ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 30ಕೋಟಿ ಮೌಲ್ಯದ ಕೊಕೇನ್ ವಶ: ಬಂಧನ

Published 29 ಮೇ 2023, 20:18 IST
Last Updated 29 ಮೇ 2023, 20:18 IST
ಅಕ್ಷರ ಗಾತ್ರ

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಫ್ರಿಕಾದ ಲೈಬೀರಿಯನ್‌ ಮೂಲದ 38 ವರ್ಷದ ಮಹಿಳೆಯೊಬ್ಬರು ₹30ಕೋಟಿ ಮೌಲ್ಯದ 2ಕೆ.ಜಿ ಕೊಕೇನ್‌ ಮಾದಕ ವಸ್ತುವನ್ನು ಅಕ್ರಮವಾಗಿ ಬ್ಯಾಗ್‌ನಲ್ಲಿ ಇರಿಸಿ ಸಾಗಿಸುತ್ತಿದ್ದ ವೇಳೆ ಕಂದಾಯ ಗುಪ್ತಚರ ದಳ (ಡಿಆರ್‌ಐ)ಕ್ಕೆ ಸಿಕ್ಕಿ ಬಿದ್ದಿದ್ದಾರೆ.

ಈಚೆಗೆ ಇಲ್ಲಿನ ವಿಮಾನ ನಿಲ್ದಾಣಕ್ಕೆ ಇಥಿಯೋಪಿಯಾ ಏರ್‌ಲೈನ್ಸ್ ಮೂಲಕ ಭಾರತೀಯ ಪ್ರವಾಸಿ ವೀಸಾ ಪಡೆದು ಬಂದಿದ್ದ ಮಹಿಳೆ, ಕೊಕೇನ್‌ ಅಕ್ರಮ ಸಾಗಣೆಗೆ ಸಂಚು ರೂಪಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಫ್ರಿಕಾದಿಂದ ನೇರವಾಗಿ ಬೆಂಗಳೂರಿಗೆ ದೊಡ್ಡಮಟ್ಟದಲ್ಲಿ ಕೊಕೇನ್‌ ಸಾಗಣೆ ಮಾಹಿತಿ ದೊರೆತ ತಕ್ಷಣ ಬೆಂಗಳೂರಿನ ಕಂದಾಯ ಗುಪ್ತಚರ ದಳದ ಸಿಬ್ಬಂದಿ, ಮಹಿಳೆಯ ಕಪ್ಪುಬಣ್ಣದ ಸೂಟ್‌ ಪರಿಶೀಲಿಸಿದಾಗ ಕೊಕೇನ್ ಪತ್ತೆಯಾಗಿದೆ. 

ತಪಾಸಣೆ ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದ ಮಹಿಳೆ, ಇದೇ ಮೊದಲ ಬಾರಿಗೆ ಭಾರತಕ್ಕೆ ಬರುತ್ತಿದ್ದು ಇಡೀ ದೇಶವನ್ನು ಪ್ರವಾಸ ಮಾಡಲು ಪ್ರವಾಸಿ ವೀಸಾ ಪಡೆಯಲಾಗಿದೆ ಎಂದು ಹೇಳಿದ್ದಾರೆ.

ಆರೋಪಿ ವಿರುದ್ಧ ಮಾದಕ ವಸ್ತುಗಳ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT