ಆನೇಕಲ್: ಟಿಐಇಐ ಕಂಪನಿ ಮತ್ತು ಕೇರಿಂಗ್ ವಿತ್ ಕಲರ್ಸ್ ಸ್ವಯಂಸೇವಾ ಸಂಸ್ಥೆಯಿಂದ ತಾಲ್ಲೂಕಿನ 14 ಸರ್ಕಾರಿ ಶಾಲೆಗಳಿಗೆ ಕಲಿಕಾ ಉಪಕರಣ ವಿತರಿಸಲಾಯಿತು.

ತಾಲ್ಲೂಕಿನ ಜಿಗಣಿ ಸಮೀಪದ ಕೋನಸಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು.

ಟಿಐಇಐ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಯಶು ಶಿಶುನೋ, ಸುಸ್ಥಿರ ಅಭಿವೃದ್ಧಿಗಾಗಿ ಸರ್ಕಾರಿ ಶಾಲೆಗಳ ಬಲವರ್ಧನೆ ಮುಖ್ಯವಾದುದು. ಖಾಸಗಿ ಶಾಲೆಗಳಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳು ಸರ್ಕಾರಿ ಶಾಲೆಗಳಲ್ಲಿ ದೊರೆಯುವಂತಾಗಬೇಕು. ಇದರಿಂದ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಂಸ್ಥೆಯಿಂದ ಉಜ್ವಲ ಭವಿಷ್ಯಕ್ಕೆ ಕಲಿಕಾ ವರ್ಧನ ಕಾರ್ಯಕ್ರಮದಡಿಯಲ್ಲಿ ಕಲಿಕಾ ಪರಿಕರ ವಿತರಿಸಲಾಗಿದೆ. ಅಭ್ಯಾಸ, ಕಥಾ ಪುಸ್ತಕ ಸೇರಿದಂತೆ ಮಕ್ಕಳಿಗೆ ಅಗತ್ಯವಿರುವ ಪುಸ್ತಕಗಳನ್ನು ವಿತರಿಸಲಾಗಿದೆ. ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪುಸ್ತಕಗಳ ಓದುವ ಅಭ್ಯಾಸ ಮಾಡಿಸಬೇಕು ಎಂದರು.

ಕೇರಿಂಗ್ ವಿಥ್ ಕಲರ್ಸ್ ಸಂಸ್ಥೆಯ ಟ್ರಸ್ಟಿ ರಾಜೀವ್ ಅನ್ನಲ್ಲೂರು, ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ತಾಲೂಕಿನ 14 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಕಲಿಕಾ ಪರಿಕರ ವಿತರಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರು ಡಯಟ್ ಉಪನ್ಯಾಸಕ ಗಂಗಪ್ಪ ಗೌಡ, ಟಯೋಟ ಕಂಪನಿಯ ಸಿಎಸ್ಆರ್ ಮುಖ್ಯಸ್ಥ ರಾಘವೇಂದ್ರ, ಶಿಕ್ಷಣ ಸಂಯೋಜಕ ಶಿವಣ್ಣ, ಸಮೂಹ ಸಂಪನ್ಮೂಲ ವ್ಯಕ್ತಿ ಪರಿಮಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.