ಆನೇಕಲ್: ಸೂಕ್ತ ಬೆಲೆ ನಿಗದಿಗಾಗಿ ಆಗ್ರಹಿಸಿ ಬೆಂಗಳೂರು ಜೆಸಿಬಿ, ಟಿಪ್ಪರ್ ಮಾಲೀಕರ ಸಂಘದಿಂದ ತಾಲ್ಲೂಕಿನಾದ್ಯಂತ ಪ್ರತಿಭಟನೆ ನಡೆಸಿದರು. ಕಳೆದ ಎರಡು ದಿನಗಳಿಂದ ಜೆಸಿಬಿ, ಟಿಪ್ಪರ್, ಟ್ರಾಕ್ಟರ್, ಇಟಾಚಿ ಮಾಲೀಕರು ತಮ್ಮ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸುವ ಮೂಲಕ ಬೆಲೆ ಏರಿಕೆಗೆ ಆಗ್ರಹಿಸಿದರು.

ಪಟ್ಟಣದ ಕಾವಲಹೊಸಹಳ್ಳಿ ರಸ್ತೆ, ತಾಲ್ಲೂಕಿನ ಸರ್ಜಾಪುರ, ಚಂದಾಪುರ, ಅತ್ತಿಬೆಲೆಗಳಲ್ಲಿ ಜೆಸಿಬಿ, ಟಿಪ್ಪರ್ ಮತ್ತು ಟ್ರ್ಯಾಕ್ಟರ್ ಮಾಲೀಕರು ತಮ್ಮ ಕೆಲಸಗಳನ್ನು ಸ್ಥಗಿತಗೊಳಿಸಿ ಒಂದೆಡೆ ನಿಲ್ಲಿಸಿ ಪ್ರತಿಭಟನೆ ನಡೆಸಿದರು. ವಿಶಾಲ ಬಯಲಿನಲ್ಲಿ ಟಿಪ್ಪರ್, ಜೆಸಿಬಿ ವಾಹನಗಳನ್ನು ನಿಲ್ಲಿಸಲಾಗಿತ್ತು. ಆನೇಕಲ್ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜೆಸಿಬಿಗಳ ಮೆರವಣಿಗೆ ನಡೆಸಿದರು.

ವಾಹನಗಳ ಬಳಕೆಗೆ ಬೆಲೆ ನಿಗದಿ ಪಡಿಸಲಾಗಿದ್ದು ಜೆಸಿಬಿ ಒಂದು ಗಂಟೆಗೆ ₹1,200, ಟಿಪ್ಪರ್ ಒಂದು ದಿನದ ಬಾಡಿಗೆ ₹700, ಜೆಸಿಬಿ ಬ್ರೇಕರ್ಸ್ ಒಂದು ಗಂಟೆಗೆ ₹1,600 ಏರಿಕೆ ಮಾಡಲಾಗಿದೆ. ಗ್ರಾಹಕರು ಈ ಬೆಲೆ ಅನುಸರಿಸಬೇಕು. ಹಾಗಾಗಿ ಅವರಲ್ಲಿ ಜಾಗೃತಿ ಮೂಡಿಸಲು ಪ್ರತಿಭಟನೆಯ ಮೊರೆ ಹೋಗಿದ್ದೇವೆ ಜೆಸಿಬಿ ಮಾಲೀಕರು ತಿಳಿಸಿದರು.

ಅಪಾರ್ಟ್ಮೆಂಟ್ಗಳ ನಿರ್ಮಾಣ ಮಾಡುವವರ ಮತ್ತು ಬಿಲ್ಡರ್ಸ್ಗಳು ತಮಿಳುನಾಡು, ಆಂಧ್ರಪ್ರದೇಶದ ಟಿಪ್ಪರ್, ಜೆಸಿಬಿಗಳನ್ನು ಬಳಸಿಕೊಂಡು ಕೆಲಸವನ್ನು ಮಾಡುತ್ತಿದ್ದಾರೆ. ಇದರಿಂದಾಗಿ ಸ್ಥಳೀಯ ಟಿಪ್ಪರ್, ಜೆಸಿಬಿ ಮಾಲೀಕರಿಗೆ ತೊಂದರೆಯಾಗುತ್ತದೆ. ವಾಹನಗಳ ಬೆಲೆಯು ಸಹ ಹೆಚ್ಚಾಗಿದೆ. ನಿರ್ವಹಣೆ ವೆಚ್ಚ ಹೆಚ್ಚಾಗಿದೆ. ಹಾಗಾಗಿ ಸಾರ್ವಜನಿಕರು ಸಹಕರಿಸಬೇಕು ಎಂದು ಬೆಂಗಳೂರು ಜೆಸಿಬಿ ಟಿಪ್ಪರ್ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.