ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಹಾಕ್ ಈಗಲ್ ಮಾರ್ಷಿಯಲ್ ಆರ್ಟ್ಸ್ ಅಕಾಡೆಮಿ ಮತ್ತು ಶಿಟೋ ರಿಯೋ ಕರಾಟೆ ದೋ ಇಂಡಿಯಾ ಸಂಸ್ಥೆ ಆಯೋಜಿಸಿದ್ದ 9ನೇ ರಾಷ್ಟ್ರೀಯ ಮಾರ್ಷಲ್ ಆರ್ಟ್ಸ್ ಚಾಂಪಿಯನ್‌ಶಿಪ್‌ನಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಪಟ್ಟಣದ ಹಾಕ್ ಈಗಲ್ ಮಾರ್ಷಿಯಲ್ ಆರ್ಟ್ಸ್‌ನ ಮನೋಜ್ ಕುಮಾರ್, ಹೇಮಂತ್ ಕುಮಾರ್, ರೋಹನ್ ಅವರು ಬ್ಲಾಕ್ ಬೆಲ್ಟ್ ಸಾಧನೆ ಮಾಡಿದರು. ಪ್ರವೀಣ್, ತೇಜಸ್, ರಂಜಿತ್, ಸುಮಾ, ಸುನಿಲ್ ಅವರು ನೇಪಾಳದಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.