ವಿಜಯಪುರ(ದೇವನಹಳ್ಳಿ): 1.5 ವರ್ಷಕ್ಕೆ 178 ಪದಾರ್ಥಗಳನ್ನು ಗುರುತಿಸುವ ಪಟ್ಟಣದ ಪ್ರಮಾಣ್ ವೃಷಭ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದಾನೆ.
ಹಣ್ಣು–ತರಕಾರಿ, ಬಣ್ಣ, ಮನುಷ್ಯನ ಅಂಗಾಂಗ, ವಿರುದ್ದಾರ್ಥಕ ಪದ, ಪ್ರಾಣಿ–ಪಕ್ಷಿ, ವಾಹನ ಸೇರಿ 178 ಪದಾರ್ಥಗಳನ್ನು ಗುರುತಿಸಿ ಅಲ್ಪವಯಸ್ಸಿನಲ್ಲಿಯೇ ಅಸಾಧಾರಣ ಬುದ್ಧಿಮತ್ತೆ ಹೊಂದಿರುವುದಕ್ಕೆ ಪ್ರಮಾಣ್ ವೃಷಭಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಮತ್ತು ಪ್ರಮಾಣ ಪತ್ರ ನೀಡಿದೆ.