ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಮಹಿಳೆಯ ಜೀವನೋಪಾಯ ಸುಧಾರಣೆಗೆ ಒತ್ತು ನೀಡಲು ಸಲಹೆ

ಜಿಲ್ಲಾ ಪಾಲುದಾರರ ಸಮಾಲೋಚನಾ ಸಭೆ
Last Updated 1 ನವೆಂಬರ್ 2021, 4:20 IST
ಅಕ್ಷರ ಗಾತ್ರ

ದೇವನಹಳ್ಳಿ:ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಯೋಗದೊಂದಿಗೆ ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಯು.ಎನ್.ಡಿ.ಪಿ.ನಿಂದ ಜಿಲ್ಲಾ ಪಾಲುದಾರರ (ಮಧ್ಯಸ್ಥಗಾರರ) ಸಮಾಲೋಚನಾ ಸಭೆ ನಡೆಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್ ಮಾತನಾಡಿ,ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ನೋಂದಾಯಿತರಾಗಿರುವ ಸುಮಾರು 5,110 ಸ್ವಸಹಾಯ ಗುಂಪುಗಳಿಗೆ ಬೇಡಿಕೆ ಆಧಾರಿತ ತರಬೇತಿ ನೀಡಲಾಗುವುದು ಎಂದರು.

ಉತ್ಪಾದಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯಗಳು ಹಾಗೂ ಇನ್ನಿತರೆ ಅತ್ಯಗತ್ಯ ಸೌಲಭ್ಯ ನೀಡಲಾಗುವುದು. ಗ್ರಾಮೀಣ ಮಹಿಳೆಯ ಜೀವನೋಪಾಯವನ್ನು ಸುಧಾರಣೆಗೆ ತರಲು ಎಲ್ಲಾ ಪೂರಕ ಇಲಾಖೆಗಳು, ಖಾಸಗಿ ಕಂಪನಿಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಕಾರ ಒದಗಿಸಬೇಕು. ಯು.ಎನ್.ಡಿ.ಪಿ.ಯಿಂದ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಕಾರ್ಯಾಗಾರ ಆಯೋಜಿಸಲಾಗಿದ್ದು, ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ರಾಷ್ಟ್ರೀಯ ಜೀವನೋಪಾಯ ಅಭಿಯಾನದ ನಿರ್ದೇಶಕಿ ಮಂಜುಶ್ರೀ ಎನ್. ಮಾತನಾಡಿ, ರಾಜ್ಯ ಸರ್ಕಾರವು ವೃತ್ತಿ ಮಾರ್ಗದರ್ಶನ, ತರಬೇತಿ ಮತ್ತು ಉದ್ಯೋಗದ ವರ್ಧನೆಗಾಗಿ ಕೌಶಲ ಮತ್ತು ಉದ್ಯಮಶೀಲತಾ ಕಾರ್ಯಪಡೆಯನ್ನು ರಚಿಸಿದೆ ಎಂದರು.

ಉದ್ಯಮಶೀಲತೆಯ ಅವಕಾಶ ಸೃಷ್ಟಿಸಲು ಮಾರ್ಗಸೂಚಿ ಹೊಂದಿದೆ. ಟಾಸ್ಕ್‌ಫೋರ್ಸ್‌ನ ಉದ್ದೇಶಗಳು ಯುವಕರನ್ನು ಡಿಜಿಟಲ್ ಕೌಶಲ ಮತ್ತು 21ನೇ ಶತಮಾನಕ್ಕೆ ಸಂಬಂಧಿತ ಕೌಶಲದೊಂದಿಗೆ ಉದ್ಯಮಶೀಲತೆಯ ಮನಸ್ಥಿತಿಯೊಂದಿಗೆ ಸಜ್ಜುಗೊಳಿಸಲಾಗುವುದು ಎಂದು ತಿಳಿಸಿದರು.

ಮುಂದಿನ ಪೀಳಿಗೆಯನ್ನು ಭವಿಷ್ಯದ ಕೆಲಸಕ್ಕಾಗಿ ಸಿದ್ಧಪಡಿಸಲು ಉದ್ದೇಶಿಸಲಾಗಿದೆ. ಡಿಜಿಟಲ್ ಮತ್ತು ಉದ್ಯಮಶೀಲ ಆಧಾರಿತ ಮಾದರಿಗಳನ್ನು ವೃತ್ತಿ ಸಮಾಲೋಚನೆ ಮತ್ತು ಇಂಟರ್ನ್‌ಶಿಪ್, ಅನುಭವದ ಮೋಡ್‌ನೊಂದಿಗೆ ಒಳಗೊಂಡಿದೆ. ಬೆಂಗಳೂರು ಗ್ರಾಮಾಂತರ, ಮೈಸೂರು, ಕೊಪ್ಪಳ, ರಾಯಚೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಉದ್ಯಮ ಪ್ರತ್ಯೇಕತೆ ಕೇಂದ್ರಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಭವಿಷ್ಯದ ಉದ್ಯೋಗ ಮತ್ತು ಉದ್ಯಮಶೀಲತೆಗಾಗಿ ಯುವಕರು ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಯೋಜನೆಯು ಕಾರ್ಯ ನಿರ್ವಹಿಸುತ್ತಿದೆ. ಬಹು ಮಧ್ಯಸ್ಥಗಾರರು ಮತ್ತು ಕಾರ್ಯಪಡೆಯ ವಿಷಯಾಧಾರಿತ ಕ್ಷೇತ್ರಗಳ ನಡುವೆ ಒಮ್ಮುಖ ರಚಿಸಲು ಮಧ್ಯಸ್ಥಗಾರರ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ಡಾ.ನಾಗರಾಜ್, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಮಧು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಟರಾಜ್, ಜಿಲ್ಲಾ ಸಂಜೀವಿನಿ, ಜಿಲ್ಲಾ ಅಭಿಯಾನ ನಿರ್ವಹಣಾ ಘಟಕದ ವ್ಯವಸ್ಥಾಪಕ ಅಶೋಕ ವೈ.ಎಸ್., ಸರ್ಕಾರಿ, ಖಾಸಗಿ ವಲಯ, ಉದ್ಯಮ ಸಂಘಗಳು, ಉದ್ಯೋಗದಾತರು, ವಿದ್ಯಾರ್ಥಿಗಳು ಮತ್ತು ಶಿಕ್ಷಣ ತಜ್ಞರು ಸೇರಿದಂತೆ ಮಾರ್ಗದರ್ಶಕರು, ವಿವಿಧ ಎನ್‌ಜಿಒ ಪ್ರತಿನಿಧಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT