ಭಾನುವಾರ, ಆಗಸ್ಟ್ 14, 2022
25 °C

ದೊಡ್ಡಬಳ್ಳಾಪುರ: ತರಕಾರಿ ತ್ಯಾಜ್ಯಕ್ಕೆ ಕೆರೆ ಅಂಗಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ತಾಲ್ಲೂಕಿನ ಮೆಣಸಿ ಕೆರೆ ಅಂಗಳದಲ್ಲಿ ತರಕಾರಿ ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದೆ. ಇದರಿಂದ ನೀರು ಕಲುಷಿತಗೊಳ್ಳುತ್ತಿದೆ.  ಜಲಚರಗಳು ಸಾಯುವ ಅಪಾಯ ಎದುರಾಗಿದೆ ಎಂದು ಯುವ ಸಂಚಲನ ತಂಡದ ಅಧ್ಯಕ್ಷ ಚಿದಾನಂದ ತಿಳಿಸಿದರು.

ಮೆಣಸಿ ಕೆರೆ ನಗರಕ್ಕೆ ಸಮೀಪ ಇರುವುದರಿಂದ ತರಕಾರಿ, ಕೋಳಿ ಹಾಗೂ ಹಳೆ ಬಟ್ಟೆಗಳ ತಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಇದರಿಂದಾಗಿ ನೀರಿನಲ್ಲಿ ಇರುವ ಮೀನು, ಕಪ್ಪೆ ಸೇರಿದಂತೆ ಇತರೆ ಜಲಚರ ಪ್ರಾಣಿಗಳು ಸಾಯುತ್ತಿವೆ. ಕೆರೆ ಅಂಗಳದ ನೀರಿನಲ್ಲಿರುವ ಮೀನು, ಇತರೆ ಪ್ರಾಣಿಗಳನ್ನು ತಿನ್ನಲು ಬರುವ ಕೊಕ್ಕರೆಗಳ ಕಾಲುಗಳಿಗೆ ಪ್ಲಾಸ್ಟಿಕ್‌ ದಾರಗಳು ಸುತ್ತಿಕೊಂಡು ಮರದಲ್ಲಿ ಕುಳಿತಾಗ ರಂಬೆಗಳಿಗೆ ಸಿಕ್ಕಿಹಾಕಿಕೊಂಡು ಪ್ರಾಣ ಕಳೆದುಕೊಳ್ಳುತ್ತಿವೆ. ಮೆಣಸಿ ಕೆರೆ ಅಂಗಳದಲ್ಲಿ ಜಾಲಿ ಮರಗಳು ಹೆಚ್ಚಾಗಿರುವುದರಿಂದ ಕೊಕ್ಕರೆಗಳ ಕಾಲಿನಲ್ಲಿರುವ ದಾರ ಮುಳ್ಳುಗಳಿಗೆ ಸಿಕ್ಕಿಹಾಕಿಕೊಂಡು ಹಾರಲು ಆಗದೆ ಪ್ರಾಣ ಬಿಡುತ್ತಿವೆ ಎಂದರು.

ಅರಣ್ಯ ಇಲಾಖೆ ಅಧಿಕಾರಿಗಳು, ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೆರೆ ಸ್ವಚ್ಛತೆ ಕಡೆಗೆ ಗಮನ ನೀಡಬೇಕು ಎಂದು
ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು