ದೇವನಹಳ್ಳಿ (ಬೆಂ.ಗ್ರಾಮಾಂತರ): ಬ್ರೆಜಿಲ್ನಿಂದ ಗುರುವಾರ ರಾತ್ರಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನ ಸೂಟ್ಕೇಸ್ನಿಂದ ಕಸ್ಟಮ್ಸ್ ಅಧಿಕಾರಿಗಳು ₹38.60 ಕೋಟಿ ಮೌಲ್ಯದ 7.72 ಕೆ.ಜಿ ಕೊಕೇನ್ ಜಪ್ತಿ ಮಾಡಿದ್ದಾರೆ.

ಸುಲಭವಾಗಿ ಯಾರಿಗೂ ಕಾಣದಂತೆ ಸೂಟ್ಕೇಸ್ ಒಳಗಡೆ ಪದರು, ಪದರುಗಳಾಗಿ ಕೊಕೇನ್ ಅಂಟಿಸಲಾಗಿತ್ತು. ಸೂಟ್ಕೇಸ್ನಲ್ಲಿದ್ದ ಮಕ್ಕಳ ಕಾಮಿಕ್ ಪುಸ್ತಕಗಳ ಒಳಗೂ ಅಪಾರ ಪ್ರಮಾಣದ ಕೊಕೇನ್ ಮುಚ್ಚಿಡಲಾಗಿತ್ತು.

ತಪಾಸಣೆ ವೇಳೆ ಆರೋಪಿಯು ಕಸ್ಟಮ್ಸ್ ಅಧಿಕಾರಿಗಳ ಕಣ್ತಪ್ಪಿಸಲು ಹಲವು ತಂತ್ರಗಳನ್ನು ಬಳಸಿದ. ಆದರೆ, ಅಧಿಕಾರಿಗಳ ಸೂಕ್ಷ್ಮ ತಪಾಸಣೆ ನಂತರ ಕಳ್ಳ ಸಾಗಣೆ ಪತ್ತೆಯಾಯಿತು.

ಜಪ್ತಿ ಮಾಡಲಾದ ಕೊಕೇನ್ ಉತ್ತಮ ಗುಣಮಟ್ಟದ್ದಾಗಿದ್ದು, ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಅಂದಾಜು ಮೌಲ್ಯ ₹38.60 ಕೋಟಿ ಎಂದು ಮೂಲಗಳು ತಿಳಿಸಿವೆ.

ಆರೋಪಿಯನ್ನು ಬಂಧಿಸಿ ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರಿದಿದೆ.

₹3.14 ಕೋಟಿ ಮೌಲ್ಯದ 9 ಕೆ.ಜಿ ಹೈಡ್ರೊ ಗಾಂಜಾ ಜಪ್ತಿ

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ತಡರಾತ್ರಿ ಬ್ಯಾಂಕಾಕ್ನಿಂದ ಬಂದ ಪ್ರಯಾಣಿಕನಿಂದ ವೈಮಾನಿಕ ಗುಪ್ತಚರ ಸಿಬ್ಬಂದಿ 8.98 ಕೆ.ಜಿ. ಹೈಡ್ರೊ ಗಾಂಜಾ ವಶಪಡಿಸಿಕೊಂಡಿದ್ದಾರೆ. ಜಪ್ತಿ ಮಾಡಿದ ಗಾಂಜಾ ಮೌಲ್ಯ ಸುಮಾರು ₹3.14 ಕೋಟಿ ಎಂದು ಅಂದಾಜಿಸಲಾಗಿದೆ. ಬ್ಯಾಂಕಾಕ್ನಿಂದ ಬೆಂಗಳೂರಿಗೆ ಗಾಂಜಾ ಕಳ್ಳಸಾಗಣೆ ನಡೆಸುತ್ತಿರುವ ವ್ಯವಸ್ಥಿತ ಜಾಲದ ಬಗ್ಗೆ ತೀವ್ರ ನಿಗಾವಹಿಸಿದ್ದ ಗುಪ್ತಚರ ಸಿಬ್ಬಂದಿ ತಪಾಸಣೆಯನ್ನು ಇನ್ನಷ್ಟು ಬಿಗಿಗೊಳಿಸಿದ್ದ ಪರಿಣಾಮವಾಗಿ ಈ ಕಳ್ಳಸಾಗಣೆ ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ವಿರುದ್ಧ ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.