ಶನಿವಾರ, ಡಿಸೆಂಬರ್ 4, 2021
20 °C

ಗುಣಾತ್ಮಕ ವೈದಕೀಯ ಶಿಕ್ಷಣಕ್ಕೆ ಆದ್ಯತೆ: ವೈದಕೀಯ ಶಿಕ್ಷಣ ಸಚಿವ ಸುಧಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಕೋಟೆ: ಮುಂದಿನ ದಿನಗಳಲ್ಲಿ ಗುಣಾತ್ಮಕ ರೀತಿಯ ವೈದಕೀಯ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ರಾಜ್ಯ ವೈದಕೀಯ ಶಿಕ್ಷಣ ಸಚಿವ ಸುಧಾಕರ್‌  ತಿಳಿಸಿದರು.

ನಗರದದ ಎಂ.ವಿ.ಜೆ ವೈದಕೀಯ ಕಾಲೇಜಿನಲ್ಲಿ ನೂತನವಾಗಿ ಪ್ರಾರಂಭವಾದ ಕೋವಿಡ್ ಪರೀಕ್ಷಾ ಪ್ರಯೋಗಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ 108ಬೇ ಘಟಕವನ್ನು ಈಗ ಪ್ರಾರಂಭಿಸಿದ್ದು, ಈಗ ಪ್ರತಿ ನಿತ್ಯ 75 ಸಾವಿರ ಪರೀಕ್ಷೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು ಒಂದು ಲಕ್ಷಕ್ಕೆ ಏರಿಸಲಾಗುತ್ತದೆ . ಎಂ.ವಿ, ಜೆ ವೈದಕೀಯ ಕಾಲೇಜಿನಲ್ಲಿ ಸ್ಥಾಪನೆಯಾಗಿರುವ ಪ್ರಯೋಗಾಲಯಕ್ಕೆ ₹ 1.6 ಕೋಟಿ ವೆಚ್ಚವಾಗಿದೆ. ಉಪಕರಣಗಳನ್ನು ಅಮೆರಿಕ, ಡೆನ್ಮಾರ್ಕ್‌ ಮತ್ತು ದಕ್ಷಿಣ ಕೊರಿಯಾದಿಂದ ಖರೀದಿಸಲಾಗಿದೆ ಎಂದು ಹೇಳಿದರು. 

ಇಂದಿನ ಸಮಯಕ್ಕೆ ವೈದಕೀಯ ಶಿಕ್ಷಣ ಅನಿವಾರ್ಯವಾಗಿದೆ. ವೈದಕೀಯ ಕಾಲೇಜುಗಳನ್ನು ಹೆಚ್ಚಿಸದೇ ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತದೆ. ವಿದೇಶದಲ್ಲಿರುವ ವೈದಕೀಯ ಶಿಕ್ಷಣದಂತಹ ಶಿಕ್ಷಣವನ್ನು ರಾಜ್ಯದಲ್ಲಿಯೂ ಜಾರಿಗೊಳಿಸಲಾಗುತ್ತದೆ. ಎಂ.ವಿ.ಜೆ ಆಸ್ಪತ್ರೆಯು ಕೊರೊನಾ ಪ್ರಾರಂಭವಾದಾಗಿನಿಂದ ಸರ್ಕಾರದೊಂದಿಗೆ ಸಹಕರಿಸುತ್ತಿದ್ದು, ಇಂತಹ ಆಸ್ಪತ್ರೆಗಳು ರಾಜ್ಯಕ್ಕೆ ಹೆಮ್ಮೆಯಾಗಿವೆ ಎಂದು ಶ್ಲಾಘಿಸಿದರು. 

ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಬಗ್ಗೆ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ತಡೆಯುವುದಕ್ಕಿಂತ ಮುನ್ನೆಚ್ಚರಿಕೆ ಮುಖ್ಯ. ಸಾರ್ವಜನಿಕರು ಮಾಸ್ಕ್ ಧರಿಸುವುದು, ಆಗಾಗ್ಗೆ ಕೈತೊಳೆಯುವುದು ಮತ್ತು ಅಂತರ ಕಾಪಾಡುವುದರ ಬಗ್ಗೆ ಗಮನಿಸಬೇಕು. ಕೊರೊನಾಗೆ ಲಸಿಕೆ ಬಂದ ಮೇಲೆ ಅದನ್ನು ತಡೆಯುವುದಕ್ಕೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳ:ಇದರು. 

‌ಶಾಸಕ ಶರತ್ ಬಚ್ಚೇಗೌಡ, ಕಾಲೇಜಿನ ಮುಖ್ಯಸ್ಥರಾದ ಡಾ.ಮೋಹನ್, ಸಿಇಒ ಡಾ. ಧರಣಿ ಮೋಹನ್, ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಮೋದ್, ಜಿಲ್ಲಾ ಪಂಚಾಯತಿ ಸದಸ್ಯ ಕೃಷ್ಣಮೂರ್ತಿ, ನಗರಸಭಾ ಸದಸ್ಯ ಕೇಶವ ಮೂರ್ತಿ, ರಾಕೇಶ್, ಗೌತಮ್ ಹಾಗೂ ಇತರರು ಭಾಗವಹಿಸಿದ್ದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು