ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾನೂನು ಅರಿವಿದ್ದರೆ ಉತ್ತಮ ಪ್ರಜೆ: ನ್ಯಾಯಾಧೀಶ ಸಲ್ಮಾ

Published : 11 ಆಗಸ್ಟ್ 2024, 15:18 IST
Last Updated : 11 ಆಗಸ್ಟ್ 2024, 15:18 IST
ಫಾಲೋ ಮಾಡಿ
Comments

ಆನೇಕಲ್: ತಾಲ್ಲೂಕಿನ ಇಂಡ್ಲವಾಡಿ ಗ್ರಾಮದಲ್ಲಿ ರಾಮಮನೋಹರ್‌ ಲೋಹಿಯಾ ಕಾನೂನು ಮಹಾವಿದ್ಯಾಲಯ, ತಾಲ್ಲೂಕು ಕಾನೂನು ಸೇವೆ ಸಮಿತಿ, ವಕೀಲರ ಸಂಘದ ವತಿಯಿಂದ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಲೇಜಿನ ವಿದ್ಯಾರ್ಥಿಗಳು ಎನ್‌ಎಸ್‌ಎಸ್‌ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಆನೇಕಲ್‌ ನ್ಯಾಯಾಲಯದ ನ್ಯಾಯಾಧೀಶ ಸಲ್ಮಾ ಮಾತನಾಡಿ, ವಿದ್ಯಾರ್ಥಿಗಳ ಓದಿನ ಜತೆಗೆ ಕಾನೂನು ಜ್ಞಾನ ಬೆಳೆಸಿಕೊಳ್ಳಬೇಕು. ಯುವಕರಲ್ಲಿ ಕಾನೂನು ಅರಿವಿದ್ದರೆ ಸಮಾಜದಲ್ಲಿ ಉತ್ತಮ ಪ್ರಜೆಗಳಾಗುತ್ತಾರೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಆರ್‌.ರಮೇಶ್‌ ಮಾತನಾಡಿ, ಯುವಶಕ್ತಿ ಈ ದೇಶದ ಆಸ್ತಿಯಾಗಿದ್ದಾರೆ. ಯುವಕರು ಸರಿಯಾದ ಮಾರ್ಗದಲ್ಲಿ ನಡೆಯುವುದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಗ್ರಾಮೀಣ ಪ್ರದೇಶದ ಜನರಲ್ಲಿ ಕಾನೂನು ಬಗ್ಗೆ ಜ್ಞಾನ ಮೂಡಿಸಲು ವಿದ್ಯಾರ್ಥಿಗಳು ಶ್ರಮಿಸಬೇಕು. ಜನರಲ್ಲಿ ಬಾಲ್ಯ ವಿವಾಹ, ವರದಕ್ಷಿಣೆ ಕಿರುಕುಳ, ಬಾಲಕಾರ್ಮಿಕ ಪದ್ಧತಿ, ಕಾರ್ಮಿಕರ ಕಾನೂನು ಬಗ್ಗೆ ವಿದ್ಯಾರ್ಥಿಗಳು ಜಾಗೃತಿ ಮೂಡಿಸಬೇಕು ಎಂದರು.

ರಾಮ ಮನೋಹರ ಲೋಹಿಯಾ ಕಾಲೇಜಿನ ಪ್ರಾಚಾರ್ಯರಾದ ಕೆ.ಕೆ.ವಿಜಯಲಕ್ಷ್ಮಿ ಮಾತನಾಡಿ, ಗ್ರಾಮೀಣ ಭಾಗದ ಬದುಕು ತಿಳಿಸಲು ಎನ್‌ಎಸ್‌ಎಸ್‌ ಶಿಬಿರ ಉಪಯುಕ್ತವಾಗಿದೆ. ಸ್ವಚ್ಛತೆ, ಜಾಗೃತಿ, ಶ್ರಮದಾನದಂತಹ ಕಾರ್ಯಕ್ರಮ ಶಿಬಿರದಲ್ಲಿ ಆಯೋಜಿಸಲಾಗಿದೆ. ಏಳು ದಿನಗಳ ಇಂಡ್ಲವಾಡಿಯಲ್ಲಿ ಶಿಬಿರ ಆಯೋಜಿಸಿದ್ದು ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ಭಾಗಿಯಾಗಿದ್ದಾರೆ ಎಂದರು.

ವಕೀಲರ ಸಂಘದ ಖಜಾಂಚಿ ಕೆ.ವಿ.ರವಿ, ಸರ್ಕಾರಿ ಅಭಿಯೋಜಕರಾದ ವಿನೋದ್‌ ಕುಮಾರ್‌, ಶಾಲಿನಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷ ಆದೂರು ಪ್ರಕಾಶ್‌, ಕಾಲೇಜಿನ ವಿಲಾಸಿನಿ, ವಿನುತ ಅರುಣ್‌ ಇದ್ದರು.

ಆನೇಕಲ್ ತಾಲ್ಲೂಕಿನ ಇಂಡ್ಲವಾಡಿ ಗ್ರಾಮದಲ್ಲಿ ರಾಮಮನೋಹರ್ ಲೋಹಿಯಾ ಕಾನೂನು ಮಹಾವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ನ್ಯಾಯಾಧೀಶರಾದ ಸಲ್ಮಾ ಉದ್ಘಾಟಿಸಿದರು
ಆನೇಕಲ್ ತಾಲ್ಲೂಕಿನ ಇಂಡ್ಲವಾಡಿ ಗ್ರಾಮದಲ್ಲಿ ರಾಮಮನೋಹರ್ ಲೋಹಿಯಾ ಕಾನೂನು ಮಹಾವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ನ್ಯಾಯಾಧೀಶರಾದ ಸಲ್ಮಾ ಉದ್ಘಾಟಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT