ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಆಶಯಗಳು ಈಡೇರಲಿ: ಜಿಗಣಿ ಶಂಕರ್

ಪರಿನಿರ್ವಾಣ ದಿನದ ಅಂಗವಾಗಿ ಕೋರೆಗಾಂವ್ ಚಲೋ ಕಾರ್ಯಕ್ರಮ
Last Updated 5 ಡಿಸೆಂಬರ್ 2019, 12:59 IST
ಅಕ್ಷರ ಗಾತ್ರ

ವಿಜಯಪುರ: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯಗಳನ್ನು ನೆರವೇರಿಸಬೇಕಾಗಿರುವ ಹೊಣೆಗಾರಿಕೆ ದೇಶದ ಪ್ರತಿಯೊಬ್ಬ ಪ್ರಜೆಯ ಮೇಲಿದೆ ಎಂದು ರಿಪಬ್ಲಿಕ್ ಸೇನೆ ರಾಜ್ಯ ಘಟಕದ ಅಧ್ಯಕ್ಷ ಜಿಗಣಿ ಶಂಕರ್ ಹೇಳಿದರು.

ಇಲ್ಲಿನ ಪಕ್ಷದ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಅಂಗವಾಗಿ ಕೋರೆಗಾಂವ್ ಚಲೋ ಕಾರ್ಯಕ್ರಮಕ್ಕೆ ಚಾಲನೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಆಧುನಿಕ ಭಾರತದ ಪಿತಾಮಹ ಡಾ.ಬಿ.ಆರ್. ಅಂಬೇಡ್ಕರ್ ಅವರು ಭಾರತದಲ್ಲಿ ಸಾಮಾಜಿಕ ಕ್ರಾಂತಿಯನ್ನು ಹುಟ್ಟುಹಾಕಿ ದಲಿತ ಸಮುದಾಯದ ಏಳಿಗೆಗಾಗಿ, ಸಮಾನತೆಗಾಗಿ ನಡೆಸಿದ ಚಿಂತನೆಗಳು, ಹೋರಾಟಗಳು ಚಿರಸ್ಮರಣೀಯವಾಗಿವೆ. ಅವರು ನಡೆದು ಬಂದ ಕಷ್ಟದ ದಾರಿಯಲ್ಲಿ ಇಡೀ ಭಾರತವೇ ಗುರುತಿಸುವ ವ್ಯಕ್ತಿಯಾಗಿ ಸಮಾಜದ ಹಿಂದುಳಿದವರ ದೀನ ದಲಿತರ ಸಮಗ್ರ ಅಭಿವೃದ್ಧಿಗೆ ಅವರು ಹಾಕಿ ಕೊಟ್ಟಿರುವ ಭದ್ರ ಬುನಾದಿಯ ಪರಿಣಾಮ ಇಂದು ದಲಿತರು ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಸಾಧ್ಯವಾಗಿದೆ ಎಂದರು.

ಅಹಿಂಸಾತ್ಮಕ ಆಂದೋಲನಗಳ ಮುಂದಾಳತ್ವ ವಹಿಸಿ ಅಸ್ಪೃಶ್ಯರಿಗೆ ದೇವಾಲಯ ಪ್ರವೇಶದ ಹಕ್ಕು, ಸಾರ್ವಜನಿಕ ಕೆರೆ, ಬಾವಿಗಳಿಂದ ನೀರು ಸೇದುವ ಹಕ್ಕು ಇತ್ಯಾದಿಗಳಿಗಾಗಿ ಹೋರಾಡಿದರು. ವಿಶ್ವದ ಬಹಳ ವಿಸ್ತಾರವಾದ ಅತಿ ದೊಡ್ಡ ಸಂವಿಧಾನ ರಚಿಸಿದ ಮಹಾನ್ ಚೇತನ ಅಂಬೇಡ್ಕರ್ ಎಂದರು.

ಮುಖಂಡ ಕನ್ನಹಳ್ಳಿ ಕೃಷ್ಣಪ್ಪ ಮಾತನಾಡಿ, ಬಾಬಾ ಸಾಹೇಬರ ಸಾಧನೆಗಳು, ಅವರಲ್ಲಿದ್ದ ಸಮಾಜದ ಹಿತ ಕಾಪಾಡುವಂತಹ ತುಡಿತವನ್ನು ಸಮಾಜಕ್ಕೆ ತಿಳಿವಳಿಕೆ ನೀಡಬೇಕೆನ್ನುವ ಉದ್ದೇಶದಿಂದ ಅವರ ಪರಿನಿರ್ವಾಣ ಆಚರಣೆ ಮಾಡುತ್ತೇವೆ. ಅಂಬೇಡ್ಕರ್ ಅವರ ಕೊನೆಯ ಆಸೆಯಂತೆ 1956 ಆಕ್ಟೋಬರ್ 14 ರಂದು ನಾಗಪುರದಲ್ಲಿ 5 ಲಕ್ಷ ಜನ ಅನ್ಯಾಯಕ್ಕೆ ಒಳಗಾಗಿದ್ದಾಗ ಬೌದ್ಧ‌ ಧರ್ಮ ಸ್ವೀಕಾರ ಮಾಡಿದರು ಎಂದು ವಿವರಿಸಿದರು.

ಆ ಧರ್ಮ ಎಲ್ಲ ಧರ್ಮಗಳ ಶ್ರೀಮಂತ ವಿಚಾರಗಳಿರುವ ಧರ್ಮವಾಗಿದೆ. ಅವರು ತೋರಿಸಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಬೇಕಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶ ಆಶಯ, ಸಿದ್ಧಾಂತಗಳನ್ನು ಪಾಲನೆ ಮಾಡಬೇಕು ಎಂದು ಹೇಳಿದರು. ರಿಪಬ್ಲಿಕನ್ ಸೇನೆಯ ಪದಾಧಿಕಾರಿಗಳು, ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT