ಬುಧವಾರ, ಜುಲೈ 28, 2021
20 °C

ಎಸಿಬಿ ಬಲೆಗೆ ಬೆಸ್ಕಾಂ ಸಿಬ್ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನೇಕಲ್: ಮೀಟರ್‌ ಬದಲಾಯಿಸಲು ಲಂಚದ ಬೇಡಿಕೆಯಿಟ್ಟಿದ್ದ ಬೆಸ್ಕಾಂ ಎಇ ನಂಜುಂಡಸ್ವಾಮಿ ಮತ್ತು ಮೀಟರ್‌ ರೀಡರ್‌ ರಾಜೇಶ್‌ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಪಟ್ಟಣದ ಪ್ರಕಾಶ್‌ ಎಂಬುವವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಎಸಿಬಿ ಡಿವೈಎಸ್ಪಿ ಗೋಪಾಲ್‌ ಡಿ. ಜೋಗಿ ಮತ್ತು ಇನ್‌ಸ್ಪೆಕ್ಟರ್‌ಗಳಾದ ಕುಮಾರಸ್ವಾಮಿ ಮತ್ತು ಮಧುಕರ್‌ ಅವರು ದಾಳಿ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದರು.

ಪ್ರಕಾಶ್‌ ಅವರಿಂದ ಮೀಟರ್‌ ರೀಡರ್‌ ರಾಜೇಶ್‌ ₹ 65 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ.ಪಟ್ಟಣದ ಪ್ರಕಾಶ್‌ ಎಂಬುವವರು
ತಮ್ಮ ಮನೆಗೆ ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದಿದ್ದು ಈ ಮಾಹಿತಿ ಪಡೆದ ಆರೋಪಿಗಳು ₹ 1.85 ಲಕ್ಷ ದಂಡ ಕಟ್ಟುವಂತೆ ಪ್ರಕಾಶ್‌ಗೆ ತಿಳಿಸಿದ್ದರು. ಆದರೆ ಇಷ್ಟೊಂದು
ಹಣ ಕಟ್ಟಲು ಸಾಧ್ಯವಿಲ್ಲ ಎಂದಾಗ 65 ಸಾವಿರ ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.