ದೊಡ್ಡಬಳ್ಳಾಪುರ: ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪರೀಕ್ಷಾರ್ಥವಾಗಿ ಥರ್ಮಕೋಲ್ ಬಳಸಿ ತಯಾರಿಸಿದ ವಿಮಾನ ಮಾದರಿಯ ಡ್ರೋನ್ ಪಾಲನಜೋಗಹಳ್ಳಿಯ ಮನೆ ಬಳಿ ಬಿದ್ದಿದೆ.

ಹಾರುತ್ತಾ ಬಂದ ಡ್ರೋನ್ ಏಕಾಏಕಿ ನಗರದ ಹೊರವಲಯದಲ್ಲಿರುವ ಪಾಲನಜೋಗಹಳ್ಳಿಯ 10ನೇ ಕ್ರಾಸ್ ಬಳಿ ಬಿದ್ದಿದೆ. ಡ್ರೋನ್ ಕಂಡು ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಡ್ರೋನ್ ವಶಕ್ಕೆ ಪಡೆದಿದ್ದಾರೆ. ತಜ್ಞರಿಂದ ಪರಿಶೀಲನೆ ನಡೆಸಲಾಗಿದ್ದು, ಥರ್ಮಕೋಲ್ ಬಳಿಸಿ ವಿಮಾನ ಮಾದರಿಯಲ್ಲಿ ರಚಿಸಲಾಗಿರುವ ಡ್ರೋನ್ ಇದಾಗಿದೆ ಎಂದು ಅವರು ತಿಳಿಸಿದ್ದಾರೆ. ಡ್ರೋನ್ಗೆ ಬಳಸುವ ರೀತಿಯಲ್ಲಿ ಬ್ಯಾಟರಿಗಳು ಸೇರಿದಂತೆ ಎಲೆಕ್ಟ್ರಿಕ್ ವೈರ್ ಗಳಿಂದ ತುಂಬಿದೆ ಎನ್ನಲಾಗಿದೆ.

ಈ ಕುರಿತಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳು ರಚಿಸಿ, ಪರೀಕ್ಷಾರ್ಥವಾಗಿ ಹಾರಿಸಿದ ವೇಳೆ, ಸಂಪರ್ಕ ಕಡಿತಗೊಂಡು ಬಿದ್ದಿರಬಹುದು ಎಂದು ಪೊಲೀಸರು ಅನುಮಾನ ಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.