ಬುಧವಾರ, ಮಾರ್ಚ್ 29, 2023
27 °C

ಕಾರಿನ ಮೇಲೆ ಬಿದ್ದ ಕಾಂಕ್ರೀಟ್‌ ಲಾರಿ: ತಾಯಿ, ಮಗಳು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ಕಗ್ಗಲಿಪುರ ಕ್ರಾಸ್‌ ಬಳಿ ಬುಧವಾರ ಬೆಳಿಗ್ಗೆ ರಸ್ತೆಯಲ್ಲಿ ಹೊರಟಿದ್ದ ಕಾರಿನ ಮೇಲೆ ಎದುರಿನಿಂದ ಬಂದ ಕಾಂಕ್ರೀಟ್‌ ಲಾರಿಯೊಂದು ಉರುಳಿಬಿದ್ದ ಬಿದ್ದ ಪರಿಣಾಮ ಕಾರಿನಲ್ಲಿದ್ದ ತಾಯಿ ಮತ್ತು ಮಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಕಾರಿನಲ್ಲಿದ್ದ ಗಾಯತ್ರಿ ಕುಮಾರ್‌ ಮತ್ತು ಅವರ ಮಗಳು ಸುಮತಾ ಕುಮಾರ್‌ ಮೃತ ದುರ್ದೈವಿಗಳು. ಬನ್ನೇರುಘಟ್ಟದ ಸಮೀಪದಲ್ಲಿರುವ ಗ್ರೀನ್‌ ಹುಡ್‌ ಹೈ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಗಳು ಸುಮತಾಳನ್ನು ತಾಯಿ ಗಾಯತ್ರಿ ತಮ್ಮ ಕಾರಿನಲ್ಲಿ ಶಾಲೆಗೆ ಬಿಡಲು ಹೊರಟಿದ್ದರು.

ಕಗ್ಗಲಿಪುರ ಕ್ರಾಸ್‌ ಬಳಿ ಬೆಳಗ್ಗೆ 8.30 ಗಂಟೆ ಸುಮಾರು ಎದುರಿನಿಂದ ಬಂದ ಕಾಂಕ್ರೀಟ್‌ ಲಾರಿ ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಕಾರಿನ ಮೇಲೆ ಉರುಳಿ ಬಿದ್ದಿದೆ. ಲಾರಿ ಅಡಿ ಸಿಲುಕಿ ತಾಯಿ ಮತ್ತು ಮಗಳು ಕಾರಿನಲ್ಲಿಯೇ ಅಪ್ಪಚ್ಚಿಯಾಗಿದ್ದಾರೆ. ಬನ್ನೇರುಘಟ್ಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು