ಲಿ ಅಸ್ವಸ್ಥವಾಗಿ ನಗರದ ವಿಜಯ ನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ) ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಜಿಲ್ಲೆಯ ಹೊಸಪೇಟೆಯ 9 ತಿಂಗಳ ಹಸುಗೂಸು ಮಹಮ್ಮದ್ ಫೈಜಾನ್ ಇದೀಗ ಚೇತರಿಸಿಕೊಳ್ಳುತ್ತಿದೆ.

ವೈದ್ಯರ ಸಲಹೆಯ ಮೇರೆಗೆ ಮಧ್ಯಾಹ್ನ ವಿಮ್ಸಗೆ ತಮ್ಮ ಮಗುವನ್ನು ಕರೆತಂದಿರುವ ತಂದೆ ಪಿ.ಸಿರಾಜ್ ಹಾಗೂ ತಾಯಿ ಶಮೀಮ್ ಅವರಲ್ಲಿನ ದುಗುಡ ಸಂಜೆಯ ವೇಳೆಗೆ ದೂರವಾಗಿದೆ.

`ಬುಧವಾರ ರಾತ್ರಿ ವಾಂತಿ- ಭೇದಿ ಯಿಂದ ನರಳಿ ತೀವ್ರ ಅಸ್ವಸ್ಥನಾಗಿದ್ದ ಮಹಮ್ಮದ್ ಫೈಜಾನ್ ಬದುಕುಳಿ ಯುವುದೇ ಎಂಬ ಆತಂಕ ಉಂಟಾ ಗಿತ್ತು. ದೇವರು ದೊಡ್ಡವನು ಮಗು ಸುರಕ್ಷಿತವಾಗಿದೆ~ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

`ಬುಧವಾರ ನಮ್ಮ ಪ್ರದೇಶದ ಅಂಗನವಾಡಿ ಕೇಂದ್ರದಲ್ಲಿ ರೋಗ ನಿರೋಧಕ ಲಸಿಕೆ ಹಾಕಿಸಿಕೊಂಡು ಬಂದೆವು. ಸಂಜೆಯವರೆಗೂ ಚೆನ್ನಾಗಿದ್ದ ಮಗುವಿಗೆ ವಾಂತಿಭೇದಿ ಶುರುವಾ ಯಿತು. ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ ಮಧ್ಯರಾತ್ರಿ ವೇಳೆಗೆ ಮಗುವಿನ ಸ್ಥಿತಿ ಗಂಭೀರವಾಗುತ್ತ ಸಾಗಿತು. ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ದೆವು. ಬೆಳಿಗ್ಗೆ ಬಳ್ಳಾರಿಗೆ ಕರೆದೊಯ್ಯು ವಂತೆ ಹಿರಿಯ ವೈದ್ಯರು ಸಲಹೆ ನೀಡಿದ್ದರಿಂದ ಇಲ್ಲಿಗೆ ಕರೆತರಲಾಯಿತು~ ಎಂದು ಶಮೀಮ್ ತಿಳಿಸಿದರು.

ಈ ಮಗುವಿನ ಜತೆಗೇ ಲಸಿಕೆ ಹಾಕಿಸಿಕೊಂಡ ಇತರ ಎರಡು ಮಕ್ಕಳು ಅಸುನೀಗಿವೆ. ಇನ್ನೊಂದು ಮಗು ಹೊಸಪೇಟೆಯಲ್ಲೇ ಚಿಕಿತ್ಸೆ ಪಡೆಯುತ್ತಿದೆ ಎಂದು ಮಗುವಿನ ಸಂಬಂಧಿಗಳು ತಿಳಿಸಿದರು.

ಮಕ್ಕಳ ಉತ್ತಮ ಆರೋಗ್ಯದ ಹಿನ್ನೆಲೆಯಲ್ಲಿ ಲಸಿಕೆ ಹಾಕಿಸಲಾಗಿದೆ. ಆ ಲಸಿಕೆಯಿಂದ ಆರೋಗ್ಯದಲ್ಲಿ ಏರುಪೇರಾ ಗುತ್ತದೆ ಎಂಬುದು ತೀವ್ರ ಗಾಬರಿ ಮೂಡಿಸಿದೆ ಎಂದೂ ಅವರು ಅಚ್ಚರಿ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಯವರೂ ಆಸ್ಪತ್ರೆಗೆ ಭೇಟಿ ನೀಡಿ ಮಗುವಿನ ಆರೋಗ್ಯ ವಿಚಾರಿಸಿದ್ದಾರೆ. ಈ ರೀತಿಯ ಘಟನೆ ಗಳು ನಡೆಯದಂತೆ ಸೂಕ್ತ ಎಚ್ಚರಿಕೆಕೆ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಆತಂಕ ಬೇಡ: ಹೊಸಪೇಟೆಯಲ್ಲಿ ಗುರುವಾರ ಬೆಳಗಿನಜಾವ ಸಂಭವಿ ಸಿರುವ ಮಕ್ಕಳ ಸಾವಿನ ಪ್ರಕರಣಕ್ಕೆ ಲಸಿಕೆ ಹಾಕಿರುವುದು ಕಾರಣವಲ್ಲ. ಬದಲಿಗೆ, ಡಯೇರಿಯಾ ಮತ್ತು ಕಲುಷಿತ ನೀರು ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ ಎಂದು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ತಿಳಿಸಿದ್ದಾರೆ.

ಮಕ್ಕಳು ವಾಸಿಸುವ ಹೊಸಪೇಟೆಯ ರಾಜಾಜಿ ನಗರದಲ್ಲಿ ಸ್ವಚ್ಛತೆಯ ಕೊರತೆ ಇದೆ. ಆ ಪ್ರದೇಶ ಕೊಳೆಗೇರಿಯಾಗಿದ್ದು, ಗಲೀಜು ತುಂಬಿಕೊಂಡಿದೆ. ಬಹುಶಃ ಸ್ವಚ್ಛತೆಯ ಕೊರತೆ ಮತ್ತು ಕಲುಷಿತ ನೀರು ಮಕ್ಕಳು ಅಸ್ವಸ್ಥರಾಗಲು ಕಾರಣವಾಗಿದೆ. ಅಲ್ಲದೆ, ಇಬ್ಬರು ಮಕ್ಕಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಡಯೇರಿಯಾದಿಂದ ಸಾವು ಸಂಭವಿಸಿದೆ ಎಂಬ ವರದಿ ಬಂದಿದೆ ಎಂದು ಅವರು `ಪ್ರಜಾ ವಾಣಿ~ಗೆ ತಿಳಿಸಿದ್ದಾರೆ.

ಬುಧವಾರ ಅಂಗನವಾಡಿ ಕೇಂದ್ರ ದಲ್ಲಿ ಒಟ್ಟು 24 ಮಕ್ಕಳಿಗೆ ಲಸಿಕೆ ಹಾಕ ಲಾಗಿದೆ. ಆ ಪೈಕಿ ಕೇವಲ ನಾಲ್ಕು ಮಕ್ಕಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಮೃತ ಸಂಧ್ಯಾ ಪುರುಷೋತ್ತಮ್ ಎಂಬ ಮಗುವಿಗೆ ಈ ಮುಂಚೆಯೂ ಅನೇಕ ಬಾರಿ ಲಸಿಕೆ ಹಾಕಿಸಲಾಗಿದೆ ಎಂದು ಹೇಳಿದ್ದಾರೆ.

ಮಕ್ಕಳಿಗೆ ಹಾಕಲಾಗಿರುವ ಲಸಿಕೆಯ ಮಾದರಿಯನ್ನೂ ಸಂಗ್ರಹಿಸಲಾಗಿದ್ದು, ಪರೀಕ್ಷೆಗಾಗಿ ಕಳುಹಿಸಲಾಗಿದೆ. ಈ ಪ್ರದೇಶದ ಸ್ವಚ್ಛತೆಗೆ ಆದೇಶಿಸಲಾಗಿದೆ. ನಗರಸಭೆ ಈ ರೀತಿಯ ಕೊಳೆಗೇರಿಗಳಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳು ವಂತೆ ಸೂಚಿಸಲಾಗಿದೆ. ಸ್ವಚ್ಛತೆ ಕಾರ್ಯ ಆರಂಭ ವಾಗಿದೆ ಎಂದು ವಿವರಿಸಿದ್ದಾರೆ.

ರೋಗನಿರೋಧಕ ಲಸಿಕೆಗಳನ್ನು ಮಕ್ಕಳ ಉತ್ತಮ ಆರೋಗ್ಯದ ದೃಷ್ಟಿಯಿಂದ ನೀಡಲಾಗುತ್ತದೆ. ಮಕ್ಕಳ ಅಸ್ವಸ್ಥತೆಗೆ ಹಾಗೂ ಸಾವಿಗೆ ಕಾರಣ ಕಂಡುಕೊಳ್ಳಲಾಗುತ್ತಿದೆ. ಪಾಲಕರು ಲಸಿಕೆಗಳ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.