ಕುಣಿಗಲ್: ತಾಲ್ಲೂಕಿನ ಹೇರೂರು ಗ್ರಾಮದ ಬಳಿ ಸೋಮವಾರ ಬಿಜಿಎಸ್ ಶಾಲಾ ಬಸ್‌ನಿಂದ ಬಿದ್ದ ವಿದ್ಯಾರ್ಥಿ ಮೇಲೆ ಹಿಂಬದಿ ಚಕ್ರ ಹರಿದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕಟ್ಟಿಗೆಹಳ್ಳಿ ರಾಮಕೃಷ್ಣ ಅವರ ಪುತ್ರ ಮೋಹಿತ್ (9) ಮೃತ ವಿದ್ಯಾರ್ಥಿ. ಶಾಲೆ ಮುಗಿದ ನಂತರ ಶಾಲಾ ವಾಹನದಲ್ಲಿ ಗ್ರಾಮಕ್ಕೆ ಹಿಂತಿರುಗುವ ವೇಳೆ ಬಾಗಿಲು ಕಳಚಿ ಕೆಳಗೆ ಬಿದ್ದಿದ್ದಾನೆ. ಈ ವೇಳೆ ತಲೆ ಮೇಲೆ ಹಿಂಬದಿ ಚಕ್ರ ಹರಿದಿದೆ. ಬಸ್ ಚಾಲಕ ಸದಾನಂದ ಪರಾರಿಯಾಗಿದ್ದಾನೆ.
ಶಾಲಾ ಆಡಳಿತ ಮಂಡಳಿ ಮತ್ತು ಚಾಲಕನ ನಿರ್ಲಕ್ಷ್ಯ ಖಂಡಿಸಿ ಪೋಷಕರು, ಸಂಬಂಧಿಕರು ಮತ್ತು ಗ್ರಾಮಸ್ಥರು ಶಾಲೆ ಮುಂಭಾಗದ ಹಳೆ ರಾಷ್ಟ್ರೀಯ ಹೆದ್ದಾರಿ–48ರಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಭೇಟಿ ನೀಡಿದ ಮಂಗಳಾನಂದನಾಥ ಸ್ವಾಮೀಜಿ, ಇಂತಹ ಘಟನೆ ಮರುಕಳಿಸದಂತೆ ಕ್ರಮಕೈಗೊಳ್ಳುವ ಭರವಸೆ ನೀಡುವಂತೆ ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.