ಆನೇಕಲ್: ಕನ್ನಡ ಸಾಹಿತ್ಯ ಪರಿಷತ್ ಆನೇಕಲ್ ಘಟಕ ತಾಲ್ಲೂಕಿನ ಚಂದಾಪುರ ಸುರಾನಾ ವಿದ್ಯಾಲಯ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ವೇಧವತಿ.ಬಿ.ರಾವ್ ಅವರು ರಚಿಸಿರುವ ‘ಸಂಜೆ ಬಾನಿನ ಬಣ್ಣ’ ಕವನ ಸಂಕಲನ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಲೇಖಕಿ ಡಾ.ಪದ್ಮಿನಿ ನಾಗರಾಜು ಮಾತನಾಡಿ, ಮನುಷ್ಯ ಧರ್ಮಕ್ಕಿಂತ ಶ್ರೇಷ್ಠವಾದ ಧರ್ಮ ಇನ್ನೊಂದಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಮಾನವೀಯತೆಯನ್ನು ಜೀವನದ ಭಾಗವನ್ನಾಗಿಸಿಕೊಳ್ಳಬೇಕು. ಕುವೆಂಪುರವರು ತಮ್ಮ ಸಾಹಿತ್ಯದಲ್ಲಿ ವಿಶ್ವ ಮಾನವತೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ. ಯುವಕರು ಬಿಡುವಿನ ವೇಳೆಯಲ್ಲಿ ಮೋಜು ಮಸ್ತಿಯನ್ನು ಕಡಿಮೆಗೊಳಿಸಿ ಕುವೆಂಪುರವರ ವಿಚಾರಧಾರೆಗಳನ್ನು ತಿಳಿದುಕೊಳ್ಳುವ ಬಗ್ಗೆ ಗಮನಹರಿಸಬೇಕು ಎಂದರು.

ನಗರೀಕರಣದ ಪ್ರಭಾವ ಮತ್ತು ಮೊಬೈಲ್ ಹಾವಳಿಯಿಂದ ಇತ್ತೀಚಿನ ದಿನಗಳಲ್ಲಿ ಸಾಹಿತ್ಯಪ್ರಿಯರು ಕಡಿಮೆಯಾಗುತ್ತಿದ್ದಾರೆ. ಇದರಿಂದ ಸಾಹಿತ್ಯ ಚಟುವಟಿಕೆಗಳು ಕಡಿಮೆಯಾಗುತ್ತಿದೆ. ಶಾಲಾ ಕಾಲೇಜುಗಳಲ್ಲಿ ಸಾಹಿತ್ಯ ಪ್ರೇಮ ಅಭಿವೃದ್ಧಿಗೊಳಿಸಲು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದರು.

ಸುರಾನ ಕಾಲೇಜಿನ ಪ್ರಾಚಾರ್ಯ ಡಾ.ಲೋಕೇಶ್, ಚಂದಾಪುರ ಪುರಸಭಾ ಅಧ್ಯಕ್ಷ ಶಾರದಾ ವರದರಾಜು, ಮುಖಂಡರಾದ ಇಗ್ಗಲೂರು ಬಾಲರಾಜು, ಮುನಿ ತಿಮ್ಮಾರೆಡ್ಡಿ, ಲೇಖಕರಾದ ಚಿಲಿಪಿಲಿ ಸಂತೋಷ್, ಅಥಾವುಲ್ಲಾ, ಸಲ್ಮಾ, ಚುಟುಕು ಶಂಕರ್, ಕನ್ನಡ ಸಾಹಿತ್ಯ ಪರಿಷತ್ ಆನೇಕಲ್ ಘಟಕದ ಅಧ್ಯಕ್ಷ ಆದೂರು ಪ್ರಕಾಶ್, ಅಪ್ಸರ್ ಅಲಿ ಖಾನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.